ಡಿಸಿಸಿ ಬ್ಯಾಂಕ್​ ಹಗರಣ ಆರೋಪ ಮಾಡಿದ ವರ್ತೂರು : ಶಿಷ್ಯನಿಗೆ ಚಿಲ್ಲರೆ ಎಂದ ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Feb 12, 2023 | 3:06 PM

ಕೋಲಾರ ಡಿಸಿಸಿ ಬ್ಯಾಂಕ್​ ಹಗರಣಕ್ಕೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನೇ ಕಾರಣ ಎಂದು ಆರೋಪ ಮಾಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಆ ಚಿಲ್ಲರೆಗಳಿಗೆ (ವರ್ತೂರು ಪ್ರಕಾಶ್) ರಿಯಾಕ್ಟ್ ಮಾಡಲ್ಲ ಎಂದು ಹರಿಹಾಯ್ದಿದ್ದಾರೆ.

ರಾಯಚೂರು: ಒಂದು ಕಾಲದಲ್ಲಿ ಗುರು-ಶಿಷ್ಯರಂತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಮಾಜಿ ಶಾಸಕ ವರ್ತುರ್​​ ಪ್ರಕಾಶ (Varthur Prakash) ಈ ಬದ್ಧ ವೈರಿಗಳಂತೆ ಕಿತ್ತಾಡುತ್ತಿದ್ದಾರೆ. ಕೋಲಾರ ಬಿಜೆಪಿ ಟಿಕೇಟ್​ ಆಕಾಂಕ್ಷಿ ವರ್ತುರ್​​ ಪ್ರಕಾಶ ನಿನ್ನೆ (ಫೆ. 11) ರಂದು ಕೋಲಾರ ಡಿಸಿಸಿ ಬ್ಯಾಂಕ್​ ಹಗರಣಕ್ಕೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನೇ ಕಾರಣ ಎಂದು ಆರೋಪ ಮಾಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಆ ಚಿಲ್ಲರೆಗಳಿಗೆ (ವರ್ತೂರು ಪ್ರಕಾಶ್) ರಿಯಾಕ್ಟ್ ಮಾಡಲ್ಲ ಎಂದು ಹರಿಹಾಯ್ದಿದ್ದಾರೆ.

ರಾಯಚೂರಿನ ಸಿಂಧನೂರಿನಲ್ಲಿ ಮಾಧ್ಯಮ ಪ್ರತಿನಿಧಿಗೊಳೊಂದಿಗೆ ಮಾತನಾಡಿದ ಅವರು ಇಲ್ಲಿರೋರೆಲ್ಲಾ ಶಿಷ್ಯರು, ಅಭಿಮಾನಿಗಳೆ. ಅವನು ಓಬ್ಬ ಅಭಿಮಾನಿಯಾಗಿದ್ದ. ಆದರೆ ಈಗ ವಿರುದ್ಧ ಆಗಿದ್ದಾನೆ. ಪ್ರಜಾಪ್ರಭುತ್ವದಲ್ಲಿ ಯಾರೂ ಶಾಶ್ವತ ಸ್ನೇಹಿತರಲ್ಲ, ಯಾರೂ ಶಾಶ್ವತ ವೈರಿಗಳಲ್ಲ. ಒಂದು ಕಾಲದಲ್ಲಿ ಸ್ನೇಹಿತರು ಮತ್ತೊಮ್ಮೆ ರಾಜಕೀಯ ವೈರಿಗಳು. ವರ್ತೂರು ಪ್ರಕಾಶ್​ಗೆ ಉತ್ತರ ಕೊಡಲ್ಲ ಎಂದು ಹೇಳಿದ್ದಾರೆ. ಇನ್ನು “ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸೋದಾಗಿ ಘೋಷಣೆ ಮಾಡಿದ್ದಾರೆ. ಇವರ ವಿರುದ್ಧ ಬಿಜೆಪಿಯಿಂದ ವರ್ತೂರ್​ ಪ್ರಕಾಶ್​ ಕಣಕ್ಕಿಳಿಸುವ ಸಾಧ್ಯತೆ ಇದೆ

15 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

15 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಕಾಂಗ್ರೆಸ್​​ ಕನಿಷ್ಠ 130 ಸ್ಥಾನ, ಗರಿಷ್ಠ 150 ಸ್ಥಾನ ಗೆಲ್ಲುತ್ತದೆ. ಬಾದಾಮಿ, ವರುಣಾ, ಕೋಲಾರ ಎಲ್ಲೇ ಸ್ಪರ್ಧಿಸಿದರೂ ಗೆಲ್ಲುತ್ತೇನೆ. ಬಾದಾಮಿ ಕ್ಷೇತ್ರ ದೂರವಾದ್ದರಿಂದ ಅಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಹೈಕಮಾಂಡ್ ಒಪ್ಪಿಗೆ ಕೊಟ್ಟರೇ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ನನ್ನ ಪುತ್ರ ಯತೀಂದ್ರ ವರುಣಾ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆಂದು ಹೇಳಿದ್ದಾನೆ. ಆದರೆ ನಾನು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ನೂರಾರು ಕೋಟಿ ಹಗರಣದ ಆರೋಪದಲ್ಲಿ ಕೋಲಾರ ಡಿಸಿಸಿ ಬ್ಯಾಂಕ್​: ಬಿಜೆಪಿ, ಜೆಡಿಎಸ್​ ಮುಖಂಡರ ಆರೋಪ 

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನೋ ವಿಚಾರವಾಗಿ ಮಾತನಾಡಿದ ಅವರು ಯಾರು ಗೆಲ್ಲುತ್ತಾರೆ ಅವರಿಗೆ ಕೊಡುತ್ತೇವೆ. ಎಐಸಿಸಿ ಇಂದ ಸರ್ವೆ ಆಗಿದೆ. ಆ ಪ್ರಕಾರ ತೀರ್ಮಾನ ಆಗತ್ತೆ. ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಶಿವಲಿಂಗೇಗೌಡ್ರು ಶೇ 100ಕ್ಕೆ 100ರಷ್ಟು ಕಾಂಗ್ರೆಸ್​ಗೆ ಬರುತ್ತಾರೆ. ಅನುಮಾನನಾ ? ಚುನಾವಣೆಯಾದಮೇಲೆ ಬೇಕಾದರೂ ಸೇರುತ್ತಾರೆ ಎಂದರು.

ಜನಾರ್ಧನ ರೆಡ್ಡಿ ಮುಸ್ಲೀಂ ಸಮುದಾಯದ ಒಲವು ಪಡೆಯುತ್ತಿರೊ ವಿಚಾರವಾಗಿ ಮಾತನಾಡಿದ ಅವರು ಹೊಸ ಪಕ್ಷ ಕಟ್ಟಿದೋರ್ಯಾರು ಉಳಿದಿಲ್ಲ. ಪಾಪ ರೆಡ್ಡಿ ದುಡ್ಡು ಇದೆ ಅಂತ ಪಕ್ಷ ಕಟ್ಟಿದ್ದಾರೆ. ರಾಮುಲು, ಬಂಗಾರಪ್ಪ, ಯಡಿಯೂರಪ್ಪ, ಹಲವರು ಪಕ್ಷ ಕಟ್ಟಿದರು.

ಬಿಜೆಪಿ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್​​ಗೆ ಇಲ್ಲ ಎಂಬ ನಳೀನ್​ ಕುಮಾರ್​ ಕಟೀಲ್​ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ​ ಕಟೀಲು ವಿಧೂಷಕ, ಜೋಕರ್​. ಸಂವಿಧಾನ ನನಗೆ ಮಾತನಾಡುವ ಹಕ್ಕು ಕೊಟ್ಟಿದೆ. ಬಿಜೆಪಿಯವರು ಸಂವಿಧಾನ ಓದಿಕೊಂಡಿದ್ದಾರಾ?ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವುದಕ್ಕೆ ಇವರು ಸುಪ್ರೀಂ ಕೋರ್ಟ್ ಏನು ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Sun, 12 February 23