ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ರ 71ನೇ ಪುಣ್ಯತಿಥಿ; ಟ್ವೀಟ್ ಮೂಲಕ ಗೌರವ ಸಲ್ಲಿಸಿ, ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
Sardar Vallabhbhai Patel Death Anniversary: ಭಾರತ ಬ್ರಿಟೀಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆಯುವುದಕ್ಕೂ ಮೊದಲು ಮತ್ತು ನಂತರ 500ಕ್ಕೂ ಹೆಚ್ಚು ರಾಜಪ್ರಭುತ್ವ ರಾಜ್ಯಗಳ ಏಕೀಕರಣ ಹೋರಾಟದಲ್ಲಿ ಸರ್ದಾರ್ ವಲ್ಲಭಬಾಯಿ ಅವರು ಮುಂಚೂಣಿಯಲ್ಲಿದ್ದರು.
ಭಾರತದ ಮೊದಲ ಗೃಹ ಮಂತ್ರಿ, ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 71ನೇ ಪುಣ್ಯತಿಥಿ ಇಂದು. ಈ ಹೊತ್ತಲ್ಲಿ ಅವರಿಗೆ ಗೌರವ ಸಲ್ಲಿಸಿ ಪ್ರಧಾನಿ ಮೋದಿ ಮತ್ತಿತರ ಗಣ್ಯರು ಟ್ವೀಟ್ ಮಾಡಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ಭಾರತಕ್ಕೆ ಅವರು ನೀಡಿರುವ ಸೇವೆ, ಅವರ ಆಡಳಿತ ಕೌಶಲ, ಇಡೀ ದೇಶವನ್ನು ಒಟ್ಟುಗೂಡಿಸುವ ಅವರ ಪ್ರಯತ್ನಗಳಿಗೆ ನಾವು ಸದಾ ಕೃತಜ್ಞರಾಗಿರಬೇಕು ಎಂದು ಪ್ರಧಾನಿ ಹೇಳಿದ್ದಾರೆ.
Remembering Sardar Patel on his Punya Tithi. India will always be grateful to him for his monumental service, his administrative skills and the untiring efforts to unite our nation.
— Narendra Modi (@narendramodi) December 15, 2021
ಭಾರತ ಬ್ರಿಟೀಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆಯುವುದಕ್ಕೂ ಮೊದಲು ಮತ್ತು ನಂತರ 500ಕ್ಕೂ ಹೆಚ್ಚು ರಾಜಪ್ರಭುತ್ವ ರಾಜ್ಯಗಳ ಏಕೀಕರಣ ಹೋರಾಟದಲ್ಲಿ ಸರ್ದಾರ್ ವಲ್ಲಭಬಾಯಿ ಅವರು ಮುಂಚೂಣಿಯಲ್ಲಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ಮುಂಚೂಣಿಯಲ್ಲಿದ್ದ ನಾಯಕರು. ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಭಾರತದ ಮೊದಲ ಗೃಹ ಸಚಿವರಾಗಿದ್ದರು ಮತ್ತು ಉಪಪ್ರಧಾನಮಂತ್ರಿಯಾಗಿದ್ದರು. ಗುಜರಾತ್ನ ನಾದಿಯಾದ್ನಲ್ಲಿ 1875ರ ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ್ದರು. ಬ್ರಿಟಿಷರ ವಿರುದ್ಧ ಯಾವುದೇ ಸತ್ಯಾಗ್ರಹ, ಪ್ರತಿಭಟನೆಯಿರಲಿ, ಅದರಲ್ಲಿ ಪಟೇಲ್ ಸದಾ ಮುಂದಿರುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿಯವರ ದಾರಿಯನ್ನೇ ಅನುಸರಿಸಿದ್ದ, ಅವರು ತಮ್ಮ ರಾಜಕೀಯ ಜೀವನದಲ್ಲೂ ಅದನ್ನು ಅಳವಡಿಸಿಕೊಂಡಿದ್ದರು. ಅವರ ಹುಟ್ಟಿದ ದಿನ ಅಂದರೆ ಅಕ್ಟೋಬರ್ 31ನ್ನು ರಾಷ್ಟ್ರಾದ್ಯಂತ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದನ್ನೂ ಕೂಡ ಪ್ರಧಾನಿ ಮೋದಿ ಸರ್ಕಾರವೇ ಪ್ರಾರಂಭ ಮಾಡಿದೆ. ಇಂದು ಅವರ ಪುಣ್ಯತಿಥಿಯಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಇತರರು ಟ್ವೀಟ್ ಮೂಲಕ ಗೌರವ ಸಲ್ಲಿಸಿ, ಮಹಾನ್ ನಾಯಕನನ್ನು ಸ್ಮರಿಸಿದ್ದಾರೆ.
ಇದನ್ನೂ ಓದಿ: Semiconductor manufacturing PLI: ಸೆಮಿಕಂಡಕ್ಟರ್ ಉತ್ಪಾದನೆಗೆ ಕೇಂದ್ರದಿಂದ 76 ಸಾವಿರ ಕೋಟಿ ರೂ.