ಸಿರವಾರದಲ್ಲಿ ಅನುಮಾನಾಸ್ಪದವಾಗಿ ತಂದೆ, ಇಬ್ಬರು ಮಕ್ಕಳು ಸಾವು

ತಂದೆ, ಇಬ್ಬರು ಮಕ್ಕಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ. ಇನ್ನೊಂದೆಡೆ, ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ದಂಪತಿ ದುರ್ಮರಣ ಹೊಂದಿ ಘಟನೆ ಬೀದರ್​ನಲ್ಲಿ ನಡೆದಿದೆ.

ಸಿರವಾರದಲ್ಲಿ ಅನುಮಾನಾಸ್ಪದವಾಗಿ ತಂದೆ, ಇಬ್ಬರು ಮಕ್ಕಳು ಸಾವು
ಸಿರವಾರದಲ್ಲಿ ಅನುಮಾನಾಸ್ಪದವಾಗಿ ತಂದೆ, ಇಬ್ಬರು ಮಕ್ಕಳು ಸಾವು (ಸಾಂದರ್ಭಿಕ ಚಿತ್ರ)
Image Credit source: File

Updated on: May 22, 2023 | 8:50 PM

ರಾಯಚೂರು: ತಂದೆ ಮತ್ತು ಇಬ್ಬರು ಮಕ್ಕಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ (Suspicious death) ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ. ಮುದಕಪ್ಪ (60), ಶಿವು (23), ಬಸವರಾಜ್ (20) ಸಾವನ್ನಪ್ಪಿದವರು. ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮೂವರ ಶವವನ್ನು ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಿರವಾರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದು, ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬೀದರ್: ಅಪಘಾತದಲ್ಲಿ ದಂಪತಿ ದುರ್ಮರಣ

ಬೀದರ್: ಅಪಘಾತದಲ್ಲಿ (Accident) ದಂಪತಿ ದುರ್ಮರಣ ಹೊಂದಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸಸ್ತಾಪುರ ಬಂಗ್ಲಾದಲ್ಲಿ ನಡೆದಿದೆ. ಜೋಗೆವಾಡಿ ಗ್ರಾಮದ ದಂಪತಿ ಗುಂಡಪ್ಪ (33), ಸುಜಾತಾ (29) ಸಾವನ್ನಪ್ಪಿದವರು. ದಂಪತಿ ಮಗು ಪವಾಡ ಸದೃಶ ರೀತಿಯಲ್ಲಿ ಬಚಾವ್ ಆಗಿದೆ. ಬೈಕ್​ನಲ್ಲಿ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಬಸವಕಲ್ಯಾಣ ಟೌನ್ ಪೊಲೀಸ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಟ, ಮಾಡೆಲ್ ಆದಿತ್ಯ ಸಿಂಗ್ ಅನುಮಾನಾಸ್ಪದ ಸಾವು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ