Live Updates | ಸಹಜ ಸ್ಥಿತಿಗೆ ಮರಳುತ್ತಿರುವ ದೆಹಲಿ | 26-01-2021

shruti hegde
|

Updated on:Jan 27, 2021 | 8:07 AM

Live Updates | ಸಹಜ ಸ್ಥಿತಿಗೆ ಮರಳುತ್ತಿರುವ ದೆಹಲಿ | 26-01-2021
ಪ್ರತಿಭಟನೆಯ ಬಳಿಕ ರಾಷ್ಟ್ರ ರಾಜಧಾನಿ ಸಹಜ ಸ್ಥಿತಿಗೆ ಮರಳುತ್ತಿದೆ.

ಟಿವಿ9 ಕನ್ನಡ ಡಿಜಿಟಲ್ ವತಿಯಿಂದ 72ನೇ ಗಣರಾಜ್ಯೋತ್ಸವದ ಶುಭಾಶಯಗಳು.. ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್​ಸೈಟ್​ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.

LIVE NEWS & UPDATES

The liveblog has ended.
  • 26 Jan 2021 08:22 PM (IST)

    ಹರಿಯಾಣದಲ್ಲಿ ಇಂಟರ್​​ನೆಟ್, ಎಸ್​ಎಂಎಸ್​ ಸೇವೆ ಸ್ಥಗಿತ

    08:22 pm ಹರಿಯಾಣದ ಸೋನಿಪತ್, ಪಾಲ್ವಾಲ್, ಝಜ್ಜರ್ ಜಿಲ್ಲೆಗಳಲ್ಲಿ ಇಂಟರ್​​ನೆಟ್, ಎಸ್​ಎಂಎಸ್​ ಸೇವೆ ಸ್ಥಗಿತ ಮಾಡಲಾಗಿದೆ.  ನಾಳೆ ಸಂಜೆ 5 ಗಂಟೆಯವರೆಗೆ ಇಂಟರ್​​ನೆಟ್ ಸೇವೆ ಸ್ಥಗಿತವಾಗಿರಲಿದೆ.  ಸೇವೆ ಸ್ಥಗಿತಗೊಳಿಸುವುದಾಗಿ ಹರಿಯಾಣ ಸರ್ಕಾರ ಮಾಹಿತಿ ನೀಡಿದೆ.

  • 26 Jan 2021 07:41 PM (IST)

    ರಾಜ್ಯದಲ್ಲಿಂದು ಹೊಸದಾಗಿ 529 ಜನರಿಗೆ ಕೊರೊನಾ ದೃಢ

    ರಾಜ್ಯದಲ್ಲಿಂದು ಹೊಸದಾಗಿ 529 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ, ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆ 9,36,955ಕ್ಕೆ ಏರಿಕೆಯಾಗಿದೆ.  ಇಂದು ಕೊರೊನಾ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ಈ ಮೂಲಕ, ರಾಜ್ಯದಲ್ಲಿ ಈವರೆಗೆ ಕೊರೊನಾಗದಿಂದ ಮರಣಿಸಿರುವವರ ಸಂಖ್ಯೆ 12,204 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 9,18,099 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 6,633 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

  • 26 Jan 2021 07:37 PM (IST)

    ರಾಜಸ್ಥಾನದ 17 ಜಿಲ್ಲೆಗಳಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ

    ರಾಜಸ್ಥಾನದ 17 ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ರಾಜಸ್ಥಾನದಲ್ಲಿ ಇದುವರೆಗೆ 6,849 ಪಕ್ಷಿಗಳು ಸಾವನ್ನಪ್ಪಿವೆ. 2020ರ ಡಿಸೆಂಬರ್ 25ರಿಂದ ಈವರೆಗೆ 6,849 ಪಕ್ಷಿಗಳು ಮೃತಪಟ್ಟಿವೆ. ಈ ಬಗ್ಗೆ ರಾಜಸ್ಥಾನ ಪಶುಸಂಗೋಪನಾ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

  • 26 Jan 2021 06:55 PM (IST)

    18 ಪೊಲೀಸರಿಗೆ ಗಾಯ, ಒಬ್ಬರ ಪರಿಸ್ಥಿತಿ ಗಂಭೀರ

    ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ, ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ಸಂಘರ್ಷ ಏರ್ಪಟ್ಟಿತ್ತು. ನವದೆಹಲಿಯಲ್ಲಿ ಪೊಲೀಸರು, ರೈತರ ನಡುವೆ ಜಟಾಪಟಿ ಉಂಟಾಗಿತ್ತು. ಈ ವೇಳೆ 18 ಪೊಲೀಸರಿಗೆ ಗಾಯವಾಗಿದ್ದು, ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • 26 Jan 2021 06:50 PM (IST)

    ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರಪತಿ ಭವನದಲ್ಲಿ ಔತಣ ಕೂಟ

    ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರಪತಿ ಭವನದಲ್ಲಿ ಔತಣ ಕೂಟ ಏರ್ಪಡಿಸಲಾಗಿದೆ. ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹಿತ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

  • 26 Jan 2021 06:45 PM (IST)

    ಸಹಜ ಸ್ಥಿತಿಗೆ ಮರಳುತ್ತಿರುವ ದೆಹಲಿ

    ದೆಹಲಿಯ ಐಟಿಒ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು. ಇದೀಗ ಐಟಿಒ ಪ್ರದೇಶದಲ್ಲಿ ವಾಹನಗಳ ಸಂಚಾರ ಪುನಾರಂಭವಾಗಿದೆ. ದೆಹಲಿಯಲ್ಲಿ ಮೆಟ್ರೋ ರೈಲು ಸೇವೆ ಕೂಡ ಪುನಾರಂಭವಾಗಿದೆ. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್‌ನಿಂದ ಮಾಹಿತಿ ಲಭ್ಯವಾಗಿದೆ.

  • 26 Jan 2021 06:37 PM (IST)

    ಶಿವಸೇನೆ ರೈತರ ಪರವಾಗಿದೆ. ಆದರೆ ಇಂದು ನಡೆದ ದುರ್ಘಟನೆಯನ್ನು ವಿರೋಧಿಸುತ್ತದೆ

    ಶಿವಸೇನೆ ರೈತರ ಪರವಾಗಿದೆ. ಆದರೆ, ಇಂದು ನಡೆದ ದುರ್ಘಟನೆಯನ್ನು ವಿರೋಧಿಸುತ್ತದೆ. ಇವತ್ತು ರಾಷ್ಟ್ರ ಹೆಮ್ಮೆ ಪಡುವಂಥಾ ದಿನ. ಈ ದಿನ ಪ್ರಜಾಪ್ರಭುತ್ವಕ್ಕೆ ಈ ರೀತಿ ಅಪಮಾನವಾದದ್ದು ನಿರಾಶಾದಾಯಕ ಎಂದು ಶಿವಸೇನಾ ನಾಯಕ, ಮಹಾರಾಷ್ಟ್ರ ಲೋಕಸಭಾ ಸದಸ್ಯ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ.

  • 26 Jan 2021 06:29 PM (IST)

    ಪೊಲೀಸರ ಗುಂಡೇಟಿನಿಂದ ರೈತ ಮೃತಪಟ್ಟಿಲ್ಲವೆಂದು ಸ್ಪಷ್ಟನೆ

    ರೈತನೊಬ್ಬನ ಸಾವಿನ ಬಗ್ಗೆ ದೆಹಲಿ ಪೊಲೀಸರಿಂದ ಸ್ಪಷ್ಟನೆ ದೊರಕಿದೆ. ದೆಹಲಿ ಟ್ರಾಕ್ಟರ್ ರ‍್ಯಾಲಿಯಲ್ಲಿ ಮೃತಪಟ್ಟಿರುವ ರೈತನು, ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ ಎಂದು ಹೇಳಲಾಗಿತ್ತು. ಆದರೆ, ಆತ ಪೊಲೀಸರ ಗುಂಡೇಟಿಗೆ ಬಲಿಯಾಗಿಲ್ಲ. ಬದಲಾಗಿ, ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟಿದ್ದಾನೆ ಎಂದು ಸ್ಪಷ್ಟನೆ ದೊರಕಿದೆ. ಪೊಲೀಸರು, ದೆಹಲಿಯ ಹಿಂಸಾಚಾರದ ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಿದ್ದಾರೆ. ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದರಿಂದ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ. ಟ್ರ್ಯಾಕ್ಟರ್‌ ಪಲ್ಟಿಯಾಗಿದ್ದರಿಂದ ಚಾಲಕ ಮೃತಪಟ್ಟಿದ್ದಾನೆ.

  • 26 Jan 2021 06:22 PM (IST)

    ತೀವ್ರರೂಪಕ್ಕೆ ತಿರುಗಿದ ಪ್ರತಿಭಟನೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ

    ತೀವ್ರರೂಪಕ್ಕೆ ತಿರುಗಿದ ಪ್ರತಿಭಟನೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗಿದೆ. ಯಾವುದೇ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ನಾನು ಪ್ರತಿಭಟನಾ ನಿರತ ರೈತರನ್ನು ಕೇಳಿಕೊಳ್ಳುತ್ತೇನೆ. ನಿಗದಿತ ಮಾರ್ಗಗಳ ಮೂಲಕ ಶಾಂತಿಯುತವಾಗಿ ಹಿಂತಿರುಗಲು ಕೇಳಿಕೊಳ್ಳುತ್ತೇನೆ ಎಂದು ದೆಹಲಿ ಪೊಲೀಸ್ ಕಮಿಷನರ್ ಎಸ್.ಎನ್. ಶ್ರೀವಾಸ್ತವ ಕೇಳಿಕೊಂಡಿದ್ದಾರೆ. ಹಲವು ಸುತ್ತಿನ ಮಾತುಕತೆಗಳ ಬಳಿಕ, ರೈತರ ಪ್ರತಿಭಟನಾ ಮಾರ್ಗದ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಆದರೆ, ರೈತರು ಈ ಪರಿಧಿಯನ್ನು ಮೀರಿ, ನಿಗದಿತವಲ್ಲದ ಮಾರ್ಗದಲ್ಲಿ ಟ್ರಾಕ್ಟರ್ ರ‍್ಯಾಲಿ ನಡೆಸಿದ್ದಾರೆ. ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಯಿಂದ ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

  • 26 Jan 2021 06:04 PM (IST)

    ಹೆಚ್ಚುವರಿ ಪೊಲೀಸರ ನಿಯೋಜನೆಗೆ ಅಮಿತ್ ಶಾ ಸಭೆಯಲ್ಲಿ ನಿರ್ಧಾರ

    ದೆಹಲಿಯಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

  • 26 Jan 2021 06:02 PM (IST)

    ದೆಹಲಿಯಲ್ಲಿ ಅರೆ ಸೇನಾಪಡೆ ನಿಯೋಜಿಸುವಂತೆ ಮನವಿ

    ದೆಹಲಿಯಲ್ಲಿ ಅರೆ ಸೇನಾಪಡೆ ನಿಯೋಜಿಸುವಂತೆ, ಕೇಂದ್ರ ಸರ್ಕಾರಕ್ಕೆ ದೆಹಲಿ ಪೊಲೀಸ್ ಆಯುಕ್ತರು ಮನವಿ ಸಲ್ಲಿಸಿದ್ದಾರೆ. 15 ಪ್ಯಾರಾ ಮಿಲಿಟರಿ ತುಕಡಿ ನಿಯೋಜಿಸುವಂತೆ ಪೊಲೀಸರು ಮನವಿ ನೀಡಿದ್ದಾರೆ. ರೈತರ ಪ್ರತಿಭಟನೆ ಹತ್ತಿಕ್ಕುವಂತೆಯೂ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

  • 26 Jan 2021 06:00 PM (IST)

    ಎಲ್ಲಾ ರೈತರು ದೆಹಲಿಯಿಂದ ಗಡಿಭಾಗಕ್ಕೆ ಹಿಂತಿರುಗುವಂತೆ ಒತ್ತಾಯಿಸುತ್ತೇನೆ

    ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿಕೆ

    ದೆಹಲಿಯಲ್ಲಿ ನಡೆದಿರುವ ಹಿಂಸಾಚಾರ ಸ್ವೀಕಾರಾರ್ಹವಲ್ಲ. ರೈತರು ಈವರೆಗೆ ನಡೆಸಿದ ಶಾಂತಿಯುತ ಪ್ರತಿಭಟನೆಗೆ ಇದು ಕಪ್ಪುಚುಕ್ಕೆಯಾಗಿದೆ. ರೈತ ಮುಖಂಡರು ಟ್ರಾಕ್ಟರ್ ರ‍್ಯಾಲಿಯನ್ನು ಹಿಂಪಡೆದಿದ್ದಾರೆ. ಎಲ್ಲಾ ರೈತರು ದೆಹಲಿಯಿಂದ ಗಡಿಭಾಗಕ್ಕೆ ಹಿಂತಿರುಗುವಂತೆ ನಾನು ಒತ್ತಾಯಿಸುತ್ತೇನೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿಕೆ ನೀಡಿದ್ದಾರೆ.

  • 26 Jan 2021 05:47 PM (IST)

    ದೆಹಲಿಯಲ್ಲಿ ನಡೆದ ಘಟನೆಯನ್ನು ಯಾರೂ ಬೆಂಬಲಿಸುವುದಿಲ್ಲ: ಶರದ್ ಪವಾರ್

    ಆದರೆ, ದುರ್ಘಟನೆಯ ಹಿಂದಿರುವ ಕಾರಣವನ್ನು ಕೂಡ ತಿರಸ್ಕರಿಸುವಂತಿಲ್ಲ

    ಇಂದು ದೆಹಲಿಯಲ್ಲಿ ನಡೆದ ವಿದ್ಯಾಮಾನವನ್ನು ಯಾರೂ ಕೂಡ ಬೆಂಬಲಿಸುವುದಿಲ್ಲ. ಆದರೆ, ಈ ದುರ್ಘಟನೆಯ ಹಿಂದಿರುವ ಕಾರಣವನ್ನು ಕೂಡ ತಿರಸ್ಕರಿಸುವಂತಿಲ್ಲ. ಇಷ್ಟು ದಿನ ತಣ್ಣಗೆ ಕುಳಿತಿದ್ದವರು ಈಗ ಸಿಟ್ಟಿಗೆದ್ದಿದ್ದಾರೆ. ಕೇಂದ್ರವು ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿಲ್ಲ. ಸರ್ಕಾರ ಪ್ರಬುದ್ಧವಾಗಿ ನಡೆದುಕೊಳ್ಳಬೇಕು. ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.

  • 26 Jan 2021 05:42 PM (IST)

    ಐಟಿಒ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ

    ಐಟಿಒ ಪ್ರದೇಶದಲ್ಲಿ ನೂರಾರು ರೈತರು ಸೇರಿರುವ ಹಿನ್ನೆಲೆ

    ದೆಹಲಿಯ ಐಟಿಒ ಪ್ರದೇಶದಲ್ಲಿ ನೂರಾರು ರೈತರು ಸೇರಿದ್ದಾರೆ. ರೈತರನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರೈತರನ್ನು ಮರಳಿ ಹೋಗುವಂತೆ ಮನವೊಲಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್​, ಸಂಸತ್​ ಭವನ ಹಾಗೂ ಇಂಡಿಯಾ ಗೇಟ್​ ಬಳಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ನಿಯಂತ್ರಣಕ್ಕೆ ಐಟಿಒ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

  • 26 Jan 2021 05:37 PM (IST)

    ದೆಹಲಿ ಕೆಂಪುಕೋಟೆಯಲ್ಲಿರೈತರಿಂದ ಬಾವುಟ ಹಾರಾಟ; ಅಮಿತ್ ಶಾ ತುರ್ತು ಸಭೆ

    ದೆಹಲಿಯ ಕೆಂಪುಕೋಟೆಯಲ್ಲಿ ರೈತರಿಂದ ಬಾವುಟ ಹಾರಾಟ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ತುರ್ತು ಸಭೆ ಏರ್ಪಡಿಸಿದ್ದಾರೆ. ಅಮಿತ್ ಶಾ, 3 ಸುತ್ತಿನ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅಮಿತ್ ಶಾ ನಿವಾಸಕ್ಕೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

  • 26 Jan 2021 04:43 PM (IST)

    ತಮಿಳುನಾಡಿನಲ್ಲಿ ರೈತರ ಪ್ರತಿಭಟನೆ: ಲಾಠಿ ಚಾರ್ಜ್ ಮಾಡಿ ರೈತರನ್ನು ಚದುರಿಸಿದ ಪೊಲೀಸರು

    ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಬೆಂಬಲಿಸಿ ಚನ್ನೈನಲ್ಲೂ ರೈತರು ನಿರಶನ ನಡೆಸುತ್ತಿದ್ದಾರೆ. ತಮಿಳುನಾಡಿನ ತಂಜಾವೂರ ಡೆಲ್ಟಾ ಪ್ರದೇಶದಲ್ಲಿ ರೈತರ ಪ್ರತಿಭಟನೆ ಕಿಚ್ಚು ಹೆ್ಚ್ಚಾಗಿದ್ದು ರೈತರು ಮತ್ತು ಪೊಲೀಸರ ಮಧ್ಯ ವಾಗ್ವಾದ ನಡೆದಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿ ರೈತರನ್ನು ಚದುರಿಸುತ್ತಿದ್ದಾರೆ.

  • 26 Jan 2021 04:35 PM (IST)

    ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿರುವ ಬಗ್ಗೆ ಮಾಹಿತಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ತುರ್ತು ಸಭೆ

    ದೆಹಲಿಯಲ್ಲಿ ಕೆಂಪುಕೋಟೆ ಹೋರಾಟ ಹಿನ್ನೆಲೆಯಲ್ಲಿ, ದೆಹಲಿಯ ಕೆಂಪುಕೋಟೆಯಲ್ಲಿ ರೈತರ ಹೋರಾಟ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ತುರ್ತು ಸಭೆ ಕರೆದಿದ್ದಾರೆ. ಕಳೆದ ಅರ್ಧ ಗಂಟೆಯಿಂದ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸುತ್ತಿದ್ದಾರೆ.

  • 26 Jan 2021 04:13 PM (IST)

    ಕೆಂಪುಕೋಟೆಯಲ್ಲಿ 3 ಕಡೆ ಬಾವುಟ ಹಾರಿಸಿರುವ ರೈತರು

    ಕೆಂಪು ಕೋಟೆಯಲ್ಲಿ ಮತ್ತೆ ರೈತರು ಬಾವುಟ ಹಾರಿಸಿದ್ದಾರೆ. 3 ಕಡೆಗಳಲ್ಲಿ ರೈತರು ಬಾವುಟ ಹಾರಿಸಿದ್ದಾರೆ.

  • 26 Jan 2021 04:09 PM (IST)

    ಅತ್ತಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭ

    ಅತ್ತಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭ ನಡೆಯುತ್ತಿದೆ.

  • 26 Jan 2021 04:05 PM (IST)

    ವಾರದೊಳಗೆ ಕಾಯ್ದೆ ಹಿಂಪಡೆಯದಿದ್ದರೆ ಸಂಸತ್​ಗೆ ಮುತ್ತಿಗೆ ಹಾಕುವ ಎಚ್ಚರಿಕೆ!

    ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಡೆಸುತ್ತೇವೆ. ವಾರದೊಳಗೆ ಕಾಯ್ದೆ ವಾಪಸ್​ ಪಡೆಯದಿದ್ದರೆ, ಮುಂದಿನ ತಿಂಗಳು ಸಂಸತ್​ಗೆ ಮುತ್ತಿಗೆ ಹಾಕುತ್ತೇವೆ ಎಂದು ಬೆಂಗಳೂರಿನಲ್ಲಿ ಚಾಮರಸ ಮಾಲಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

  • 26 Jan 2021 03:59 PM (IST)

    ದೇಶದ ‌ಸಂವಿಧಾನಕ್ಕೆ ಅಪಾಯ ಬಂದೊದಗಿದೆ: ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

    ಈ ದೇಶದ ‌ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ನಮ್ಮ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗಿದೆ. ಇವತ್ತಿಗೆ ನಮ್ಮ ಹೋರಾಟ ನಿಲ್ಲಲ್ಲ. ನಮ್ಮ ಮುಂದಿನ ಹೋರಾಟ ದೊಡ್ಡ ಮಟ್ಟದಲ್ಲಿ ಇರುತ್ತದೆ. ಈ ದೇಶದ ಅಧಿಕಾರ ದಲಿತರು ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದ್ದಾರೆ.

  • 26 Jan 2021 03:52 PM (IST)

    ವಿಧಾನಪರಿಷತ್​ ಉಪಸಭಾಪತಿ ಸ್ಥಾನದ ಚುನಾವಣೆ ಹಿನ್ನೆಲೆ: BSY ನೇತೃತ್ವದಲ್ಲಿ ನಾಳೆ(ಜ.27) ಚರ್ಚೆ

    ವಿಧಾನಪರಿಷತ್​ ಉಪಸಭಾಪತಿ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ, ನಾಳೆ(ಜ.27) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ MLCಗಳ ಸಭೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆಯಲಿದೆ. ವಿಧಾನಪರಿಷತ್​ನ ಸಭಾಪತಿ ಸ್ಥಾನದ ಬಗ್ಗೆಯೂ ನಾಳೆ ಚರ್ಚೆ ನಡೆಯಲಿದೆ.

  • 26 Jan 2021 03:43 PM (IST)

    ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ

    ದೆಹಲಿ ರಾಜಧಾನಿ ಪ್ರದೇಶದ ವಿವಿಧೆಡೆ ಇಂಟರ್ನೆಟ್​ ಸೇವೆ ಸ್ಥಗಿತಗೊಂಡಿದೆ. ರೈತರು ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ ನಂತರ ಈ ಕ್ರಮ ಬೆಳಕಿಗೆ ಬಂದಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

  • 26 Jan 2021 03:30 PM (IST)

    ದೆಹಲಿಯಲ್ಲಿ ಧರಣಿ ಮಾಡುವ ರೈತರು ಭಯೋತ್ಪಾದಕರು: ಕೃಷಿ ಸಚಿವ ಬಿ.ಸಿ ಪಾಟೀಲ್​

    ದೆಹಲಿಯಲ್ಲಿ ಪ್ರತಿಭಟನೆ ಮಾಡುವವರು ಅಂಪೂರ್ಣ ಭಯೋತ್ಪಾದಕರು. ಇವರಿಗೆ ಕಾಂಗ್ರೇಸ್​ನ ಬೆಂಬಲವಿದೆ. ಇವರಿಗೆ ಪಾಕಿಸ್ತಾನದ ಕುಮ್ಮಕ್ಕು ಇದೆ ಎಂದು ಕೊಪ್ಪಳದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್​ ಹೇಳಿಕೆ ನೀಡಿದ್ದಾರೆ.

  • 26 Jan 2021 03:21 PM (IST)

    ರೈತ ನಾಯಕರೊಂದಿಗೆ ಮಾತುಕತೆ ನಡೆಸಿದ ದೆಹಲಿ ಪೊಲೀಸ್ ಅಧಿಕಾರಿಗಳು

    ದೆಹಲಿ ಪೊಲೀಸ್ ಅಧಿಕಾರಿಗಳು ಸಹ ರೈತ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ನಗರದಿಂದ ವಾಪಸ್ ಹೋಗುವಂತೆ ಸೂಚಿಸಿದ್ದಾರೆ. ಅಧಿಕಾರಿಗಳ ಸೂಚನೆಯನ್ನು ರೈತರು ಒಪ್ಪಿಕೊಂಡಿದ್ದು, ಈ ಮೊದಲು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಗಳಿಗೆ ಹಿಂದಿರುಗುವ ನಿರ್ಧಾರ ಶೀಘ್ರ ಹೊರಬೀಳುವ ನಿರೀಕ್ಷೆಯಿದೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ಹೇಳಿವೆ.

  • 26 Jan 2021 03:20 PM (IST)

    ನಮ್ಮ ಕೆಲಸ ಮುಗಿಯಿತು, ಕೆಂಪುಕೋಟೆಯಿಂದ ವಾಪಸ್ ಹೋಗ್ತೀವಿ: ರೈತ ನಾಯಕರು

    ದೆಹಲಿ ಕೆಂಪುಕೋಟೆಯ ಮೇಲೆ ರೈತಧ್ವಜ ಹಾರಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಂದೇಶವೊಂದನ್ನು ರವಾನಿಸುವ ತುಡಿತವಿತ್ತು. ಇದೀಗ ಅದು ಈಡೇರಿದೆ. ನಾವು ವಾಪಸ್​ ಮೊದಲಿದ್ದ ಸ್ಥಳಕ್ಕೆ ಹೋಗ್ತೀವಿ ಎಂದು ರೈತ ನಾಯಕರು ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

  • 26 Jan 2021 03:18 PM (IST)

    ದೆಹಲಿ: ರೈತರ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಸಿಪಿಐ ಸಂಸದ ಭಟ್ಟಾಚಾರ್ಯ

    ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿ ಸಿಪಿಐ ಸಂಸದ ಭಟ್ಟಾಚಾರ್ಯ ಭಾಗಿಯಾಗಿದ್ದಾರೆ.

  • 26 Jan 2021 03:12 PM (IST)

    ಶಾಂತಿ ಕಾಪಾಡಲು ರೈತರಿಗೆ ಮನವಿ ಮಾಡಿ: ಜಂಟಿ ಪೊಲೀಸ್ ಆಯುಕ್ತ ಶಾಲಿನಿ ಸಿಂಗ್

    ಕೆಲವರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಂತಿ ಕಾಪಾಡಲು ಸಹಾಯ ಮಾಡಲು ರೈತ ಸಂಘಗಳಿಗೆ ಮನವಿ ಮಾಡಿ. ಗಣರಾಜ್ಯೋತ್ಸವದಂದು ಇದು ಶಾಂತಿಯುತ ಪ್ರತಿಭಟನೆಯಲ್ಲ ಎಂದು ನಂಗ್ಲೋಯಿ ಜಂಟಿ ಪೊಲೀಸ್ ಆಯುಕ್ತ ಶಾಲಿನಿ ಸಿಂಗ್ ಹೇಳಿದ್ದಾರೆ.

  • 26 Jan 2021 03:05 PM (IST)

    ನೆಲಮಂಗಲದಿಂದ ಹೊರಟ ರೈತರ ರ‍್ಯಾಲಿ, ಯಶವಂತಪುರ ರೈಲು ನಿಲ್ದಾಣ ತಲುಪಿದೆ

    ನೆಲಮಂಗಲದಿಂದ ಹೊರಟ ರೈತರ ರ‍್ಯಾಲಿ ಪೀಣ್ಯ ಮೆಟ್ರೋ ನಿಲ್ದಾಣ ತಲುಪಿದೆ. ಗೊರಗುಂಟೆ ಪಾಳ್ಯದಲ್ಲಿ ಪ್ರತಿಭಟನೆ ಸಾಗುತ್ತಿದ್ದು, ಯಶವಂತಪುರ ರೈಲು ನಿಲ್ದಾಣ ತಲುಪಿದೆ.

  • 26 Jan 2021 02:49 PM (IST)

    ದೆಹಲಿಯ ನಂಗ್ಲೋಯಿಯಲ್ಲಿ ಅಶ್ರುವಾಯು ಪ್ರಯೋಗ

    ದೆಹಲಿಯಲ್ಲಿ ರೈತರನ್ನು ಚದುರಿಸಲು ಟಿಯರ್ ಗ್ಯಾಸ್‌ ಬಳಸಲಾಗುತ್ತಿದೆ. ಟಿಯರ್ ಗ್ಯಾಸ್‌ ಬಳಸಿ ರೈತರನ್ನು ಪೊಲೀಸರು ಚದುರುಸುತ್ತಿದ್ದಾರೆ. ದೆಹಲಿಯ ನಂಗ್ಲೋಯಿಯಲ್ಲಿ ಅಶ್ರುವಾಯು ಪ್ರಯೋಗ ಮಾಡಲಾಗಿದೆ.

  • 26 Jan 2021 02:47 PM (IST)

    ಬೆಂಗಳೂರಿನ ಫ್ರೀಡಂಪಾರ್ಕ್​ ತಲುಪಿದ ಅನ್ನದಾತರ ರ‍್ಯಾಲಿ

    ಬೆಂಗಳೂರಿನ ಫ್ರೀಡಂಪಾರ್ಕ್​ಗೆ ಅನ್ನದಾತರ ರ‍್ಯಾಲಿ ತಲುಪಿದೆ. ಆನಂದರಾವ್​ ವೃತ್ತದ ಮೇಲ್ಸೇತುವೆ​ ಮೂಲಕ ರ‍್ಯಾಲಿ ಆಗಮನಗೊಂಡಿದೆ. ಮಹಿಳಾ ರೈತರು ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಬರುತ್ತಿದ್ದಾರೆ. ಭದ್ರತೆಯ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂತ್​ ಮಾಹಿತಿ ಪಡೆಯುತ್ತಿದ್ದಾರೆ.

  • 26 Jan 2021 02:35 PM (IST)

    ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪುಕೋಟೆಗೆ ರೈತರ ಮುತ್ತಿಗೆ: ಧ್ವಜಾರೋಹಣ ಮಾಡಿದ ರೈತರು

    ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡುವ ಸ್ಥಳಕ್ಕೆ ನುಗ್ಗಿ ರೈತರ ಧ್ವಜಾರೋಹಣ ಮಾಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪುಕೋಟೆಗೆ ರೈತರು ಮುತ್ತಿಗೆ ಹಾಕಿದ್ದಾರೆ.

  • 26 Jan 2021 02:15 PM (IST)

    ಕೆಂಪುಕೋಟೆಗೆ ನುಗ್ಗಿದ ರೈತರು

    ನವದೆಹಲಿಯ ಕೆಂಪುಕೋಟೆಗೆ ರೈತರು ನುಗ್ಗಿದ್ದಾರೆ. ಧ್ವಜಾರೋಹಣ ಸ್ಥಳಕ್ಕೆ ಧರಣಿ ನಿರತ ರೈತರು ನುಗ್ಗಿದ್ದಾರೆ. ಧ್ವಜಸ್ತಂಭ ಏರಿ ಮತ್ತೊಂದು ಬಾವುಟ ಹಾರಿಸಲು ಯತ್ನ ನಡೆಯುತ್ತದೆ. ಕಿಸಾನ್ ಯೂನಿಯನ್ ಧ್ವಜಾರೋಹಣಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.

  • 26 Jan 2021 02:15 PM (IST)

    ಯಾವುದೇ ಸಮಸ್ಯೆಗೆ ಹಿಂಸೆ ಪರಿಹಾರವಲ್ಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್

    ಯಾವುದೇ ಸಮಸ್ಯೆಗೆ ಹಿಂಸೆ ಪರಿಹಾರವಲ್ಲ. ಯಾರಿಗೇ ತೊಂದರೆಯಾದರೂ ನಷ್ಟವಾಗುವುದು ದೇಶಕ್ಕೆ. ಶಾಂತಿ ಕಾಪಾಡಲು ರೈತರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

  • 26 Jan 2021 01:58 PM (IST)

    ದೆಹಲಿಯಲ್ಲಿ 11 ಮೆಟ್ರೋ ನಿಲ್ದಾಣಗಳು ಸಂಪೂರ್ಣ ಬಂದ್!

    ದೆಹಲಿಯಲ್ಲಿನ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ 11 ಮೆಟ್ರೋ ನಿಲ್ದಾಣಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

  • 26 Jan 2021 01:50 PM (IST)

    ರೈತರ ಟ್ರ್ಯಾಕ್ಟರ್​ ರ‍್ಯಾಲಿಗೆ ಯಾದಗಿರಿಯಲ್ಲಿ ಭಾರಿ ಬೆಂಬಲ

    ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟದಲ್ಲಿ ರೈತರ ಟ್ರ್ಯಾಕ್ಟರ್​ ರ‍್ಯಾಲಿಗೆ ಯಾದಗಿರಿಯಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. 300ಕ್ಕೂ ಹೆಚ್ಚು ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳು ಪಾಲ್ಗೊಂಡಿವೆ. ವಡಗೇರಾ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಲಾಗುತ್ತಿದೆ.

  • 26 Jan 2021 01:47 PM (IST)

    ಪ್ರಾಮಾಣಿಕತೆ ಇದ್ದವರು ರೈತರನ್ನು ಬೆಂಬಲಿಸಬೇಕು: ಬಸವರಾಜ ಹೊರಟ್ಟಿ

    ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ಧರಣಿ ವಿಚಾರಕ್ಕೆ ಸಂಬಂಧಿಸಿದಂತೆ, ಸರ್ಕಾರ ಈ ವಿಚಾರದಲ್ಲಿ ಸ್ವಪ್ರತಿಷ್ಠೆಯನ್ನು ತೋರಿಸಬಾರದು. ಇದರಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.

  • 26 Jan 2021 01:41 PM (IST)

    ರೈತರ ಪ್ರತಿಭಟನೆಗೆ ಜೊತೆಗೂಡಿದ ಮಕ್ಕಳು

    ಶಾಲಾ‌ಮಕ್ಕಳಿಂದಲೂ ಪ್ರತಿಭಟನೆ ಆರಂಭಗೊಂಡಿದ್ದು, ಬೆಂಗಳೂರು ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಶಾಲಾ ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ.

  • 26 Jan 2021 01:40 PM (IST)

    ದೆಹಲಿಯಲ್ಲಿ ತೀವ್ರ ಸ್ವರೂಪಕ್ಕೆ ತಿರುಗಿದ ಟ್ರ್ಯಾಕ್ಟರ್ ರ‍್ಯಾಲಿ

    ದೆಹಲಿಯಲ್ಲಿ ತೀವ್ರ ಸ್ವರೂಪಕ್ಕೆ ತಿರುಗಿದ ಟ್ರ್ಯಾಕ್ಟರ್ ರ‍್ಯಾಲಿ. ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತರು ಬ್ಯಾರಿಕೇಡ್ ಮುರಿದು ಟ್ರ್ಯಾಕ್ಟರ್‌ ನುಗ್ಗಿಸಿದ್ದಾರೆ.ಪೊಲೀಸರು ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಸಿದ್ದಾರೆ. ಮಾರಕಾಸ್ತ್ರ ಹಿಡಿದು ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ದೊಣ್ಣೆ ಹಿಡಿದು ಬಂದ ಪ್ರತಿಭಟನಾ ನಿರತ ರೈತರು ನಿಂತಿದ್ದಾರೆ.

  • 26 Jan 2021 01:36 PM (IST)

    ಹೊಸಕೋಟೆಯಿಂದ ರೈತರ ಟ್ರ್ಯಾಕ್ಟರ್ ಮೆರವಣಿಗೆ ಆರಂಭ

    ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೊಸಕೋಟೆಯಿಂದ ರೈತರ ಟ್ರ್ಯಾಕ್ಟರ್ ಱಲಿ ಆರಂಭಗೊಂಡಿದೆ. 10 ಟ್ರ್ಯಾಕ್ಟರ್​​ಗಳಿಗೆ ಮಾತ್ರ ಪೊಲೀಸರು ಅನುಮತಿ ನೀಡಿದ್ದಾರೆ.

  • 26 Jan 2021 01:19 PM (IST)

    ರೈತರ ಪ್ರತಿಭಟನೆ :ರಸ್ತೆ ಮಧ್ಯೆ ಕುಳಿತು ರೈತರನ್ನು ತಡೆಹಿಡಿದ ನಂಗ್ಲೋಯಿ ಪೊಲೀಸರು

    ಮೆರವಣಿಗೆ ಹೊರಟ ರೈತರನ್ನು ತಡೆಯಲು ನಂಗ್ಲೋಯಿ ಪೊಲೀಸರು ರಸ್ತೆ ಮಧ್ಯ ಕುಳಿತಿದ್ದಾರೆ.

  • 26 Jan 2021 01:13 PM (IST)

    ದೆಹಲಿ: ಪ್ರತಿಭಟನೆ ತೀವ್ರತೆ ಹೆಚ್ಚಳ

    ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, DTC ಬಸ್​ಗಳು, ಪೊಲೀಸರ ವಾಹನಗಳು ಹಾಗೂ ಬ್ಯಾರಿಕೇಡ್​​ಗನ್ನು ಪ್ರಭಟನಾಕಾರರು ಧ್ಸಂಸ ಮಾಡುತ್ತಿದ್ದಾರೆ.

  • 26 Jan 2021 01:04 PM (IST)

    ಧಾರವಾಡದಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿ

    ಎಪಿಎಂಸಿ ಕಾಯ್ದೆಗೆ ವಿರೋಧಸಿ ಧಾರವಾಡದಲ್ಲಿ ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದಾರೆ. ನಗರದ ಕಲಾಭವನದಿಂದ ಆರಂಭವಾದ ರ‍್ಯಾಲಿ ಹೈಕೋರ್ಟ್​ವರೆಗೆ ನಡೆಯಲಿದೆ. 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಭಾಗಿಯಾಗಿವೆ.

  • 26 Jan 2021 01:01 PM (IST)

    ವಿಶೇಷ ಡೂಡಲ್​ ಮೂಲಕ 72ನೇ ಗಣರಾಜ್ಯೋತ್ಸವಕ್ಕೆ ಗೌರವ ಸಲ್ಲಿಸಿದ ಗೂಗಲ್

    ಇಂಟರ್​ನೆಟ್​ ದೈತ್ಯ ಗೂಗಲ್​ ಭಾರತದ 72ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್​ ಮೂಲಕ ಗೌರವ ಸಲ್ಲಿಸಿದೆ. ಮುಂಬೈ ಮೂಲದ ಕಲಾವಿದ ಓಂಕಾರ್​ ಫೊಂಡೇಕರ್​ ರಚಿಸಿದ ಕೇಸರಿ-ಬಿಳಿ-ಹಸಿರು ಮಿಶ್ರಿತ್​ ಡೂಡಲ್​ ಇದಾಗಿದ್ದು, ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಪ್ರತಿನಿಧಿಸುತ್ತಿದೆ. ಅದರಲ್ಲೂ ಮೈಸೂರು ದಸರಾ ಆನೆ ಅಂಬಾರಿಯೂ ಇರುವುದು ವಿಶೇಷ.

  • 26 Jan 2021 12:50 PM (IST)

    ಕೋಲಾರದಲ್ಲಿ ರೈತ ಸಂಘದಿಂದ ವಿನೂತನ ಪ್ರತಿಭಟನೆ

    ಕೋಲಾರದಲ್ಲಿ ರೈತ ಸಂಘದಿಂದ ವಿನೂತನ ಪ್ರತಿಭಟನೆ ನಡೆಸಲಾಗಿದೆ. ಎತ್ತಿನ ಬಂಡಿ, ನೇಗಿಲನ್ನು ಹಿಡಿದು ಪ್ರತಿಭಟನಾ ರ‍್ಯಾಲಿ ನಡೆಸಲಾಗಿದ್ದು, ರೈತರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

  • 26 Jan 2021 12:48 PM (IST)

    ಹರಿಯಾಣ: ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್

    ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಇಂದು ಪಂಚಕುಲದಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು.

  • 26 Jan 2021 12:43 PM (IST)

    ದೆಹಲಿ: ಪೊಲೀಸ್ ಬ್ಯಾರಿಕೇಡ್‌ಗಳನ್ನು ನುಗ್ಗಿ ಸಾಗಿದ ರೈತರು

    ಪ್ರತಿಭಟನಾ ರೈತರು ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಎದುರು ಇರಿಸಲಾಗಿರುವ ಪೊಲೀಸ್ ಬ್ಯಾರಿಕೇಡ್‌ಗಳನ್ನು ನುಗ್ಗಿ ಮುಂದೆ ಸಾಗಿದ್ದಾರೆ.

  • 26 Jan 2021 12:39 PM (IST)

    ದೆಹಲಿಯಲ್ಲಿ ಪ್ರತಿಭಟನೆ: DTC ಬಸ್​ ಧ್ವಂಸ

    ದೆಹಲಿಯಲ್ಲಿ ಪ್ರತಿಭಟನಾ ರೈತರು ರಾಷ್ಟ್ರ ರಾಜಧಾನಿಯ ಐಟಿಒ ಪ್ರದೇಶದಲ್ಲಿ ಡಿಟಿಸಿ (Delhi transport corporation) ಬಸ್ ಧ್ವಂಸ ಮಾಡಿದ್ದಾರೆ.

  • 26 Jan 2021 12:33 PM (IST)

    ರಾಷ್ಟ್ರ ರಾಜಧಾನಿ ದೆಹಲಿಯ ಸೆರೋಲಾಜಿಕಲ್ ಸಮೀಕ್ಷೆ ವರದಿ ಬಿಡುಗಡೆ

    ರಾಷ್ಟ್ರ ರಾಜಧಾನಿ ದೆಹಲಿಯ ಸೆರೋಲಾಜಿಕಲ್ ಸಮೀಕ್ಷೆ ವರದಿ ಬಿಡುಗಡೆಯಾಗಿದ್ದು, ಜನವರಿ 2021ರಲ್ಲಿ ನಡೆಸಿದ ಐದನೇ ಸೆರೋಲಾಜಿಕಲ್ ಸಮೀಕ್ಷೆ ವರದಿ ಇದಾಗಿದೆ. ದೆಹಲಿಯ ಶೇಕಡಾ 50 ರಷ್ಟು ಜನರಿಗೆ ಈಗಾಗಲೇ ಕೊರೊನಾ ಬಂದು ಹೋಗಿದೆ. ದೆಹಲಿಯಲ್ಲಿ ಅಂದಾಜು 2 ಕೋಟಿ ಜನಸಂಖ್ಯೆ ಇದೆ. ಈ ಪೈಕಿ ಒಂದು ಕೋಟಿ ಜನರಿಗೆ ಕೊರೊನಾ ವೈರಸ್ ನಿವಾರಣೆಯಾಗಿದೆ.

  • 26 Jan 2021 12:27 PM (IST)

    ಹೊಸಕೋಟೆ ಟೋಲ್ ಬಳಿ ತರಕಾರಿಯಿಂದ ಸಿಂಗಾರ ಮಾಡಿಕೊಂಡು ಗಮನ ಸೆಳೆದ ವಾಹನ

    ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಹಾತ್ಮ ಟ್ರಾಕ್ಟರ್ ರ‍್ಯಾಲಿ ಹಿನ್ನೆಲೆಯಲ್ಲಿ, ಬದನೆಕಾಯಿ, ಟೊಮ್ಯಾಟೊ, ಕ್ಯಾರೆಟ್, ಬಜ್ಜಿ ಮೆಣಸಿನಕಾಯಿ ಬಳಸಿ ವಿವಿಧ ತರಕಾರಿಗಳಿಂದ ಅಲಂಕಾರ ಮಾಡಿಕೊಂಡು ವಾಹನಗಳು ಬೆಂಗಳೂರಿಗೆ ಆಗಮಿಸಿವೆ.

  • 26 Jan 2021 12:23 PM (IST)

    ಬೆಂಗಳೂರು ನಗರದಲ್ಲಿಯೂ ಹೆಚ್ಚಿದ ಪ್ರತಿಭಟನೆ ಕಾವು

    ಬೆಂಗಳೂರು ನಗರದಲ್ಲಿಯೂ ಹೆಚ್ಚಿದ ಪ್ರತಿಭಟನೆ ಕಾವು ಹೆಚ್ಚಾಗಿದೆ. ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ರ‍್ಯಾಲಿಗೆ ಅವಕಾಶ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಕೇಳಿಬರುತ್ತಿದೆ.

  • 26 Jan 2021 12:21 PM (IST)

    ವಿಜಯಪುರ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಗೆ ವಿರೋಧಿಸಿ ಪ್ರತಿಭಟನೆ

    ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಗೆ ವಿರೋಧ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆಯುತ್ತದೆ. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದೆ.

  • 26 Jan 2021 12:19 PM (IST)

    ದೆಹಲಿಯಲ್ಲಿ ರೈತರ ಮೇಲೆ ಪೊಲೀಸರ ಲಾಠಿ ಪ್ರಹಾರ: ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ

    ದೆಹಲಿಯಲ್ಲಿ ರೈತರ ಮೇಲೆ ಪೊಲೀಸರ ಲಾಠಿ ಪ್ರಹಾರ ನಡೆಯುತ್ತಿದೆ. ಲಾಠಿ ಪ್ರಹಾರವನ್ನು ಖಂಡಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್. ಇದು ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ರೈತರು ಶಾಂತಿಯುವಾಗಿ ಪ್ರತಿಭಟನೆ ನಡೆಸುತ್ತಿದ್ದರು.ಇದೊಂದು ಉದ್ದೇಶಪೂರ್ವಕ ಕೃತ್ಯ. ಮೊದಲಿನಿಂದಲೂ ರೈತ ಚಳುವಳಿ ಹತ್ತಿಕ್ಕುವ ಕೆಲಸ ಆಗುತ್ತಿದೆ. ನಮ್ಮ ರಾಜ್ಯದಲ್ಲೂ ಇದೇ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕೆ ಟ್ರ್ಯಾಕ್ಟರ್ ಪರೇಡ್‌ಗೆ ಅನುಮತಿ ನೀಡಿಲ್ಲ ಎಂದು ಬೆಂಗಳೂರಿನ ಮಾದವರದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ ನೀಡಿದ್ದಾರೆ.

  • 26 Jan 2021 12:10 PM (IST)

    ಗಣರಾಜ್ಯೋತ್ಸವದಂದು ಅನ್ನದಾತರನ್ನು ಸರ್ಕಾರ ಕಡೆಗಣಿಸಿದೆ: ಹೆಚ್​.ಕೆ ಪಾಟೀಲ್​

    ಗಣರಾಜ್ಯೋತ್ಸವದಂದು ಅನ್ನದಾತರನ್ನ ಸರ್ಕಾರ ಕಡೆಗಣಿಸಿದೆ. ರೈತರ ಹೋರಾಟ ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ. ಇದು ಘನಘೋರ ಅಪರಾಧ. ರೈತರ ಪ್ರತಿಭಟನೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಾ ಬರುತ್ತಿದೆ. ಸರ್ಕಾರ ರೈತರ ಹಿತಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದೆ ಎಂದು ಗದಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೆಚ್​.ಕೆ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

  • 26 Jan 2021 12:05 PM (IST)

    ಗಣರಾಜ್ಯೋತ್ಸವ ಸಂಭ್ರಮ: ಭಾರತದ ಮೊದಲ ಮಹಿಳಾ ಫೈಟರ್​ ಪೈಲಟ್‌ ಭಾವನಾ ಕಾಂತ್

    ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾರತದ ಮೊದಲ ಮಹಿಳಾ ಫೈಟರ್​ ಪೈಲಟ್‌ ಭಾವನಾ ಕಾಂತ್ ಭಾಗಿಯಾಗಿದ್ದಾರೆ.

  • 26 Jan 2021 11:45 AM (IST)

    ಗಣರಾಜ್ಯೋತ್ಸವದ ಸಂಭ್ರಮ: ವಿನ್ಯಾಸಗೊಳಿಸಿದ ರಾಮ ಮಂದಿರ ಪ್ರದರ್ಶನ

    ಗಣರಾಜ್ಯೋತ್ಸವದ ಅಂಗವಾಗಿ ಉತ್ತರ ಪ್ರದೇಶದ ಸಾಂಸ್ಕೃತಿಕ ಪರಂಪರೆಯ ವಿಷಯವನ್ನಾಧರಿಸಿ ವಿನ್ಯಾಸಗೊಳಿಸಲಾಗಿರುವ ರಾಮ ಮಂದಿರವನ್ನು ಪ್ರದರ್ಶಿಸಲಾಯಿತು.

  • 26 Jan 2021 11:41 AM (IST)

    ದೆಹಲಿ ರಾಜ್‌ಪಥ್‌ ಮೇಲೆ ಮಿಂಚಿನ ವೇಗದಲ್ಲಿ ವಾಯುಪಡೆ ಪ್ರದರ್ಶನ

    72ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ದೆಹಲಿ ರಾಜ್‌ಪಥ್‌ ಮೇಲೆ ವಾಯುಪಡೆ ಪ್ರದರ್ಶನ ಜರುಗಿತು. ಮೊದಲ ಬಾರಿಗೆ ಆಗಸದಲ್ಲಿ ರಫೇಲ್ ಯುದ್ಧ ವಿಮಾನಗಳ ಪ್ರದರ್ಶನ ಮಾಡಲಾಯಿತು. ಸುಖೋಯ್ 30 ಯುದ್ಧ ವಿಮಾನಗಳು ಹಾರಾಟಗೊಂಡವು.

  • 26 Jan 2021 11:32 AM (IST)

    ಇದೇ ಮೊದಲ ಬಾರಿ ರಫೇಲ್ ಯುದ್ಧ ವಿಮಾನಗಳ ಹಾರಾಟ

    ಇದೇ ಮೊದಲ ಬಾರಿ ರಫೇಲ್ ಯುದ್ಧ ವಿಮಾನಗಳು ಗಣರಾಜ್ಯೋತ್ಸವ ಪರೇಡ್​ನಲ್ಲಿ ಹಾರಾಟ ನಡೆಸಿದವು.

  • 26 Jan 2021 11:32 AM (IST)

    ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಕೆಲವರು ಪ್ರಚೋದನೆ ನೀಡುತ್ತಿದ್ದಾರೆ: ಸಚಿವ ಬಿ.ಸಿ.ಪಾಟೀಲ್

    ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಕೆಲವರು ಪ್ರಚೋದನೆ ನೀಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಟ್ರ್ಯಾಕ್ಟರ್‌ಗಳಿಗೆ ತಡೆ ಹಿಡಿಯಲಾಗಿದೆ ಎಂದು ಕೊಪ್ಪಳದಲ್ಲಿ ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

  • 26 Jan 2021 11:28 AM (IST)

    ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

    ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ, ರಾಜ್ಯ ಸಭಾ ಸದಸ್ಯ ರಾಮಮೂರ್ತಿ ಅವರಿಂದ ಧ್ವಜಾರೋಹನ ನೆರವೇರಿದೆ.

  • 26 Jan 2021 11:26 AM (IST)

    ನನ್ನ ಹೃದಯಕ್ಕೆ ಹತ್ತಿರವಾದ ಭಾರತಕ್ಕೆ ಗಣರಾಜ್ಯೋತ್ಸವದ ಶುಭಾಶಯಗಳು: ಬ್ರಿಟನ್​ ಪ್ರಧಾನಿ

    ಭಾರತ ಇಂದು ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ, ಸಾರ್ವಭೌಮ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಭಾರತಕ್ಕೆ ತಂದು ಕೊಟ್ಟ ಅದ್ಭುತ ಸಂವಿಧಾನ ಜನ್ಮತಾಳಿದ ದಿನದ ಸಂಭ್ರಮದಲ್ಲಿ ಭಾರತ ಇದೆ. ನನ್ನ ಹೃದಯಕ್ಕೆ ಹತ್ತಿರವಾದ ಆ ದೇಶಕ್ಕೆ ನನ್ನ ಶುಭಹಾರೈಕೆಗಳು ಎಂದು ಬ್ರಿಟಿಷ್​ ಪ್ರಧಾನಿ ಬೋರಿಸ್​ ಜಾನ್ಸ್​ನ್​ ಶುಭಕೋರಿದ್ದಾರೆ. ಈ ಬಾರಿ ಗಣರಾಜ್ಯೋತ್ಸವಕ್ಕೆ ಬೋರಿಸ್​ ಜಾನ್ಸನ್​ ಅತಿಥಿಯಾಗಬೇಕಿತ್ತು. ಕೊವಿಡ್ ಕಾರಣದಿಂದ ಬಂದಿಲ್ಲ.

  • 26 Jan 2021 11:19 AM (IST)

    ಗಮನಸೆಳೆದ ‘ಆತ್ಮನಿರ್ಭರ ಭಾರತ್​ ಅಭಿಯಾನ: ಕೊವಿಡ್​’ ಸ್ತಬ್ಧಚಿತ್ರ

    ದೆಹಲಿ: ಜೈವಿಕ ತಂತ್ರಜ್ಞಾನ ಇಲಾಖೆಯು ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಕೊವಿಡ್​-19ಗೆ ಸಂಬಂಧಪಟ್ಟ ಆತ್ಮನಿರ್ಭರ ಭಾರತ್​ ಅಭಿಯಾನದ ಥೀಮ್​ನ್ನು ಪ್ರದರ್ಶಿಸಿತು. ಭಾರತದಲ್ಲಿ ಕೊವಿಡ್​-19 ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ವಿವಿಧ ಹಂತಗಳನ್ನು ಇದು ಒಳಗೊಂಡಿತ್ತು.

  • 26 Jan 2021 11:14 AM (IST)

    ಪೊಲೀಸರ ನೀರಿನ ಫಿರಂಗಿ ವಾಹನದ ಮೇಲೆ ಹತ್ತಿದ ರೈತರು..

    ಇಂದು ಟ್ರ್ಯಾಕ್ಟರ್ ಱಲಿ ಹಮ್ಮಿಕೊಂಡಿರುವ ರೈತರು ಸಿಂಗು ಗಡಿಯಿಂದ ಸಂಜಯ್ ಗಾಂಧಿ ಟ್ರಾನ್ಸ್​ಪೋರ್ಟ್ ನಗರಕ್ಕೆ ಆಗಮಿಸಿದ್ದು, ಅವರನ್ನು ಮುಂದೆ ಹೋಗದಂತೆ ತಡೆಯಲು ಪೊಲೀಸರು ಟಿಯರ್​ ಗ್ಯಾಸ್​ ಪ್ರಯೋಗ ಮಾಡಿದ್ದಾರೆ. ಇನ್ನು ರೈತರು ಪೊಲೀಸರ ನೀರಿನ ಫಿರಂಗಿ ವಾಹನದ ಮೇಲೆ ಹತ್ತಿ ಪ್ರತಿಭಟಿಸಿದರು.

  • 26 Jan 2021 11:07 AM (IST)

    ಇನ್ನೂ ಬದುಕಿದ್ದೀವಿ ಎಂದು ತೋರಿಸೋದಿಕ್ಕೆ ರೈತ ಮುಖಂಡರು ಪ್ರತಿಭಟನೆ ಮಾಡ್ತಿದ್ದಾರೆ: ಸಿಎಂ

    ಬೆಂಗಳೂರು: ಇನ್ನೂ ಬದುಕಿದ್ದೀವಿ ಎಂದು ತೋರಿಸಿಕೊಳ್ಳೋದಿಕ್ಕೆ ರೈತ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರೈತರ ಶಾಂತಿಯತ ಪ್ರತಿಭಟನೆಗೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಹಲವರಿಗೆ ಅವರು ಯಾಕೆ ಪ್ರತಿಭಟನೆ ಮಾಡುತ್ತಾರೆ ಎಂಬುದೇ ಗೊತ್ತಿಲ್ಲ ಎಂದಿದ್ದಾರೆ.

  • 26 Jan 2021 11:02 AM (IST)

    ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಮಾಧುಸ್ವಾಮಿ

    ಪದೇಪದೆ ಖಾತೆ ಬದಲಾವಣೆಯಿಂದ ಮನಸ್ಸಿಗೆ ಬೇಜಾರು ಆಗಿತ್ತು. ಹಾಗಾಗಿ ರಾಜೀನಾಮೆಗೆ ನಿರ್ಧರಿಸಿದ್ದೆ. ನನಗೆ ಸಹಿಸಲು ಸಾಧ್ಯವಿಲ್ಲ ಎಂದು ಸಿಎಂಗೆ ಹೇಳಿದ್ದೆ. ಇವತ್ತು ಧ್ವಜಾರೋಹಣದ ಬಳಿಕ ರಾಜೀನಾಮ ನೀಡಬೇಕು ಎಂದುಕೊಂಡಿದ್ದೆ. ಇದೀಗ ಹಿರಿಯರ ಮಧ್ಯಪ್ರವೇಶದಿಂದ ಖಾತೆ ಬಂದಿದೆ. ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ.

  • 26 Jan 2021 10:57 AM (IST)

    ಗಣರಾಜ್ಯೋತ್ಸವ ಸಂಭ್ರಮ: ಗಮನ ಸೆಳೆದ ಹಂಪಿ ಸ್ತಬ್ಧ ಚಿತ್ರ

    ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕದ ಹಂಪಿ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆಯಿತು.

  • 26 Jan 2021 10:42 AM (IST)

    ಪೊಲೀಸರು ನಮ್ಮನ್ನು ತಡೆದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ: ರೈತ ಮುಖಂಡ ಕುರುಬೂರು ಶಾಂತಕುಮಾರ್

    ನಮ್ಮನ್ನು ಪೋಲೀಸರು ತಡೆಯಲು ಮುಂದಾಗಿದ್ದಾರೆ. ನಮ್ಮ ಟ್ರಾಕ್ಟರ್​ಗಳನ್ನು ತಡೆದಿದ್ದಾರೆ, ನಮ್ಮ ಪೆರೇಡ್ ತಡೆಯಲು ಮುಂದಾಗಬಾರದು. ದೆಹಲಿಯಲ್ಲಿ ರ‍್ಯಾಲಿ ಮಾಡಲು ಅವಕಾಶ ಕೊಟ್ಟಿದ್ದಾರೆ. ಇಲ್ಲಿ ಮಾತ್ರ ಮಾಡಲು ಬಿಡುತ್ತಿಲ್ಲ. ಇದು ಪೊಲೀಸ್ ರಾಜ್ಯವಲ್ಲ. ಗುಂಡರಾಜ್ಯ ಮಾಡುತ್ತಿದ್ದಾರೆ. ಪೊಲೀಸರು ನಮ್ಮನ್ನು ತಡೆದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 26 Jan 2021 10:34 AM (IST)

    ಜೆಡಿಎಸ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

    ಜೆಡಿಎಸ್ ಕಚೇರಿಯಲ್ಲಿ ಧ್ವಜಾರೋಹಣ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ನೆರವೇರಿಸಿದರು. ನಂತರ ಮಾತನಾಡಿದ ಅವರು, ನಾನು ಸಾಮಾನ್ಯವಾಗಿ ಈ ಸಂದರ್ಭದಲ್ಲಿ ದೆಹಲಿಯಲ್ಲಿ ಇರುತ್ತಿದೆ. ಆರೋಗ್ಯದ ಸಮಸ್ಯೆ ಇರುವ ಕಾರಣದಿಂದ ನಮ್ಮ ಕಚೇರಿಯಲ್ಲೇ ಆಚರಣೆ ಮಾಡುತ್ತಿದ್ದೇನೆ. ಗಣರಾಜ್ಯೋತ್ಸವದ ಸಂಧರ್ಭದಲ್ಲಿ ರೈತ ಸಮುದಾಯ ಹಾಗೂ ಸರ್ಕಾರ ನಡುವೆ ಸಂಘರ್ಷ ಏರ್ಪಟ್ಟಿದೆ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿದ್ದರೂ ಇದನ್ನು ಬಗೆ ಹರಿಸಲು ಆಗಲಿಲ್ಲ. ಹೀಗಾಗಿ ಟ್ರಾಕ್ಟರ್ ರ‍್ಯಾಲಿ ಆರಂಭವಾಗಿದೆ ಎಂದು ಮಾತನಾಡಿದರು.

  • 26 Jan 2021 10:26 AM (IST)

    ಚಿಕ್ಕಬಳ್ಳಾಪುರ: 50ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳ ವಶ

    ರೈತರ ಟ್ರ್ಯಾಕ್ಟರ್ ಮೆರವಣಿಗೆ ವಿಫಲಗೊಳಿಸಲು ಮುಂದಾಗಿರುವ ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳನ್ನು ವಶಕ್ಕೆ ಪಡೆದು ರೈತರ ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದಾರೆ.ಇದರಿಂದ ಆಕ್ರೋಶಗೊಂಡ ರೈತರು ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಚಿಕ್ಕಬಳ್ಳಾಪುರದ ಚದಲಪುರದ ಬಳಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

  • 26 Jan 2021 10:21 AM (IST)

    ವಾಹನಗಳಲ್ಲಿ ರೈತರ ರ‍್ಯಾಲಿಗೆ ಅನುಮತಿ ಪಡೆಯದ ಹಿನ್ನೆಲೆ: ಬೆಂಗಳೂರಿನತ್ತ ಹೊರಟಿದ್ದ ರೈತರ ವಾಹನ ಪೊಲೀಸ್ ವಶಕ್ಕೆ

    ವಾಹನಗಳಲ್ಲಿ ರೈತರ ರ‍್ಯಾಲಿಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ, ಬೆಂಗಳೂರಿನತ್ತ ಹೊರಟಿದ್ದ ರೈತರ ವಾಹನ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಕೋಲಾರ ತಾಲೂಕಿನ ತಂಬಹಳ್ಳಿ ಗೇಟ್‌ ಬಳಿ ವಾಹನ ವಶಕ್ಕೆ ಪಡೆಯಲಾಗಿದೆ.

  • 26 Jan 2021 10:19 AM (IST)

    ಗಣರಾಜ್ಯೋತ್ಸವ ಸಂಭ್ರಮ: ಬಾಂಗ್ಲಾ ವಿಮೋಚನೆಗೆ 50 ವರ್ಷವಾದ ಹಿನ್ನೆಲೆಯಲ್ಲಿ ವಿಶೇಷ ಗೌರವ

    ದೆಹಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ ಪರೇಡ್​ನಲ್ಲಿ 122 ಬಾಂಗ್ಲಾ ಸೈನಿಕರಿಂದ ಪಥ ಸಂಚಲನ. ಬಾಂಗ್ಲಾ ವಿಮೋಚನೆಗೆ 50 ವರ್ಷವಾದ ಹಿನ್ನೆಲೆಯಲ್ಲಿ ವಿಶೇಷ ಗೌರವ.

  • 26 Jan 2021 10:04 AM (IST)

    ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಂದ ಧ್ವಜಾರೋಹಣ ನೆರವೇರಿದೆ

    ದೇಶಾದ್ಯಂತ 72ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್‌ ರಾಜ್​ಪಥ್‌ನಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ, ರಕ್ಷಣಾ ಪಡೆಗಳ ಮುಖ್ಯಸ್ಥರು ಸೇರಿದಂತೆ ಸಿಡಿಎಸ್ ರಾವತ್ ಪಾಲ್ಗೊಂಡಿದ್ದಾರೆ.

  • 26 Jan 2021 09:53 AM (IST)

    ರಾಜ್​ಪಥ್​ದತ್ತ ರಾಷ್ಟ್ರಪತಿ: ಗಣರಾಜ್ಯೋತ್ಸವ ಪರೇಡ್​ಗೆ ಕ್ಷಣಗಣನೆ

    ರಾಜ್​ಪಥ್​ದತ್ತ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ತೆರಳುತ್ತಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಪರೇಡ್​ ಪ್ರಾರಂಭಗೊಳ್ಳಲಿದೆ.

  • 26 Jan 2021 09:42 AM (IST)

    ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ

    ದೆಹಲಿಯ ಯುದ್ಧ ಸ್ಮಾರಕದಲ್ಲಿ ಹುತ್ಮಾತ ಸೈನಿಕರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಾಗೂ ರಕ್ಷಣಾ ಸಚಿವ ರಾಜ್​ನಾಥ್​​ ಸಿಂಗ್​ ಪಾಲ್ಗೊಂಡಿದ್ದಾರೆ.ಸಶಸ್ತ್ರ ಪಡೆಗಳ 3 ವಿಭಾಗಗಳ ಮುಖ್ಯಸ್ಥರು ಭಾಗಿಯಾಗಿದ್ದಾರೆ.

  • 26 Jan 2021 09:37 AM (IST)

    ದೆಹಲಿಯಲ್ಲಿ ಪ್ರಾರಂಭಗೊಂಡ ಟ್ರಾಕ್ಟರ್ ರ‍್ಯಾಲಿ

    ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ರೈತರ ಟ್ರಾಕ್ಟರ್​ ರ‍್ಯಾಲಿ ಟಿಕ್ರಿ ಗಡಿಯಲ್ಲಿ ಪ್ರಾರಂಭಗೊಂಡಿದೆ.

  • 26 Jan 2021 09:21 AM (IST)

    72ನೇ ಗಣರಾಜ್ಯೋತ್ಸವ ಸಂಭ್ರಮ: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

    72ನೇ ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಂಭ್ರಮ ಮನೆ ಮಾಡಿದೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ರಾಜ್ಯಪಾಲ ವಜುಭಾಯ್ ವಾಲಾರಿಂದ ಧ್ವಜಾರೋಹಣ ನೆರವೇರಿದೆ.

  • 26 Jan 2021 09:18 AM (IST)

    ಹೆಪ್ಪುಗಟ್ಟಿದ ನೀರಿನ ಮೇಲೆ ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆ ನಡೆಸಿದ ಐಟಿಬಿಪಿ

    ಗಣರಾಜ್ಯೋತ್ಸವದ ಸಂಭ್ರಮವಾಗಿ, ಲಡಾಖ್‌ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ಹೆಪ್ಪುಗಟ್ಟಿದ ನೀರಿನ ಮೇಲೆ ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಮೈಪುಳಕಿಸುವಂತಿದೆ.

  • 26 Jan 2021 08:55 AM (IST)

    ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯಗಳು.. ಜೈ ಹಿಂದ್! : ಪ್ರಧಾನಿ ಮೋದಿಯವರಿಂದ ಶುಭ ಹಾರೈಕೆ

    ದೇಶದ ಸಮಸ್ತ ಜನರಿಗೆ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್! ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಶುಭಾಶಯ ತಿಳಿಸಿದ್ದಾರೆ.

  • 26 Jan 2021 08:43 AM (IST)

    ಟ್ರ್ಯಾಕ್ಟರ್ ಬಿಟ್ಟು ಬಂದ್ರೆ ಮಾತ್ರ ಬೆಂಗಳೂರಿಗೆ ಪ್ರವೇಶ: ಪೊಲೀಸರ ಸಕಲ ಸಿದ್ಧತೆ

    ಬೆಂಗಳೂರಿನಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿ ಹಿನ್ನಲೆಯಲ್ಲಿ, ಇದುವರೆಗೂ ರೈತರ ಆಗಮಿಸಿಲ್ಲ. 22ಜಿಲ್ಲೆಯ ರೈತರಿಗೆ ಹೆಬ್ಬಾಗಿಲಿನಂತಿರುವ ತುಮಕೂರು ರಸ್ತೆಯಲ್ಲಿ ಸಕಲ ರೀತಿಯಲ್ಲಿ ಪೋಲಿಸರು ಸಜ್ಜಾಗಿ ನಿಂತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಬಳಿ ಪೋಲಿಸರ ನಿಯೋಜನೆಮಾಡಲಾಗಿದೆ. ಟ್ರ್ಯಾಕ್ಟರ್ ಬಿಟ್ಟು ಬಂದ್ರೆ ಮಾತ್ರ ಬೆಂಗಳೂರಿಗೆ ಅವಕಾಶ ನೀಡಲಾಗುತ್ತದೆ ಎಂದು ಪೊಲೀಸರು ಸಜ್ಜಾಗಿದ್ದಾರೆ.

  • 26 Jan 2021 08:39 AM (IST)

    ದೆಹಲಿಯಲ್ಲಿ ಇಂದು ಕಿಸಾನ್ ಗಣತಂತ್ರ ಪರೇಡ್: 10 ಗಂಟೆ ನಂತರ ಬ್ಯಾರಿಕೇಡ್‌ಗಳು ಓಪನ್

    ದೆಹಲಿಯಲ್ಲಿ ಇಂದು ಕಿಸಾನ್ ಗಣತಂತ್ರ ಪರೇಡ್ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆ ನಂತರ ದೆಹಲಿಗೆ ಪ್ರವೇಶಿಸಲು ಬ್ಯಾರಿಕೇಡ್‌ಗಳು ತೆರೆಯುವ ಆಗುವ ನಿಟ್ಟಿನಲ್ಲಿ, ಬ್ಯಾರಿಕೇಡ್‌ಗಳ ಬಳಿ ನೂರಾರು ರೈತರು ಕಾಯುತ್ತಾ ಕುಳಿತಿದ್ದಾರೆ.

  • 26 Jan 2021 08:35 AM (IST)

    ಬೆಂಗಳೂರಿನಲ್ಲಿ ರೈತರ ಟ್ರ್ಯಾಕ್ಟರ್‌ ರ‍್ಯಾಲಿಗೆ ಓಲಾ, ಉಬರ್ ಬೆಂಬಲ ಇಲ್ಲ

    ರೈತರ ಟ್ರ್ಯಾಕ್ಟರ್‌ ಪರೇಡ್‌ಗೆ ಓಲಾ, ಉಬರ್ ಬೆಂಬಲ ವ್ಯಕ್ತಪಡಿಸಿಲ್ಲ. ಇಂದು ಎಂದಿನಂತೆ KSRTC, BMTC ಬಸ್‌ಗಳು ಸಂಚರಿಸುತ್ತವೆ.

  • 26 Jan 2021 08:30 AM (IST)

    ರೈತರ ಟ್ರ್ಯಾಕ್ಟರ್‌ ರ‍್ಯಾಲಿಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲ

    ರೈತರ ಟ್ರ್ಯಾಕ್ಟರ್‌ ರ‍್ಯಾಲಿಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲ ನೀಡಲಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದವರೆಗೆ ವಿನೂತನ ಪ್ರತಿಭಟನೆ ನಡೆಯಲಿದೆ.

  • 26 Jan 2021 08:27 AM (IST)

    ಬೆಂಗಳೂರಿನಲ್ಲಿ ಇಂದು ರೈತರ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ

    ಬೆಂಗಳೂರಿನಲ್ಲಿ ಇಂದು ರೈತರ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ. ನಗರಕ್ಕೆ ಇಂದು 6 ಕಡೆಗಳಿಂದ ಟ್ರ್ಯಾಕ್ಟರ್ ರ‍್ಯಾಲಿ ಆಗಮನವಾಗಲಿದೆ.

    ರ‍್ಯಾಲಿ 1. ಬಿಡದಿ ಇಂಡಸ್ಟ್ರಿಯಲ್ ಜಂಕ್ಷನ್‌ನಿಂದ ಆರಂಭ 2. ತುಮಕೂರು ರಸ್ತೆ ನೈಸ್ ರೋಡ್ ಜಂಕ್ಷನ್ 3. ದೇವನಹಳ್ಳಿಯ ನಂದಿ ಕ್ರಾಸ್‌ನಿಂದ ಆರಂಭ 4. ಹೊಸಕೋಟೆ ಟೋಲ್ ಜಂಕ್ಷನ್‌ನಿಂದ ಆರಂಭ 5. ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಆರಂಭ 6. ಬೆಂಗಳೂರಿನ ಸುಮನಹಳ್ಳಿ ಗೇಟ್‌ನಿಂದ ಆರಂಭ

  • 26 Jan 2021 08:27 AM (IST)

    ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ರ‍್ಯಾಲಿ: ವಿವಿಧ ರೈತ ಸಂಘಟನೆಗಳು ಭಾಗಿ

    ಬೆಂಗಳೂರಿನಲ್ಲಿ ಇಂದು ನಡೆಯಲಿರುವ ರೈತರಿಂದ ಟ್ರ್ಯಾಕ್ಟರ್ ಪರೇಡ್ ಟ್ರ್ಯಾಕ್ಟರ್ ಪರೇಡ್‌ನಲ್ಲಿ ವಿವಿಧ ರೈತ ಸಂಘಟನೆಗಳು ಭಾಗಿಯಾಗಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ. ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್, AICCTU, ಕರ್ನಾಟಕ ಜನಶಕ್ತಿ ಸಂಘಟನೆ ಪರೇಡ್‌ನಲ್ಲಿ ಭಾಗಿಯಾಗಲಿದ್ದಾರೆ.

  • 26 Jan 2021 08:26 AM (IST)

    ತುಮಕೂರಿನಿಂದ ನೂರಾರು ಟ್ರಾಕ್ಟರ್​ಗಳಲ್ಲಿ ರೈತರು ಪ್ರಯಾಣ ಬೆಳೆಸಲಿದ್ದಾರೆ: ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಾಟೀಲ್

    ಇಂದು ಬೆಂಗಳೂರಿನಲ್ಲಿ ಟ್ರಾಕ್ಟರ್ ರ‍್ಯಾಲಿ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯಿಂದ ನೂರಾರು ಟ್ರಾಕ್ಟರ್​ಗಳು, ಬಸ್, ಲಾರಿ, ಕಾರುಗಳಲ್ಲಿ ರೈತರು ಪ್ರಯಾಣ ಬೆಳೆಸಲಿದ್ದಾರೆ. ಎರಡೂವರೆ ಸಾವಿರ ರೈತರು ಜಿಲ್ಲೆಯಿಂದ ಭಾಗವಹಿಸ್ತಿದ್ದೇವೆ. ಸರ್ಕಾರ ಏನಾದರೂ ಪೊಲೀಸರನ್ನ ಬಿಟ್ಟು ಹೋರಾಟವನ್ನ ಹತ್ತಿಕ್ಕಲು‌ ಪ್ರಯತ್ನಿಸಿದ್ದೇ ಆದಲ್ಲಿ, ಅಹಿಂಸ ಮಾರ್ಗವಾಗಿ ನಾವು ಶಾಂತಿಯುತ ಹೋರಾಟ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

  • Published On - Jan 26,2021 8:22 PM

    Follow us
    ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
    ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
    ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
    ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
    ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
    ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
    2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
    2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
    ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
    ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ