ಬೆಂಗಳೂರು: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದ ಮೇಲೆ ನಮ್ಮ ದೇಶ ರಚನೆ ಆಗಿದೆ. ಆದರೆ ನೀವು ಕಾರ್ಪೊರೇಟ್ ಕಂಪನಿ, MNC ಬೇಕು ಅಂತೀರಾ ಎಂದು ಫ್ರೀಡಂ ಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
‘ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ; ಈ ದೇಶಕ್ಕಾಗಿ ನಮ್ಮ ಅಪ್ಪ ಅಮ್ಮನೂ ದುಡಿದಿದ್ದಾರೆ’
ಪ್ರತಿಭಟನಾನಿರತ ರೈತರ ಸಭೆಯಲ್ಲಿ ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ. ಈ ದೇಶಕ್ಕಾಗಿ ನಮ್ಮ ಅಪ್ಪ, ನಮ್ಮ ಅಮ್ಮನೂ ದುಡಿದಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಗೋಹತ್ಯೆ ತಡೆ ಕಾಯ್ದೆ ಬೇಕಾ ಬೇಡ್ವಾ ಎಂದು ನಾವು ನಿರ್ಧರಿಸ್ತೇವೆ. ಹಸು ಸಾಕುವುದು ಹೇಗೆಂದು ಬಸವನಗುಡಿ, ಜಯನಗರದವರು ಹೇಳಿಕೊಡುವ ಅಗತ್ಯವಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಅನ್ನದಾತರ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಿ. ಇಲ್ಲವಾದರೆ ರಾಜಧಾನಿ ಉಸಿರುಗಟ್ಟುವಂತೆ ಪ್ರತಿಭಟಿಸುತ್ತೇವೆ ಎಂದು ಫ್ರೀಡಂ ಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ರೈತರ ಪ್ರತಿಭಟನೆ ವೇಳೆ.. ಲುಂಗಿ-ಪೇಟ ಗೆಟಪ್ನಲ್ಲಿ, ನೇಗಿಲು ಹಿಡಿದು ‘ಫೀಲ್ಡ್’ಗಿಳಿದ ವಾಟಾಳ್!
Published On - 6:22 pm, Tue, 26 January 21