‘ನಿಮಗೆ ದುರಹಂಕಾರ ಬರಲು ರೈತರೇ ಕಾರಣ; ಪ್ರಧಾನಿ ಮೋದಿಯ ಅಹಂಕಾರಕ್ಕೆ ಎಚ್ಚರಿಕೆ’
ರೈತರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮಗೆ ದುರಹಂಕಾರ ಬರಲು ರೈತರೇ ಕಾರಣ. ಪ್ರಧಾನಿ ಮೋದಿಯ ಅಹಂಕಾರಕ್ಕೆ ಎಚ್ಚರಿಕೆ ಎಂದು ಹೇಳ್ತೀವಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
ಬೆಂಗಳೂರು: ದೆಹಲಿಯಲ್ಲಿ ರೈತರ ಹೋರಾಟದ ಹಿಂದೆ ಭಯೋತ್ಪಾದಕರ ಕುಮ್ಮಕ್ಕಿದೆ ಅಂತಾರೆ. ದೆಹಲಿಯಲ್ಲಿ ರೈತರ ಹೋರಾಟದ ಬಗ್ಗೆ ಸಚಿವರು ಹೇಳುತ್ತಾರೆ. ಅನ್ನ ತಿನ್ನುವ ಯಾರೊಬ್ಬರೂ ಹೇಳುವಂತಹ ಮಾತಲ್ಲ ಇದು ಎಂದು ಫ್ರೀಡಂ ಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ರೈತರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮಗೆ ದುರಹಂಕಾರ ಬರಲು ರೈತರೇ ಕಾರಣ. ಪ್ರಧಾನಿ ಮೋದಿಯ ಅಹಂಕಾರಕ್ಕೆ ಎಚ್ಚರಿಕೆ ಎಂದು ಹೇಳ್ತೀವಿ. ಮನ್ ಕೀ ಬಾತ್ನಲ್ಲಿ ಅನ್ನದಾತರ ಬಗ್ಗೆ ಮೋದಿ ಯಾವತ್ತೂ ಮಾತನಾಡಿಲ್ಲ ಎಂದು ಫ್ರೀಡಂ ಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸರ್ಕಾರದ ಜನ ವಿರೋಧಿ ನಿರ್ಧಾರಗಳನ್ನು ವಿರೋಧಿಸಿದರೆ ನಿಂದನೆ ಮಾಡುತ್ತಾರೆ. ನಮ್ಮ ವಿರುದ್ಧ ಮಾತಾಡಲು ಹರಕುಬಾಯಿಯವರನ್ನ ಬಿಡ್ತಾರೆ. ಯಾರೊಬ್ಬರೂ ರೈತರ ಬಗ್ಗೆ ಮಾತಾಡುವ ಅರ್ಹತೆ ಹೊಂದಿಲ್ಲ. ಸಿಎಂ BSY ತಮ್ಮ ಬಳಿ ಉತ್ತಮವಾದವರನ್ನು ಇಟ್ಟುಕೊಳ್ಳಲಿ ಎಂದು ಸಹ ಹೇಳಿದರು.
ರೈತ ವಿರೋಧಿ ಕಾಯ್ದೆ ವಿರುದ್ಧ ನಮ್ಮ ಹೋರಾಟ ನಿರಂತರ. 10ನೇ ಸುತ್ತಿನ ಚರ್ಚೆ ವೇಳೆ 1 ವರ್ಷದವರೆಗೆ ಜಾರಿಮಾಡಲ್ಲ. ರೈತರ ಜೊತೆ ಚರ್ಚೆ ವೇಳೆ ಜಾರಿಮಾಡಲ್ಲ ಎಂದು ಕೇಂದ್ರ ಸರ್ಕಾರ ಹೇಳಿತು ಎಂದು ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
ಹಸು ಸಾಕುವುದು ಹೇಗೆಂದು ಬಸವನಗುಡಿ, ಜಯನಗರದವರು ಹೇಳಿಕೊಡುವ ಅಗತ್ಯವಿಲ್ಲ -ಕೋಡಿಹಳ್ಳಿ ಚಂದ್ರಶೇಖರ್