ಮೊದಲ ಮತದಾನದ ಖುಷಿಯಲ್ಲಿ ಮತ ಹಾಕಿದ ಯುವತಿ, ವಾಪಸ್ ಮನೆಗೆ ಬರುವ ಮೊದಲೇ ಐಸಿಯು ಸೇರಿದ್ದಾಳೆ. ಮತದಾನದ ಖುಷಿಯಲ್ಲಿದ್ದ ಆಕೆ ರಸ್ತೆ ಅಪಘಾತಕ್ಕೀಡಾಗಿ ಈಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಮೊದಲ ಮತದಾನದ ಖುಷಿಯಲ್ಲಿದ್ದಾಕೆಗೆ ರಾಯಚೂರಿನಲ್ಲಿ ನಡೆದ ಅಪಘಾತದಿಂದ ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಹೌದು..ರಾಯಚೂರಿನಲ್ಲೊಂದು ಇಂತಹ ವಿರಳ ಘಟನೆ ನಡೆದಿದೆ. ಮೊದಲ ಮತದಾನದ ಖುಷಿಯಲ್ಲಿದ್ದ ಓರ್ವ ಯುವತಿ ಮನೆಗೆ ಹಿಂದಿರುಗೋವಾಗ ಅಪಘಾತಕ್ಕೀಡಾಗಿ ಈಗ ಐಸಿಯುನಲ್ಲಿದ್ದಾಳೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದ ನಿವಾಸಿಯಾಗಿರೊ ಸಾನಾ ಅನ್ನೋ ಯುವತಿ ರಾಜಾಸಾಬ್ ಅನ್ನೋರ ಮಗಳು.. ಈಕೆ ಧಾರವಾಡದಲ್ಲಿ ಎರಡನೇ ವರ್ಷದ ನರ್ಸಿಂಗ್ ಓದುತ್ತಿದ್ಲು.. ಇದೇ ಮೊದಲ ಬಾರಿಗೆ ಸಾನಾ ವೋಟರ್ ಐಡಿ ಪಡೆದಿದ್ಲು.. ವೋಟರ್ ಐಡಿ ಬಂದ ಬಳಿಕ ಧಾರವಾಡದಲ್ಲಿ ಸಾನಾ, ಇದೇ ಮೇ 10 ರಂದು ಮತದಾನಕ್ಕೆ ತನ್ನೂರಿಗೆ ಆಗಮಿಸಿದ್ದಳು .. ಮಸ್ಕಿ ವಿಧಾನ ಸಭಾ ಕ್ಷೇತ್ರಕ್ಕೆ ಬರೋ ಜಕ್ಕೇರಮಡು ಹಳ್ಳಿಯಲ್ಲಿ ಈಕೆಯ ವೋಟಿಂಗ್ ಇತ್ತು.. ಅದರಂತೆ ಮೇ 10 ರಂದು ಸಾನಾ ತನ್ನ ಸಂಬಂಧಿ ರಾಜಾ ಅನ್ನುವ ಯುವಕನ ಜೊತೆ ಮತದಾನಕ್ಕೆ ಹೋಗಿ, ಮತದಾನವನ್ನೂ ಮಾಡಿದ್ದಳು.. ಆ ಬಳಿಕ ಆಕೆ ರಾಜಾ ಅನ್ನೋನ ಜೊತೆ ಬೈಕ್ನಲ್ಲಿ ವಾಪಸ್ ಹಟ್ಟಿ ಪಟ್ಟಣಕ್ಕೆ ವಾಪಸ್ ಆಗುತ್ತಿದ್ದ ವೇಳೆ ಭೀಕರ ಅಪಘಾತಕ್ಕೆ ತುತ್ತಾಗಿದ್ದಾಳೆ.
ಹೌದು.. ರಾಜಾ ಅನ್ನೋನು ಸಾನಾಳನ್ನ ಕೂರಿಸಿಕೊಂಡು ಕೆಎ 26 ಎಲ್ 0432 ಸಂಖ್ಯೆಯ ಬೈಕಿನಲ್ಲಿ ವೇಗವಾಗಿ ಹೊರಟಿದ್ದ. ಇತ್ತ ಹಟ್ಟಿ ಮಾರ್ಗವಾಗಿ ಹೋಗುವಾಗ ಮಾರ್ಗ ಮಧ್ಯೆ ಮೋಹನ್ ಅನ್ನೋರು ತಮ್ಮ ಅಣ್ಣನ ಮಗ ರೋಹನ್ ಜೊತೆಗೆ ಕೆಎ 01 ಎಂಯು 8101 ಸಂಖ್ಯೆ ಕಾರ್ ನಲ್ಲಿ ವಿಜಯಪುರಕ್ಕೆ ಹೊರಟಿದ್ರು.. ರೋಹನ್ ಕೂಡ ಕಾರನ್ನ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಓಡಿಸುತ್ತಿದ್ದನಂತೆ.. ಆಗ ಕಾರ್ ಹಾಗೂ ಸಾನಾಳಿದ್ದ ಬೈಕ್ ನಡುವೆ ಡಿಕ್ಕಿಯಾಗಿ ದೊಡ್ಡ ಅಪಘಾತವೇ ನಡೆದಿದೆ.
ಆಗ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದೋರಿಗೆ ಏನೂ ಆಗಿಲ್ಲ.. ಆದರೆ ಬೈಕ್ನಲ್ಲಿದ್ದ ರಾಜಾಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು.. ಸಾನಾಗೆ ಮಾತ್ರ ಗಂಭೀರ ಗಾಯಗಳಾಗಿವೆ.. ತಲೆ, ಸೊಂಟ, ಹೊಟ್ಟೆ ಭಾಗಕ್ಕೆ ಗಂಭೀರವಾದ ಗಾಯಗಳಾಗಿದ್ದು, ಆಕೆಯನ್ನ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂದಹಾಗೆ ಸಾನಾ, ರಾಜಾ ಸಾಬ್ ಅನ್ನೋರ ಏಕೈಕ ಪುತ್ರಿ. ಮೊದಲು ಡ್ರೈವರ್ ಆಗಿದ್ದ ರಾಜಾಸಾಬ್ ಕೊರೊನಾ ವೇಳೆ ಕೆಲಸ ಕಳೆದುಕೊಂಡಿದ್ರು.. ಆದ್ರೀಗ ಊರಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ.. ಓದಿನಲ್ಲಿ ಮುಂದಿದ್ದ ಸಾನಾಳನ್ನ ಸಾಲ ಸೋಲ ಮಾಡಿ ನರ್ಸಿಂಗ್ ಓದಿಸುತ್ತಿದ್ದಾರೆ.. ಆಕೆ ಇನ್ನೇನು ಕೆಲಸಕ್ಕೆ ಸೇರ್ತಾಳೆ ಅನ್ನೋ ಹಂತದಲ್ಲಿ ಹೀಗೆ ಅಪಘಾತಕ್ಕೀಡಾಗಿ ಐಸಿಯು ಸೇರಿ, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ..
ಈಕೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ರಾಜಾ ಸಾಬ್ ಬಳಿ ಹಣವಿಲ್ಲ.. ಹೀಗಾಗಿ ನಾವು ಕಾಂಗ್ರೆಸ್ಗೆ ಮತ ಹಾಕಿದ್ದೇವೆ.. ನನ್ನ ಮಗಳು ಸಾನಾ ಕೂಡ ಕಾಂಗ್ರೆಸ್ಸಿಗೇ ವೋಟು ಹಾಕಿದ್ದಾಳೆ.. ಹೀಗಾಗಿ ನಮಗೆ ಸಿದ್ದರಾಮಯ್ಯ ಆರ್ಥಿಕ ಸಹಾಯ ಮಾಡಬೇಕು.. ಇಲ್ಲದಿದ್ರೆ ನಿಮ್ಮ ಬಳಿ ಬಂದು ಜೀವಕ್ಕೆ ಏನಾದರೂ ಮಾಡಿಕೊಳ್ಳುತ್ತೇವೆ ಅಂತ ಕಣ್ಣೀರು ಹಾಕುತ್ತಿದ್ದಾರೆ ಸಾನಾಳ ತಂದೆ ರಾಜಾ ಸಾಬ್.
ಸದ್ಯ ಘಟನೆ ಸಂಬಂಧ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೀತಿದೆ.. ಆದ್ರೆ ಯಾರಾದ್ರೂ ದಾನಿಗಳಿದ್ರೆ ಸಾನಾಳ ಸಹಾಯಕ್ಕೆ ಬರಬೇಕಿದೆ.
ವರದಿ: ಭೀಮೇಶ್, ಟಿವಿ 9, ರಾಯಚೂರು
Published On - 11:16 am, Wed, 17 May 23