ಶಾರ್ಟ್​ ಸರ್ಕ್ಯೂಟ್​ನಿಂದ ಬಾಲಕಿಯರ ಹಾಸ್ಟೆಲ್​ಗೆ ಬೆಂಕಿ; ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ

ಶಾರ್ಟ್​ ಸರ್ಕ್ಯೂಟ್​ನಿಂದ ಬಾಲಕಿಯರ ಹಾಸ್ಟೆಲ್​ಗೆ ಬೆಂಕಿ; ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ

ಮಹೇಶ್ ಇ, ಭೂಮನಹಳ್ಳಿ
| Updated By: ಆಯೇಷಾ ಬಾನು

Updated on: Jun 08, 2024 | 8:39 AM

ತುಮಕೂರಿನ ಬಿಹೆಚ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಶಾರ್ಟ್​ ಸರ್ಕ್ಯೂಟ್​ ಆಗಿದ್ದು ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದಾರೆ. ನಿನ್ನೆ ಸಂಜೆ 6 ಗಂಟೆ ವೇಳೆ ಈ ಘಟನೆ ನಡೆದಿದ್ದು ವಿದ್ಯಾರ್ಥಿನಿಯರ ಮೊಬೈಲ್​ನಲ್ಲಿ ಘಟನೆ ವಿಡಿಯೋ ಮಾಡಲಾಗಿದೆ.

ತುಮಕೂರು, ಜೂನ್.08: ಶಾರ್ಟ್​ ಸರ್ಕ್ಯೂಟ್​ನಿಂದ (Short Circuit) ಬಾಲಕಿಯರ ಹಾಸ್ಟೆಲ್​ಗೆ (Ladies Hostel) ಬೆಂಕಿ ಹಚ್ಚಿಕೊಂಡ ಘಟನೆ ತುಮಕೂರಿನ ಬಿಹೆಚ್ ರಸ್ತೆಯಲ್ಲಿರುವ ಹಾಸ್ಟೆಲ್​ನಲ್ಲಿ ನಡೆದಿದೆ. ಅದೃಷ್ಟವಶಾತ್​ ಹಾಸ್ಟೆಲ್​ನಲ್ಲಿದ್ದ ವಿದ್ಯಾರ್ಥಿನಿಯರು ಪಾರಾಗಿದ್ದಾರೆ. ಹಾಸ್ಟೆಲ್​ನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದರು. ಹಾಸ್ಟೆಲ್​ನಲ್ಲಿ​ ಶಾರ್ಟ್​ ಸರ್ಕ್ಯೂಟ್ ಆಗುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ತುಮಕೂರಿನ ಬಿಹೆಚ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಶಾರ್ಟ್​ ಸರ್ಕ್ಯೂಟ್​ ಆಗಿದ್ದು ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದಾರೆ. ನಿನ್ನೆ ಸಂಜೆ 6 ಗಂಟೆ ವೇಳೆ ಈ ಘಟನೆ ನಡೆದಿದ್ದು ವಿದ್ಯಾರ್ಥಿನಿಯರ ಮೊಬೈಲ್​ನಲ್ಲಿ ಘಟನೆ ವಿಡಿಯೋ ಮಾಡಲಾಗಿದೆ. ಪಟಾಕಿ ಹೊಡೆದಂತೆ ಸೌಂಡ್ ಸಮೇತ ಶಾರ್ಟ್ ಸರ್ಕ್ಯೂಟ್ ಬೆಂಕಿ‌ ಹಚ್ಚಿಕೊಂಡಿದೆ. ಸುಮಾರು 10 ನಿಮಿಷಗಳ ಕಾಲ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು ಹಾಸ್ಟೆಲ್ ತುಂಬಾ ಕತ್ತಲು, ಹೊಗೆ ಆವರಿಸಿಕೊಂಡಿತ್ತು. ಬಳಿಕ ಹಾಸ್ಟೆಲ್ ನಿಂದ ಹೊರಗೆ ಓಡಿ ಬಂದು ವಿದ್ಯಾರ್ಥಿನಿಯರು ಜೀವ ಉಳಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ