Varun Singh: ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದಿದ್ದ ಏಕೈಕ ಅಧಿಕಾರಿ ಗ್ರೂಪ್​ ಕ್ಯಾಪ್ಟನ್​ ವರುಣ್ ಸಿಂಗ್​ ನಿಧನ

Tamil Nadu Chopper Crash: ಡಿ.8ರಂದು ತಮಿಳುನಾಡಿನ ಕೂನೂರು ಬಳಿಯ ಕಟ್ಟೇರಿ ಎಂಬ ಗುಡ್ಡಗಾಡು ಗ್ರಾಮದ ಬಳಿ ಸೇನಾ ವಿಐಪಿ ಹೆಲಿಕಾಪ್ಟರ್​ ಪತನಗೊಂಡಿತ್ತು. ಅವರು ಸೂಲೂರಿಂದ ವೆಲ್ಲಿಂಗ್ಟನ್​ಗೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಅವಘಡ ಆಗಿತ್ತು.

Varun Singh: ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದಿದ್ದ ಏಕೈಕ ಅಧಿಕಾರಿ ಗ್ರೂಪ್​ ಕ್ಯಾಪ್ಟನ್​ ವರುಣ್ ಸಿಂಗ್​ ನಿಧನ
Varun Singh
Follow us
TV9 Web
| Updated By: Digi Tech Desk

Updated on:Dec 15, 2021 | 1:29 PM

Varun Singh Passes Away: ತಮಿಳು ನಾಡಿನ (Tamil Nadu Chopper Crash) ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ಪತನ (IAF Chopper Crash) ದುರಂತದಲ್ಲಿ ಬದುಕುಳಿದಿದ್ದ ಏಕೈಕ ಸೇನಾ ಅಧಿಕಾರಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್ (Group Captain Varun Singh) ಇಂದು ನಿಧನರಾಗಿದ್ದಾರೆ. ಡಿ. 8ರಂದು ನಡೆದ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್ (Bipin Rawat), ಅವರ ಪತ್ನಿ ಮಧುಲಿಕಾ ರಾವತ್ (Madhulika Rawat) ಮತ್ತು ಇತರ 11 ಸೇನಾಧಿಕಾರಿಗಳು ಸೇರಿ 13 ಮಂದಿ ಮೃತಪಟ್ಟಿದ್ದರು. ವರುಣ್​ ಸಿಂಗ್ (Varun Singh) ಮಾತ್ರ ಬದುಕುಳಿದಿದ್ದರು. ಶೇ.45ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ (Commando Hospital) ಅಂದಿನಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು. ಮೊದಲು ವೆಲ್ಲಿಂಗ್ಟನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿತ್ತು.

ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ನಿಧನದ ಬಗ್ಗೆ ಭಾರತೀಯ ವಾಯುಸೇನೆ ಟ್ವೀಟ್ ಮಾಡಿ, ಸಂತಾಪ ಸೂಚಿಸಿದೆ. ವೀರಯೋಧ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ನಿಧನ ತುಂಬ ನೋವು ತಂದಿದೆ. ಡಿ.8ರ ಅವಘಡದಲ್ಲಿ ಅವರು ಗಾಯಗೊಂಡಿದ್ದರು. ವರುಣ್​ ಸಿಂಗ್ ಕುಟುಂಬದೊಂದಿಗೆ ನಾವು ಇದ್ದೇವೆ ಎಂದು ಹೇಳಿದೆ.

ಡಿ.8ರಂದು ತಮಿಳುನಾಡಿನ ಕೂನೂರು ಬಳಿಯ ಕಟ್ಟೇರಿ ಎಂಬ ಗುಡ್ಡಗಾಡು ಗ್ರಾಮದ ಬಳಿ ಸೇನಾ ವಿಐಪಿ ಹೆಲಿಕಾಪ್ಟರ್​ ಪತನಗೊಂಡಿತ್ತು. ಅವರು ಸೂಲೂರಿಂದ ವೆಲ್ಲಿಂಗ್ಟನ್​ಗೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಅವಘಡ ಆಗಿತ್ತು. ಅದರಲ್ಲಿ ಭಾರತದ ಮೊದಲ ಸಿಡಿಎಸ್​ ಬಿಪಿನ್​ ರಾವತ್​ ಸೇರಿ 11 ಮಂದಿ ಸೇನಾಧಿಕಾರಿಗಳು ಇದ್ದರು. ದುರಂತದಲ್ಲಿ ಅಂದು ಮೃತಪಟ್ಟವರ ಮೃತದೇಹ ಗುರುತು ಪತ್ತೆ, ಅಂತ್ಯಸಂಸ್ಕಾರ ನಡೆದಿದೆ. ಆದರೆ ವರುಣ್​ ಸಿಂಗ್​ ಒಬ್ಬರು ಬದುಕುಳಿದಿದ್ದರು. ವರುಣ್​ ಸಿಂಗ್​ ಆರೋಗ್ಯ ಸ್ಥಿತಿ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ಅವರ ಕುಟುಂಬಸ್ಥರೇ ಹೇಳಿದ್ದರು. ಆದರೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಭಾರತೀಯ ವಾಯುಸೇನೆ, ವರುಣ್​ ಸಿಂಗ್ ಗಂಭೀರ ಸ್ಥಿತಿಯಲ್ಲಿಯೇ ಇದ್ದಾರೆ. ಆದರೆ ಅವರು ಗುಣಮುಖರಾಗುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿತ್ತು.

ಕಳೆದ ಆಗಸ್ಟ್ 15ರಂದು ವಿಂಗ್ ಕಮಾಂಡರ್​ ವರುಣ್ ಸಿಂಗ್ ಅವರು ಹಗುರ ಯುದ್ಧ ವಿಮಾನ (Light Combat Aircraft – LCA) ಸ್ಕ್ವಾರ್ಡನ್​ನಲ್ಲಿ ಪೈಲಟ್ ಆಗಿದ್ದರು. ಅವರಿಗೆ ಭಾರತದ ಸಶಸ್ತ್ರಪಡೆಗಳಿಗೆ ಶಾಂತಿಕಾಲದಲ್ಲಿ ನೀಡುವ ಮೂರನೇ ಅತ್ಯುನ್ನತ ಗೌರವವಾದ ಶೌರ್ಯಚಕ್ರ ನೀಡಿ ಪುರಸ್ಕರಿಸಲಾಗಿತ್ತು

ಇದನ್ನೂ ಓದಿ: ಮಗಳ ಕ್ಷೇಮಕ್ಕಾಗಿ ಪಾಲಕರು ನೀಡುವ ಉಡುಗೊರೆ ವರದಕ್ಷಿಣೆ ಅಲ್ಲ: ಕೇರಳ ಹೈಕೋರ್ಟ್

Published On - 12:52 pm, Wed, 15 December 21

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು