ರಾಯಚೂರು: ಸಾರಿಗೆ ಇಲಾಖೆ ನೌಕರರ ಮೇಲೆ ಸರ್ಕಾರ ಗದಾ ಪ್ರಹಾರ ಮಾಡುತ್ತಿದೆ. ಕೊರೊನಾ ಲಾಕ್‌ಡೌನ್ ವೇಳೆ ಬಸ್ ಸಂಚಾರ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ KSRTC ಚಾಲಕ, ನಿರ್ವಾಹಕರು ಕೆಲಸಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಮೇ ತಿಂಗಳು ಸಂಪೂರ್ಣ ರಜೆ ಎಂದು ಪರಿಗಣಿಸಲು ಸರ್ಕಾರದಿಂದ ಆದೇಶ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನೌಕರರಿಂದ ಬಲವಂತವಾಗಿ ರಜೆ ಬರೆಸಿಕೊಳ್ತಿದ್ದಾರೆ. ಇದರಿಂದಾಗಿ ನೌಕರರ ಗಳಿಕೆಯ ರಜೆಗಳಿಗೆ ಕತ್ತರಿ ಬೀಳುತ್ತದೆ. ಸಿಎಂಎಲ್, ಇಎಲ್‌ನಿಂದ ನೌಕರರು ವಂಚಿತರಾಗುತ್ತಿದ್ದಾರೆ. ಲಾಕ್‌ಡೌನ್ ವೇಳೆ ಸರ್ಕಾರವೇ ಬಸ್ ಸಂಚಾರ ರದ್ದು ಮಾಡಿದ್ದರಿಂದ ನೌಕರರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.
ಈದೀಗ ಲಾಕ್‌ಡೌನ್ ಅವಧಿಯಲ್ಲಿ ಸಾರಿಗೆ ನೌಕರರ ಸೇವಾವಧಿಯನ್ನ ರಜೆ ಎಂದು ಪರಿಗಣಿಸುವಂತೆ ಆದೇಶಿಸಿದೆ. ಸರ್ಕಾರದ ಆದೇಶದಿಂದಾಗಿ ಸಾರಿಗೆ ನೌಕರರಿಗೆ ಭಾರಿ ಅನ್ಯಾಯ ಎಸಗಿದಂತಾಗಿದೆ. ಸರ್ಕಾರದ ಈ ಅದೇಶಕ್ಕೆ ಸಾರಿಗೆ ನೌಕರರು ಭಾರಿ ವಿರೋಧ ವ್ಯಕ್ತಪಡಿಸ್ತಿದ್ದಾರೆ.