RIMS Hospital: ಮೈಯೆಲ್ಲಾ ಕೀವು, ವಿರಳ ಕಾಯಿಲೆಗೆ ಉಚಿತ ಚಿಕಿತ್ಸೆ ಕೊಟ್ಟು ಬಾಲಕನ ಜೀವ ಉಳಿಸಿದ ರಿಮ್ಸ್ ಆಸ್ಪತ್ರೆ ವೈದ್ಯರು

| Updated By: ಆಯೇಷಾ ಬಾನು

Updated on: Dec 15, 2021 | 1:31 PM

ಮಕ್ಕಳನ್ನೆ ಟಾರ್ಗೆಟ್ ಮಾಡುವ ಆ ಖಾಯಿಲೆ ಡಿಸ್ಎಮಿನೆಟೆಡ್ ಸ್ಟಾಫಿಲೋಕಾಕಲ್ ಸೆಪ್ಸಿಸ್. ಇಂತಹ ಭಯಾನಕ ಖಾಯಿಲೆಗೆ ತುತ್ತಾಗಿದ್ದ ಬಾಲಕನಿಗೆ ರಾಯಚೂರು ರಿಮ್ಸ್ ಆಸ್ಪತ್ರೆ ಮಕ್ಕಳ ತಜ್ಞರು ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿ, ಬಾಲಕನ ಪ್ರಾಣ ಉಳಿಸಿದ್ದಾರೆ.

RIMS Hospital: ಮೈಯೆಲ್ಲಾ ಕೀವು, ವಿರಳ ಕಾಯಿಲೆಗೆ ಉಚಿತ ಚಿಕಿತ್ಸೆ ಕೊಟ್ಟು ಬಾಲಕನ ಜೀವ ಉಳಿಸಿದ ರಿಮ್ಸ್ ಆಸ್ಪತ್ರೆ ವೈದ್ಯರು
RIMS Hospital: ಮೈಯೆಲ್ಲಾ ಕೀವು, ವಿರಳ ಕಾಯಿಲೆಗೆ ಉಚಿತ ಚಿಕಿತ್ಸೆ ಕೊಟ್ಟು ಬಾಲಕನ ಜೀವ ಉಳಿಸಿದ ರಿಮ್ಸ್ ಆಸ್ಪತ್ರೆ ವೈದ್ಯರು
Follow us on

ರಾಯಚೂರು: ಮಕ್ಕಳನ್ನ ಕಾಡುವ ಆ ಭೀಕರ ಕಾಯಿಲೆಗೆ ತುತ್ತಾದ ಮಕ್ಕಳು 100 ಕ್ಕೆ 99 ರಷ್ಟು ಉಳಿಯೋದೆ ಡೌಟ್ ಅಂತಲೇ ವೈದ್ಯರು ವಿಶ್ಲೇಷಿಸುತ್ತಾರೆ. ಚರ್ಮದಲ್ಲಿ ಇನ್ಫೆಕ್ಷನ್ ಆಗಿ ಇಡೀ ದೇಹಕ್ಕೆ ಸೊಂಕು ಹರಡುತ್ತದೆ. ಇದರಿಂದ ಹೃದಯ, ಪಕ್ಕೆಲುಬು ಹಾಗೂ ಕೀಲುಗಳಲ್ಲಿ ಕೀವು ತುಂಬಿ ಜೀವಕ್ಕೆ ಗಂಡಾಂತರ ಸೃಷ್ಟಿಸುತ್ತದೆಯಂತೆ ಆ ಭಯಾನಕ ಖಾಯಿಲೆ.

ಮಕ್ಕಳನ್ನೆ ಟಾರ್ಗೆಟ್ ಮಾಡುವ ಆ ಖಾಯಿಲೆ ಡಿಸ್ಎಮಿನೆಟೆಡ್ ಸ್ಟಾಫಿಲೋಕಾಕಲ್ ಸೆಪ್ಸಿಸ್(Disseminated Staphylococcal Sepsis). ಇಂತಹ ಭಯಾನಕ ಖಾಯಿಲೆಗೆ ತುತ್ತಾಗಿದ್ದ ಬಾಲಕನಿಗೆ ರಾಯಚೂರು ರಿಮ್ಸ್ ಆಸ್ಪತ್ರೆ ಮಕ್ಕಳ ತಜ್ಞರು ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿ, ಬಾಲಕನ ಪ್ರಾಣ ಉಳಿಸಿದ್ದಾರೆ. ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದ ರಾಮು ಅನ್ನೊ ಬಾಲಕ ಶಾಲೆಗೆ ಹೋದಾಗ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದ. ಬಳಿಕ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಾಲಕ ರಾಮು ತಂದೆ ಹನುಮಂತ ಕೂಲಿ ಕೆಲಸ ಮಾಡೋರು ಹೀಗಿದ್ರು ಮಗನ ಪ್ರಾಣ ಉಳಿಸೋಕೆ ಸುಮಾರು 1 ಲಕ್ಷದ ವರೆಗೆ ಸಾಲ ಮಾಡಿ, ಚಿಕಿತ್ಸೆ ಕೊಡಿಸಿದ್ರು. ಆದ್ರೆ ಒಂದು ವಾರಗಳ ಚಿಕಿತ್ಸೆ ಬಳಿಕ ಖಾಸಗಿ ಆಸ್ಪತ್ರೆ ವೈದ್ಯರು ಬಾಲಕ ಬದುಕುಳಿಯೊದು ಕಷ್ಟ. ಬೆಂಗಳೂರು ಇಲ್ಲ, ಹೈದರಾಬಾದ್ ಕರೆದುಕೊಂಡು ಹೋಗುವಂತೆ ಸೂಚಿಸಿದ್ರು.

ಆಗ ಬಾಲಕ ರಾಮು ತಂದೆ ಹೆಚ್ಚಿನ ಹಣವಿಲ್ಲದೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ರು. ಆಗ ಮಕ್ಕಳ ತಜ್ಞರು ಭಯಾನಕ ಖಾಯಿಲೆಯನ್ನು ಪತ್ತೆ ಹಚ್ಚಿ, ಒಟ್ಟು 19 ದಿನಗಳ ಕಾಲ ಬಾಲಕನನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಟ್ಟಿದ್ರು. ಆಗ ವೈದ್ಯರು ಹೃದಯ, ಪಕ್ಕೆಲುಬು ಹಾಗೂ ಕೀಲುಗಳಲ್ಲಿನ ಕೀವು ಹೊರ ತೆಗೆದು ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿದ್ದಾರೆ. ಇಂತಹ ಖಾಯಿಲೆ ಬರೋದೆ ಅಪರೂಪ, ಒಂದು ವೇಳೆ ಬಂದರೆ ಮಕ್ಕಳು ಬದುಕುಳಿಯೋ ಸಾಧ್ಯತೆ ಕಡಿಮೆ. ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 8-10 ಲಕ್ಷ ಖರ್ಚಾಗತ್ತೆ ಆದ್ರೆ ರಿಮ್ಸ್ ಆಸ್ಪತ್ರೆ ಬಾಲಕ ರಾಮುನಿಗೆ ಉಚಿತ ಚಿಕಿತ್ಸೆ ನೀಡಿ ಜೀವ ಉಳಿಸಿದೆ. ರಿಮ್ಸ್ ಆಸ್ಪತ್ರೆ ವೈದ್ಯರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಅಭಿನಂದನೆಯ ಮಹಾಪುರವೆ ಹರಿದು ಬರ್ತಿದೆ.

ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು

ಇದನ್ನೂ ಓದಿ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್​ರ 71ನೇ ಪುಣ್ಯತಿಥಿ; ಟ್ವೀಟ್ ಮೂಲಕ ಗೌರವ ಸಲ್ಲಿಸಿ, ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ