ಪೆಟ್ರೋಲ್, ಡಿಸೇಲ್​ ಬೆಲೆ ಏರಿಕೆ: ಸರ್ವ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಪೆಟ್ರೋಲ್​, ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಬೆಂಗಳೂರು ಮತ್ತು ವಿಜಯಪುರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಜನವಿರೋಧಿ ‌ಮೋದಿ ಸರ್ಕಾರಕ್ಕೆ‌ ಧಿಕ್ಕಾರ ಎಂದು‌ ಘೋಷಣೆ ಕೂಗುತ್ತಾ ಮೆರವಣಿಗೆ ಕೈಗೊಳ್ಳಲಾಗಿದೆ.

ಪೆಟ್ರೋಲ್, ಡಿಸೇಲ್​ ಬೆಲೆ ಏರಿಕೆ: ಸರ್ವ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಪೆಟ್ರೋಲ್​, ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
Updated By: ಸಾಧು ಶ್ರೀನಾಥ್​

Updated on: Feb 02, 2021 | 5:30 PM

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಸರ್ವ ಸಂಘಟನೆಗಳ ಒಕ್ಕೂಟದಿಂದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆದಿದೆ.

ಎತ್ತಿನ ಗಾಡಿಯ ಮೇಲೆ ಬಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಸರ್ವ ಸಂಘಟನೆಗಳ ಒಕ್ಕೂಟದ ಸಿಎಂ ಶಿವಕುಮಾರ್ ನಾಯಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ಕೈಗೊಳ್ಳಲಾಗಿದೆ. ರಸ್ತೆ ಮಧ್ಯೆ ಬನ್, ಜಾಮ್, ಬೇಳೆ,‌ ಅವರೆ, ಮೆಣಸು, ಉದ್ದಿನ‌ ಬೇಳೆ ವಿವಿಧ ಕಾಳು ಉತ್ಪನ್ನಗಳನ್ನು ಇಟ್ಟು ಆಮ್ ಆದ್ಮಿ ಪಕ್ಷ ಪ್ರತಿಭಟನೆ ಕೈಗೊಂಡಿದ್ದಾರೆ. ಜನವಿರೋಧಿ ‌ಮೋದಿ ಸರ್ಕಾರಕ್ಕೆ‌ ಧಿಕ್ಕಾರ ಎಂದು‌ ಘೋಷಣೆ ಕೂಗಿದರು.

ವಿಜಯಪುರದಲ್ಲಿ ಪ್ರತಿಭಟನೆ:

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕರವೇ ಕಾರ್ಯಕರ್ತರಿಂದ ಧರಣಿ ನಡೆಸಲಾಗಿದೆ. ತಲ್ಳುಗಾಡಿಯಲ್ಲಿ ಬೈಕ್ ಇಟ್ಟು, ಶವ ಸಂಸ್ಕಾರ ಮಾಡುವ ಮೂಲಕ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಲಾಗಿದೆ.

Budget 2021 | ಮತ್ತಷ್ಟು ದುಬಾರಿಯಾದ ಪೆಟ್ರೋಲ್, ಡೀಸೆಲ್ ಬೆಲೆ: ಕೃಷಿ ಮೂಲಸೌಕರ್ಯ ಸೆಸ್ ಮೂಲಕ ದರ ಏರಿಕೆ