Captain Varun Singh Profile ತೇಜಸ್ ವಿಮಾನ ಅಪಘಾತ ತಪ್ಪಿಸಿದ್ದಕ್ಕೆ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಾಗಿದ್ದರು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್

ವರುಣ್ ಸಿಂಗ್ ಉತ್ತರ ಪ್ರದೇಶದ ಡಿಯೋರಿಯಾದವರು. ಸೇನೆ ಮತ್ತು ರಾಜಕಾರಣಿಗಳ ಕುಟುಂಬ ಅವರದ್ದು. ಅವರ ತಂದೆ ಕರ್ನಲ್ ಕೆಪಿ ಸಿಂಗ್ ಅವರು ಸೇನೆಯಿಂದ ಕರ್ನಲ್ ಆಗಿ ನಿವೃತ್ತರಾಗಿದ್ದರು ಮತ್ತು ಅವರ ಚಿಕ್ಕಪ್ಪ ಅಖಿಲೇಶ್ ಪ್ರತಾಪ್ ಸಿಂಗ್ ಕಾಂಗ್ರೆಸ್ ನಾಯಕರಾಗಿದ್ದಾರೆ. 

Captain Varun Singh Profile ತೇಜಸ್ ವಿಮಾನ ಅಪಘಾತ ತಪ್ಪಿಸಿದ್ದಕ್ಕೆ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಾಗಿದ್ದರು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್
ವರುಣ್ ಸಿಂಗ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 15, 2021 | 2:10 PM

ಸಿಡಿಎಸ್ ಜನರಲ್ ಬಿಪಿನ್ ರಾವತ್ (CDS Gen Bipin Rawat), ಅವರ ಪತ್ನಿ ಮತ್ತು 11 ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಬಲಿತೆಗೆದುಕೊಂಡ ಕುನೂರ್ ಬಳಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ(chopper crash) ಗಂಭೀರವಾಗಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (Group Captain Varun Singh) ಅವರು ಬುಧವಾರ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಚ್ಚೆದೆಯ   ಗ್ರೂಪ್ ಕ್ಯಾಪ್ಟನ್ ಇಂದು ಬೆಳಿಗ್ಗೆ ನಿಧನರಾದರು ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ. 08 ಡಿಸೆಂಬರ್ 21 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡು ಇಂದು ಬೆಳಿಗ್ಗೆ ನಿಧನರಾದ ಕೆಚ್ಚೆದೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನವನ್ನು ತಿಳಿಸಲು ಐಎಎಫ್ ಗೆ ತೀವ್ರ ದುಃಖವಾಗುತ್ತದೆ. ಐಎಎಫ್ ಸಂತಾಪವನ್ನು ಸೂಚಿಸುತ್ತದೆ ಮತ್ತು ದುಃಖಿತ ಕುಟುಂಬದೊಂದಿಗೆ ದೃಢವಾಗಿ ನಿಂತಿದೆ ಎಂದು ವಾಯುಪಡೆ ಟ್ವೀಟ್ ಮಾಡಿದೆ .

ಕಳೆದ ಗುರುವಾರ, ಗ್ರೂಪ್ ಕ್ಯಾಪ್ಟನ್ ಸಿಂಗ್ ಅವರನ್ನು ತಮಿಳುನಾಡಿನ ವೆಲ್ಲಿಂಗ್ಟನ್‌ನಿಂದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.  ಕೂನೂರು ಬಳಿ ಕಳೆದ ಬುಧವಾರನಡೆದ ಎಂಐ-17ವಿ5 ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 11 ಸಶಸ್ತ್ರ ಪಡೆ ಸಿಬ್ಬಂದಿ ಮೃತಪಟ್ಟಿದ್ದು, ವರುಣ್ ಸಿಂಗ್ ಮಾತ್ರ ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದರು.

ಕಳೆದ ವರ್ಷ ಅವರ ತೇಜಸ್ ಲಘು ಯುದ್ಧ ವಿಮಾನದಲ್ಲಿ ಪ್ರಮುಖ ತಾಂತ್ರಿಕ ತೊಂದರೆ ಕಾಣಿಸಿಕೊಂಡಾಗ ಸಂಭವನೀಯ  ಅಪಘಾತವನ್ನು ತಪ್ಪಿಸಿದ್ದಕ್ಕಾಗಿ ಆಗಸ್ಟ್‌ನಲ್ಲಿ ಅವರಿಗೆ ಶೌರ್ಯ ಚಕ್ರ ನೀಡಿ ಗೌರವಿಸಲಾಗಿತ್ತು.

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಯಾರು? ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅಕ್ಟೋಬರ್ 2020ರಲ್ಲಿ ವಿಮಾನ ಹಾರಾಟದ ಸಮಯದಲ್ಲಿ ಪ್ರಮುಖ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದ ನಂತರ ಅವರು ತಮ್ಮ ತೇಜಸ್ ಫೈಟರ್ ಜೆಟ್ ಅನ್ನು ನಿಭಾಯಿಸುವ ಮೂಲಕ ಧೈರ್ಯ ತೋರಿಸಿದ್ದಕ್ಕಾಗಿ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿತ್ತು. ಅನೇಕ ತಾಂತ್ರಿಕ ವೈಫಲ್ಯಗಳಿಂದ ಯುದ್ಧ ವಿಮಾನ ನಿಯಂತ್ರಣವನ್ನು ಕಳೆದುಕೊಂಡರೂ ಅವರು ತೇಜಸ್ ವಿಮಾನವನ್ನು ಯಶಸ್ವಿಯಾಗಿ ಇಳಿಸಿದ್ದರು.

ವರುಣ್ ಸಿಂಗ್ ಉತ್ತರ ಪ್ರದೇಶದ ಡಿಯೋರಿಯಾದವರು. ಸೇನೆ ಮತ್ತು ರಾಜಕಾರಣಿಗಳ ಕುಟುಂಬ ಅವರದ್ದು. ಅವರ ತಂದೆ ಕರ್ನಲ್ ಕೆಪಿ ಸಿಂಗ್ ಅವರು ಸೇನೆಯಿಂದ ಕರ್ನಲ್ ಆಗಿ ನಿವೃತ್ತರಾಗಿದ್ದರು ಮತ್ತು ಅವರ ಚಿಕ್ಕಪ್ಪ ಅಖಿಲೇಶ್ ಪ್ರತಾಪ್ ಸಿಂಗ್ ಕಾಂಗ್ರೆಸ್ ನಾಯಕರಾಗಿದ್ದಾರೆ.  ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಸಂಪರ್ಕ ಅಧಿಕಾರಿಯಾಗಿದ್ದರು.

ಇದನ್ನೂ ಓದಿ:  Varun Singh: ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದಿದ್ದ ಏಕೈಕ ಅಧಿಕಾರಿ ಗ್ರೂಪ್​ ಕ್ಯಾಪ್ಟನ್​ ವರುಣ್ ಸಿಂಗ್​ ನಿಧನ

Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
Bigg Boss: ರಜತ್ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಿದ ಕಿಚ್ಚ ಸುದೀಪ್
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ