AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ವ್ಯಾಪ್ತಿಪ್ರದೇಶದೊಳಗೆ ನುಸುಳಲು ಪ್ರಯತ್ನಿಸಿದ ಸಲಗವನ್ನು ಮದಗಜವೊಂದು ಬೆನ್ನಟ್ಟಿ ಓಡಿಸಿದ ದೃಶ್ಯ ರೋಚಕ!

ತನ್ನ ವ್ಯಾಪ್ತಿಪ್ರದೇಶದೊಳಗೆ ನುಸುಳಲು ಪ್ರಯತ್ನಿಸಿದ ಸಲಗವನ್ನು ಮದಗಜವೊಂದು ಬೆನ್ನಟ್ಟಿ ಓಡಿಸಿದ ದೃಶ್ಯ ರೋಚಕ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 08, 2024 | 11:01 AM

Share

ವನ್ಯ ಪ್ರಾಣಿಗಳು ತಮ್ಮ ವ್ಯಾಪ್ತಿ ಪ್ರದೇಶವನ್ನು ತಮ್ಮದೇ ಆದ ರೀತಿಯಲ್ಲಿ ಮಾರ್ಕ್ ಮಾಡಿಕೊಂಡಿರುತ್ತವೆ. ಕೆಲವು ಮರಬಂಡೆಗಳಿಗೆ ಮೈ ಉಜ್ಜಿ ಮಾರ್ಕ್ ಮಾಡಿಕೊಂಡಿದ್ದರೆ ಇನ್ನೂ ಕೆಲವು ಗಿಡಪೊದೆಗಳ ಮೇಲೆ ಮೂತ್ರ ವಿಸರ್ಜಿಸಿ ಇದು ನನ್ನ ಏರಿಯಾ, ಪ್ರವೇಶ ನಿಷಿದ್ಧ; ಅತಿಕ್ರಮಣಕಾರರನ್ನು ದಂಡಿಸಲಾವುದು ಎಂಬ ಸಂದೇಶ ನೀಡುತ್ತವೆ.

ಮೈಸೂರು: ಆನೆಗಳೇ ಅಂತಲ್ಲ, ಹೆಚ್ಚಿನ ಸಂಖ್ಯೆಯ ವನ್ಯಜೀವಿಗಳು (wild animals) ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಅತಿಕ್ರಮಣವನ್ನು ಸಹಿಸುವುದಿಲ್ಲ. ಆಗಂತುಕ ತಮ್ಮ ಸಮುದಾಯದ್ದೇ ಆಗಿದ್ದರೂ ವ್ಯಾಪ್ತಿಯಲ್ಲಿ ಪ್ರವೇಶ ನಿಷಿದ್ಧ. ಇವತ್ತು ಬೆಳಗ್ಗೆ ನಾಗರಹೊಳೆ ಅಭಯಾರಣ್ಯದ (Nagarahole Reserve forest) ಕಾಕನಕೋಟೆ ಕಾಡು ಪ್ರದೇಶದಲ್ಲಿ ಸಫಾರಿಗೆ ತೆರಳಿದರಿಗೆ ಎರಡು ಮದಗಜಗಳ (Tuskers) ನಡುವೆ ಕಾಳಗ ನೋಡಸಿಕ್ಕಿದೆ. ಪರಿಸರವಾದಿ ನವೀನ್ ದೃಶ್ಯವನ್ನು ತಮ್ಮ ಕೆಮೆರಾದಲ್ಲಿ ಸೆರೆಹಿಡಿದಿದ್ದಾರೆ. ಬಲಭಾಗದಿಂದ ಬರುವ ಸಲಗವೊಂದಕ್ಕೆ ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಮತ್ತೊಂದು ಸಲಗ ಎಂಟ್ರಿ ಕೊಡುವ ಪ್ರಯತ್ನದಲ್ಲಿರೋದು ಗೊತ್ತಾಗುತ್ತದೆ. ಕೂಡಲೇ ಅಗಂತುಕ ಆನೆಯೆಡೆ ಧಾವಿಸುವ ಸಲಗವು ಅದನ್ನು ತನ್ನ ವ್ಯಾಪ್ತಿ ಪ್ರದೇಶದಿಂದ ದೂರ ತಳ್ಳಿಕೊಂಡು ಹೋಗುತ್ತದೆ. ಆಗಲೇ ಹೇಳಿದಂತೆ ವನ್ಯ ಪ್ರಾಣಿಗಳು ತಮ್ಮ ವ್ಯಾಪ್ತಿ ಪ್ರದೇಶವನ್ನು ತಮ್ಮದೇ ಆದ ರೀತಿಯಲ್ಲಿ ಮಾರ್ಕ್ ಮಾಡಿಕೊಂಡಿರುತ್ತವೆ. ಕೆಲವು ಮರಬಂಡೆಗಳಿಗೆ ಮೈ ಉಜ್ಜಿ ಮಾರ್ಕ್ ಮಾಡಿಕೊಂಡಿದ್ದರೆ ಇನ್ನೂ ಕೆಲವು ಗಿಡಪೊದೆಗಳ ಮೇಲೆ ಮೂತ್ರ ವಿಸರ್ಜಿಸಿ ಇದು ನನ್ನ ಏರಿಯಾ, ಪ್ರವೇಶ ನಿಷಿದ್ಧ; ಅತಿಕ್ರಮಣಕಾರರನ್ನು ದಂಡಿಸಲಾವುದು ಎಂಬ ಸಂದೇಶ ನೀಡುತ್ತವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿನಾಶದ ಅಂಚಿನಲ್ಲಿರುವ ಕಪ್ಪು ಚಿರತೆ ನಾಗರಹೊಳೆ ಅಭಯಾರಣ್ಯದಲ್ಲಿ ಪ್ರತ್ಯಕ್ಷ, ಕೆಮೆರಾದಲ್ಲಿ ಸೆರೆ!