ಕೊನೆಗೂ ಆಧಾರ್ ಕಾರ್ಡ್ ಪಡೆದ ರಾಯಚೂರು ವಿದ್ಯಾರ್ಥಿನಿ; ಟಿವಿ9ಗೆ ಧನ್ಯವಾದ ತಿಳಿಸಿದ ರ್ಯಾಂಕ್ ಸ್ಟೂಡೆಂಟ್

| Updated By: sandhya thejappa

Updated on: Jun 05, 2022 | 11:23 AM

625 ಕ್ಕೆ 624 ಅಂಕ ಪಡೆದಿದ್ದ ಈಕೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಧಾರ್ ಕಾರ್ಡ್ ಇಲ್ಲದೇ ತಲೆ ಕೆಡಿಸಿಕೊಂಡಿದ್ದಳು. ಕಳೆದ 10 ವರ್ಷಗಳಲ್ಲಿ 11 ಬಾರಿ ಆಧಾರ್ ಕಾರ್ಡ್​ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಳು.

ಕೊನೆಗೂ ಆಧಾರ್ ಕಾರ್ಡ್ ಪಡೆದ ರಾಯಚೂರು ವಿದ್ಯಾರ್ಥಿನಿ; ಟಿವಿ9ಗೆ ಧನ್ಯವಾದ ತಿಳಿಸಿದ ರ್ಯಾಂಕ್ ಸ್ಟೂಡೆಂಟ್
ಆಧಾರ್ ಕಾರ್ಡ್ ಪಡೆದ ವಿದ್ಯಾರ್ಥಿನಿ
Follow us on

ರಾಯಚೂರು: ಆಧಾರ್ ಕಾರ್ಡ್ (Aadhar Card) ಇಲ್ಲದೇ ಪರದಾಟ ಪಡುತ್ತಿದ್ದ ವಿದ್ಯಾರ್ಥಿನಿಗೆ (Student) ಕೊನೆಗೂ ಆಧಾರ್ ಕಾರ್ಡ್ ಸಿಕ್ಕಿದೆ. 2021-2022 ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಸಿಂಧನೂರು ತಾಲೂಕಿನ ಗೌಡನಭಾವಿ ಗ್ರಾಮದ ವಿದ್ಯಾರ್ಥಿನಿ ಆಧಾರ್ ಕಾರ್ಡ್ ಇಲ್ಲದೇ ಪರದಾಡಿದ್ದಳು. ಈ ಬಾರಿ 625 ಕ್ಕೆ 624 ಅಂಕ ಪಡೆದಿದ್ದ ಈಕೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಧಾರ್ ಕಾರ್ಡ್ ಇಲ್ಲದೇ ತಲೆ ಕೆಡಿಸಿಕೊಂಡಿದ್ದಳು. ಕಳೆದ 10 ವರ್ಷಗಳಲ್ಲಿ 11 ಬಾರಿ ಆಧಾರ್ ಕಾರ್ಡ್​ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಳು.

ವಿವಿಧ ತಾಂತ್ರಿಕ ಕಾರಣಗಳಿಂದ ಆಧಾರ್ ಕಾರ್ಡ್ ಅರ್ಜಿ ತಿರಸ್ಕಾರವಾಗುತ್ತಿತ್ತು. ಈ ಬಗ್ಗೆ ವಿದ್ಯಾರ್ಥಿನಿ ಇತ್ತೀಚೆಗೆ ಟಿವಿ9 ಬಳಿ ಅಳಲು ತೋಡಿಕೊಂಡಿದ್ದಳು. ಬಳಿಕ ಶಿಕ್ಷಣ ಸಚಿವ ಬಿಸಿ ನಾಗೇಶ್​ಗೂ ಈ ಬಗ್ಗೆ ಮಾಹಿತಿ ನೀಡಿದ್ದಳು. ಆ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು, ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ. ಆಧಾರ್ ಕಾರ್ಡ್ ಸಿಕ್ಕ ಬೆನ್ನಲ್ಲೆ ವಿದ್ಯಾರ್ಥಿನಿ ಟಿವಿ9 ಗೆ ಧನ್ಯವಾದ ತಿಳಿಸಿದ್ದಾಳೆ.

ಇದನ್ನೂ ಓದಿ: ಸಿದ್ದರಾಮಯ್ಯ ಆರ್​ಎಸ್​ಎಸ್​ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ: ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ
ಪ್ರತಿಭಟನೆಗೂ ಮುನ್ನಾ ಜಾಮೀಯ ಮಸೀದಿ ಒಳಗೆ ಹೋಗಿ ಹನುಮಾನ್ ಚಾಲೀಸ್ ಪಠಣೆ! ಸಿಸಿ ಟಿವಿ ದೃಶ್ಯ ಟಿವಿ9ಗೆ ಲಭ್ಯ
ಅಮೇರಿಕಾದಲ್ಲಿ ಹೆಚ್ಚುತ್ತಿದೆ ಶೂಟೌಟ್ ಪ್ರಕರಣ; ಗ್ಯಾಸ್​​ ಸ್ಟೇಷನ್​ನಲ್ಲಿ ಗುಂಡು ಹಾರಿಸಿ ದರೋಡೆ ಮಾಡಿದ 12 ವರ್ಷದ ಬಾಲಕ
India Covid Updates: ಭಾರತದಲ್ಲಿ 4,270 ಮಂದಿಗೆ ಕೊರೊನಾ ಸೋಂಕು, 15 ಮಂದಿ ಸಾವು
Pranayama: ಹೃದ್ರೋಗದಿಂದ ದೂರವಿರಬೇಕೆ? ಈ ಪ್ರಾಣಾಯಾಮಗಳನ್ನು ಮಾಡಿ

ಆಧಾರ್ ಕಾರ್ಡ್ ಇಲ್ಲದ ಹಿನ್ನೆಲೆ ಬಸವಲೀಲಾಗೆ ಸರ್ಕಾರದ ‌ಸ್ಕಾಲರ್ ಶಿಪ್, ಹಾಗೂ ಇತರೆ ಸೌಲಭ್ಯ ಸಿಗುತ್ತಿಲ್ಲವೆಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಳು. ವೈದ್ಯಳಾಗೊ‌ ಕನಸು ಕಂಡಿರೋ ಬಡ ವಿದ್ಯಾರ್ಥಿನಿಗೆ  ಆಧಾರ್ ಕಾರ್ಡ್ ಮುಳುವಾದಂತ್ತಾಗಿತ್ತು. ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ವಿದ್ಯಾರ್ಥಿನಿ ಮೇ 28ಕ್ಕೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಭೇಟಿಯಾಗಿದ್ದಳು. ಈ ವೇಳೆ 11 ಬಾರೀ ಆಧಾರ್ ಕಾರ್ಡ್ ರಿಜೆಕ್ಟ್ ಆಗಿರುವ ಕುರಿತು ಮನವರಿಕೆ ಮಾಡಿದ್ದಳು. ಆ ನಂತರ ಈ ಬಗ್ಗೆ ಸಿಂಧನೂರು ತಹಶಿಲ್ದಾರ್ ಅವರಿಗೆ ಸೂಚಿಸಿ, ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:19 am, Sun, 5 June 22