Raichur: ಲಾಕ್​​ಡೌನ್​​ನಲ್ಲಿ ಲವ್: ಮುಸ್ಲಿಂ ಯುವಕನ ಜತೆ ಯುವತಿ ಪರಾರಿ, ರಾಯಚೂರಿನಲ್ಲಿ ಲವ್​​ ಜಿಹಾದ್ ಆರೋಪ

ಇನ್ನೂ ಒಂದು ತಿಂಗಳಲ್ಲಿ ಹಸಮಣೆ ಏರಬೇಕಾದ ಯುವತಿ ಮುಸ್ಲಿಂ ಯುವಕನ ಜೊತೆ ಪರಾರಿಯಾಗಿದ್ದು, ಲವ್​​ಜಿಹಾದ್ ಎಂದು ಆರೋಪ ಕೇಳಿಬರುತ್ತಿದೆ.

Raichur: ಲಾಕ್​​ಡೌನ್​​ನಲ್ಲಿ ಲವ್: ಮುಸ್ಲಿಂ ಯುವಕನ ಜತೆ ಯುವತಿ ಪರಾರಿ, ರಾಯಚೂರಿನಲ್ಲಿ ಲವ್​​ ಜಿಹಾದ್ ಆರೋಪ
ಯುವತಿ ಭಾರತಿ ಮತ್ತು ರೆಹಾನ್​
Updated By: ವಿವೇಕ ಬಿರಾದಾರ

Updated on: Dec 02, 2022 | 4:40 PM

ರಾಯಚೂರು: ನಗರದಲ್ಲಿ ಬಾಳಪ್ಪ ಮತ್ತು ನಾಗಮ್ಮ ದಂಪತಿ ವಾಸವಾಗಿದ್ದಾರೆ. ದಂಪತಿಗೆ ಭಾರತಿ ಎಂಬ ಮಗಳು ಇದ್ದಾಳೆ. ತಂದೆ ಬಾಳಪ್ಪನಿಗೆ ಕಿವಿ ಕೇಳಲ್ಲ ಜೊತೆಗೆ ಆರೋಗ್ಯ ಸರಿ ಇಲ್ಲ. ಹೀಗಾಗಿ ಮನೆ ಜವಾಬ್ದಾರಿಯನ್ನು ನಾಗಮ್ಮ ಹೊತ್ತಿದ್ದಾರೆ. ದಂಪತಿ ಬಡತನದಲ್ಲೇ ಮಗಳು ಭಾರತಿಯನ್ನು ಬೆಳೆಸಿದ್ದಾರೆ. ಭಾರತಿ ಮದುವೆ ವಯಸ್ಸಿಗೆ ಬಂದಿದ್ದು, ಈ ಸಂಬಂಧ ಮದುವೆ ಮಾಡಿಸಲು ಮುಂದಾಗಿದ್ದರು. ಅದರಂತೆ ಯುವಕನ ಜತೆ ಎಂಗೇಜ್​ಮೆಂಟ್​ ಕೂಡ ಆಗಿತ್ತು. ಡಿಸೆಂಬರ್​​ನಲ್ಲಿ ಮದುವೆ ದಿನಾಂಕ ಕೂಡ ನಿಗದಿ ಮಾಡಿದ್ದರು.

ಈ ಕುಂಟಬಕ್ಕೆ ಲಾಕ್​​ಡೌನ್ ಸಮಯದಲ್ಲಿ ಮುಸ್ಲಿಂ ಸಮುದಾಯದ ರೆಹಾನ್ ಎಂಬ ವ್ಯಕ್ತಿ ಪರಿಚಯವಾಗಿದ್ದನು. ರೆಹಾನ್ ಹೂವಿನ ವ್ಯಾಪಾರಿಯಾಗಿದ್ದಾನೆ. ಹೀಗಾಗಿ ಭಾರತಿ ಕುಟುಂಬಸ್ಥರು ಹೂಗಳನ್ನ ಕಟ್ಟಿ ರೆಹಾನ್​ಗೆ ಕೊಡ್ತಿದ್ದರಂತೆ. ಹೀಗೆ ರೆಹಾನ್​ ಪರಿಚಯವಾಗಿದ್ದು, ಮುಂದೆ ಪರಿಚಯದ ಆಧಾರದ ಮೇಲೆ ಭಾರತಿ, ರೆಹಾನ್​ನ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದಳಂತೆ. ಮೊದ ಮೊದಲು ರೆಹಾನ್​​, ಭಾರತಿಯನ್ನು ತಂಗಿ ಅಂತಿದ್ದವನು, ಸದ್ದಿಲ್ಲದೆ ಭಾರತಿಯನ್ನು ತನ್ನ ಪ್ರೀತಿಯ ಬುಟ್ಟಿಗೆ ಹಾಕಿಕೊಂಡಿದ್ದಾನೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ರೆಹಾನ್​ ಭಾರತಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿ, ಹೈದ್ರಾಬಾದ್​​​ನಲ್ಲಿ ಮದುವೆಯಾಗಿದ್ದಾನೆ. ಭಾರತಿ ಹೆಸರನ್ನು ಶಹನಾಜ್​ ಬೇಗಂ ಆಗಿ ಬದಲಾಯಿಸಿದ್ದಾನೆ. ಈ ಬಗ್ಗೆ ಕೇಸ್​ ದಾಖಲಿಸಿಕೊಂಡಿದ್ದ ನೇತಾಜಿ ನಗರದ ಪೊಲೀಸರು, ರೆಹಾನ್ ಹಾಗೂ ಭಾರತಿಯನ್ನು ಕರೆಸಿದ್ದರು, ಆಗ ಭಾರತಿ ಬುರ್ಕಾ ಹಾಕಿಕೊಂಡೇ ಬಂದಿದ್ದಾಳೆ. ಮತ್ತು ಪೋಷಕರ ಜೊತೆ ಹೋಗಲು ಒಪ್ಪಲಿಲ್ಲವಂತೆ. ಇದರಿಂದ ಭಾರತಿ ಪೋಷಕರು ಕಂಗಾಲಾಗಿದ್ದಾರೆ. ಸದ್ಯ, ಒಂದು ಸುತ್ತಿನ ವಿಚಾರಣೆ ನಡೆಸಿರುವ ಪೊಲೀಸರು, ಸಾಕ್ಷ್ಯಗಳನ್ನ ಸಂಗ್ರಹಿಸುತ್ತಿದ್ದಾರೆ ಆದರೆ, ಮಗಳ ಚಿಂತೆಯಲ್ಲಿ ಪೋಷಕರಂತೂ ನೋವಿನಲ್ಲೇ ಹೊತ್ತು ದೂಡುತ್ತಿದ್ದಾರೆ.

ಭಾರತಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಅನುಮಾನವಿದೆ

ಇನ್ನೂ ಭಾರತಿ ತಂದೆ-ತಾಯಿ ಮನೆಗೆ ಭಜರಂಗದಳ ಸಂಚಾಲಕ ಶರಣಬಸವ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಪೋಷಕರಿಗೆ ಧೈರ್ಯ ತುಂಬಿದ್ದೇವೆ. ನಿಮ್ಮ ಮಗಳನ್ನು ಪುನಃ ಮನೆಗೆ ಸೇರಿಸುವ ಜವಾಬ್ದಾರಿ ನಮ್ಮದು. ಹೈದರಾಬಾದ್​​ನಲ್ಲಿ ಯುವತಿಯ ಮೈಂಡ್ ವಾಷ್ ಮಾಡಲಾಗಿದೆ. ಪೋಷಕರು ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಭಾರತಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಶಂಕಿಸಿದ್ದಾರೆ.

ಲವ್ ಜಿಹಾದ್ ಎಂಬುದು ಜಿಲ್ಲೆಯಲ್ಲಿ ಸಾಮಾನ್ಯವಾಗುತ್ತಿದೆ. ಯರಮರಸ್ ಕ್ಯಾಂಪ್, ದೇವದುರ್ಗದಲ್ಲೂ ಷಡ್ಯಂತ್ರ ನಡೆದಿತ್ತು. ಈ ಮೂಲಕ ಒಂದು ಎಚ್ಚರಿಕೆ ನೀಡುತ್ತಿದ್ದೇವೆ, ಇಲ್ಲಿಗೆ ಲವ್ ಜಿಹಾದ್ ಷಡ್ಯಂತ್ರ ಸ್ಟಾಪ್ ಮಾಡಿದರೇ ಒಳ್ಳೆಯದು. ಮುಂದಿನ ದಿನಗಳಲ್ಲಿ ಏನ್ ಮಾಡುತ್ತೀವಿ, ಅನ್ನೋದು ಹೇಳಲ್ಲ ಮಾಡಿ ತೋರಿಸುತ್ತೇವೆ. ಮುಸ್ಲಿಂ ಧಾರ್ಮಿಕ ಮುಖಂಡರು‌ ತಮ್ಮ ಯುವಕರಿಗೆ ಬುದ್ಧಿವಾದ ಹೇಳಿಬೇಕಿದೆ. ಯುವತಿ ಈವರೆಗೂ ಎಲ್ಲಿದ್ದಾಳೆ ಹೇಗಿದ್ದಾಳೆಂಬುದು ಗೊತ್ತಾಗಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಗಮನಕ್ಕೆ ನಾವು ತರುತ್ತೇವೆ ಎಂದು ತಿಳಿಸಿದರು.

ರಾಯಚೂರು ಗಡಿ ಭಾಗ ಜಿಲ್ಲೆ, ಪಕ್ಕದಲ್ಲಿ ಹೈದರಾಬಾದ್ ಇದೆ. ಹೈದರಾಬಾದ್​ನಲ್ಲಿ ಈ ರೀತಿಯಾದ ಆದ ಒಂದು ಗ್ರೂಪ್ ಇದೆ. ಹೆಣ್ಣು ಮಕ್ಕಳಿಗೆ ಟ್ರೈನಿಂಗ್ ಕೊಡುವಂತ ಒಂದು ವ್ಯವಸ್ಥಿತ ಗ್ರೂಪ್ ಇದೆ. ಮತಾಂತರ ಮಾಡಿ ಬಳಿಕ ಕುರಾನ್ ಪಠಣೆ ಮಾಡಿಸುತ್ತಾರೆ. ಹೈದರಾಬಾದ್ ನಲ್ಲಿರೋ ಗ್ರೂಪ್ ಬಗ್ಗೆ ರಾಜ್ಯ ಸರಕಾರ ಕ್ರಮವಹಿಸಲಿ ಎಂದು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ