ಆಂಧ್ರಕ್ಕೆ ದಸರಾ ಆನೆಗಳು ಕಳುಹಿಸುವ ಪ್ರಸ್ತಾಪ: ಸಚಿವ ಈಶ್ವರ ಖಂಡ್ರೆ ಹೇಳಿದ್ದೇನು?

| Updated By: ಗಂಗಾಧರ​ ಬ. ಸಾಬೋಜಿ

Updated on: Jun 15, 2024 | 6:42 PM

ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಇಂದು ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಆಂಧ್ರಪ್ರದೇಶದವರು ನಮ್ಮ ರಾಜ್ಯದ ಆನೆಗಳನ್ನು ಕೇಳಿದ್ದಾರೆ ಅಷ್ಟೇ. ಆದರೆ ಯಾವುದೇ ಕಾರಣಕ್ಕೂ ದಸರಾ ಆನೆಗಳನ್ನು ಕಳುಹಿಸಿಕೊಡಲು ಆಗಲ್ಲ. ದಸರಾ ಆನೆಗಳು ನಮ್ಮ ಅಸ್ಮಿತೆ ಎಂದು ಹೇಳಿದ್ದಾರೆ.

ಆಂಧ್ರಕ್ಕೆ ದಸರಾ ಆನೆಗಳು ಕಳುಹಿಸುವ ಪ್ರಸ್ತಾಪ: ಸಚಿವ ಈಶ್ವರ ಖಂಡ್ರೆ ಹೇಳಿದ್ದೇನು?
ಆಂಧ್ರಕ್ಕೆ ದಸರಾ ಆನೆಗಳು ಕಳುಹಿಸುವ ಪ್ರಸ್ತಾಪ: ಸಚಿವ ಈಶ್ವರ ಖಂಡ್ರೆ ಹೇಳಿದ್ದೇನು?
Follow us on

ಮೈಸೂರು, ಜೂನ್​ 15: ಆಂಧ್ರಪ್ರದೇಶದವರು ನಮ್ಮ ರಾಜ್ಯದ ಆನೆಗಳನ್ನು (Elephant) ಕೇಳಿದ್ದಾರೆ ಅಷ್ಟೇ. ಆದರೆ ಯಾವುದೇ ಕಾರಣಕ್ಕೂ ದಸರಾ ಆನೆಗಳನ್ನು ಕಳುಹಿಸಿಕೊಡಲು ಆಗಲ್ಲ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ (Eshwara Khandre) ಹೇಳಿದ್ದಾರೆ. ನಮ್ಮ ರಾಜ್ಯದ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಿಕೊಡುವ ವಿಚಾರವಾಗಿ ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಆನೆಗಳು ನಮ್ಮ ಅಸ್ಮಿತೆ. ಇತರೆ ಆನೆಗಳನ್ನು ಕಳುಹಿಸಿಕೊಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ವಿದ್ಯುತ್ ಸ್ಪರ್ಶಸಿ ಆನೆಗಳ ದುರಂತ ಸಾವು ವಿಚಾರವಾಗಿ ಪ್ರತಿಕ್ರಿಯಿಸಿದ್ದು, ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾಯುತ್ತಿರುವುದು ದುಃಖದ ಸಂಗತಿ. ಆನೆಗಳ ಸಾವಿನ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ನಮ್ಮ ಇಲಾಖೆಯಲ್ಲಿ ಯಾರೂ ರಾಯಭಾರಿಗಳು ಇಲ್ಲ

ನಟ ದರ್ಶನ್ ಅರಣ್ಯ ಇಲಾಖೆ ರಾಯಭಾರಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಮ್ಮ ಇಲಾಖೆಯಲ್ಲಿ ಯಾರೂ ರಾಯಭಾರಿಗಳು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರವಾಗಿ ಮಾತನಾಡಿದ್ದು, ರೋಪ್ ವೇ ನಿರ್ಮಾಣ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಪರಿಸರ ಸಂರಕ್ಷಣೆ ಜೊತೆ ಅಭಿವೃದ್ಧಿ ಸಹ ಆಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Mysuru Dasara Elephant : ಅರ್ಜುನ ಸಾವಿನ ಬೆನ್ನಲ್ಲೇ ಮತ್ತೊಂದು ಮೈಸೂರು ದಸರಾ ಆನೆ ದುರಂತ ಸಾವು

ಚಾಮರಾಜೇಂದ್ರ ಮೃಗಾಲಯದಲ್ಲಿ ವಾಸಿಗರು ಕ್ಯೂನಲ್ಲಿ ನಿಲ್ಲುವುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಾಟ್ಸಾಪ್, ಆನ್​ಲೈನ್​ನಲ್ಲಿ ಟಿಕೆಟ್ ಖರೀದಿಗೆ ಚಾಲನೆ ನೀಡಲಾಗಿದೆ. ಮೃಗಾಲಯದಲ್ಲಿ ಲೈವ್ ಫೀಡ್ ಉದ್ಘಾಟನೆ ಮಾಡಲಾಗಿದೆ.

ಇದನ್ನೂ ಓದಿ: ತನ್ನ ವ್ಯಾಪ್ತಿಪ್ರದೇಶದೊಳಗೆ ನುಸುಳಲು ಪ್ರಯತ್ನಿಸಿದ ಸಲಗವನ್ನು ಮದಗಜವೊಂದು ಬೆನ್ನಟ್ಟಿ ಓಡಿಸಿದ ದೃಶ್ಯ ರೋಚಕ!

ಮೃಗಾಲಯದ ಹಾವುಗಳಿಗೆ ಹೊರಗಿನಿಂದ ಆಹಾರ ತರಲಾಗುತ್ತಿತ್ತು. ಈಗ ನಮ್ಮಲ್ಲೇ ಮೊಲ, ಇಲಿ ಸಂತತಿ ಹೆಚ್ಚಳಕ್ಕೆ ಮುಂದಾಗಿದ್ದೇವೆ. ಚಾಮರಾಜೇಂದ್ರ ಮೃಗಾಲಯ ಅಭಿವೃದ್ಧಿಗೆ ನಾವು ಸಿದ್ಧರಿದ್ದೇವೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.