ರಾಯಚೂರು: ಸ್ವಚ್ಛ ಭಾರತ ಯೋಜನೆಯ ಹಣ ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆ ಇಬ್ಬರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮ ಪಂಚಾಯತ್ ಪಿಡಿಒ ಆಗಿರುವ ಪ್ರಸಾದ್ ಮತ್ತು ಮಲ್ಲದಗುಡ್ಡ ಗ್ರಾಮ ಪಂಚಾಯತ್ನ ಪಿಡಿಒ ರೇಣುಕಮ್ಮ ಇವರಿಬ್ಬರನ್ನು ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಲಕ್ಷ್ಮೀಕಾಂತರೆಡ್ಡಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸ್ವಚ್ಛ ಭಾರತ ಯೋಜನೆಯ ಹಣ ಬೇಕಾಬಿಟ್ಟಿ ಬಳಕೆ ಮಾಡಿಕೊಳ್ಳಲಾಗಿದೆ. ಒಬ್ಬರೇ ಫಲಾನುಭವಿಗೆ ಹತ್ತಾರು ಬಾರಿ ಹಣ ಬಿಡುಗಡೆ ಮಾಡಿರುವಂತೆ ಸುಳ್ಳ ದಾಖಲೆ ಸೃಷ್ಟಿಸಲಾಗಿದೆ. ಶೌಚಾಲಯ ನಿರ್ಮಾಣದ ಹೆಸರಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ದಡಿ ಇಬ್ಬರು ಪಿಡಿಒ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಾಯಚೂರ ಜಿಲ್ಲೆಯಲ್ಲಿ ಭಾರಿ ಅಕ್ರಮ ಕಂಡುಬಂದಿದೆ. ಶೌಚಾಲಯದ ಹಣವೂ ಬಿಡದೇ ಅಧಿಕಾರಿಗಳು ಲೂಟಿಗಿಳಿದಿದ್ದಾರೆ.
Published On - 10:08 am, Thu, 2 January 20