ಆಂಧ್ರಪ್ರದೇಶದಲ್ಲಿ ಕಾಲುವೆಗೆ ಬಿದ್ದ ಸರ್ಕಾರಿ ಬಸ್​; 9 ಮಂದಿ ಸಾವು, ಹಲವರಿಗೆ ಗಾಯ

ಆಂಧ್ರಪ್ರದೇಶದಲ್ಲಿ ಕಾಲುವೆಗೆ ಬಿದ್ದ ಸರ್ಕಾರಿ ಬಸ್​; 9 ಮಂದಿ ಸಾವು, ಹಲವರಿಗೆ ಗಾಯ
ಕಾಲುವೆಗೆ ಬಿದ್ದ ಬಸ್ (ಫೋಟೋ ಕೃಪೆ-ಟಿವಿ9 ತೆಲುಗು)

ಎದುರಿನಿಂದ ಬಂದ ಲಾರಿಗೆ ಬಸ್​ ಗುದ್ದುವುದನ್ನು ತಪ್ಪಿಸಲು ಹೋದ ಚಾಲಕನಿಗೆ ಸಮತೋಲನ ತಪ್ಪಿದ್ದೇ ದುರಂತಕ್ಕೆ ಕಾರಣ. ಲಾರಿ ತಪ್ಪಿಸಲು ಹೋಗಿ, ಪಕ್ಕದಲ್ಲಿದ್ದ ಕಾಲುವೆಗೆ ಬಸ್​ ಬಿದ್ದಿದೆ.

TV9kannada Web Team

| Edited By: Lakshmi Hegde

Dec 15, 2021 | 1:41 PM

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಬಸ್​ ಅಪಘಾತಕ್ಕೀಡಾಗಿದ್ದು, 9ಮಂದಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಸುಮಾರು 47 ಪ್ರಯಾಣಿಕರು ಇದ್ದ ಆಂಧ್ರಪ್ರದೇಶ ರಸ್ತೆ ಸಾರಿಗೆ ಬಸ್ (APSRTC)​ ಇದಾಗಿದ್ದು, ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿಗುಡೆಂ ವಲಯದ ಜಲ್ಲೇರುವಗು ಎಂಬಲ್ಲಿ ಕಾಲುವೆಗೆ ಬಿದ್ದ ಪರಿಣಾಮ ಅವಘಡ ನಡೆದಿದೆ. ಈ ಬಸ್​ ಪಶ್ಚಿಮ ಗೋದಾವರಿಯ ಜಂಗಾರೆಡ್ಡಿ ಗುಡೆಂನಿಂದ ಭದ್ರಾದ್ರಿ ಕೊಥಗುಡೆಂನಲ್ಲಿರುವ ಅಶ್ವರಾವ್​ ಪೇಟೆಗೆ ತೆರಳುತ್ತಿತ್ತು.

ಎದುರಿನಿಂದ ಬಂದ ಲಾರಿಗೆ ಬಸ್​ ಗುದ್ದುವುದನ್ನು ತಪ್ಪಿಸಲು ಹೋದ ಚಾಲಕನಿಗೆ ಸಮತೋಲನ ತಪ್ಪಿದ್ದೇ ದುರಂತಕ್ಕೆ ಕಾರಣ. ಬಸ್​​ ಲಾರಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ, ಸಮೀಪದ ಕಾಲುವೆಗೆ ಬಿದ್ದು, ಅಲ್ಲಿಯೇ ಮುಳುಗಿದೆ. ಈ ದೃಶ್ಯವನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ‘ಆಡಿಷನ್​ ವೇಳೆ ಸೊಂಟ, ಎದೆ ಸೈಜ್​ ಬಗ್ಗೆ ಪ್ರಶ್ನೆ ಕೇಳಲಾಗಿತ್ತು’; ಕನ್ನಡ ಸಿನಿಮಾದಲ್ಲಿ ನಟಿಸಿದ ಹೀರೋಯಿನ್​ಗೆ ಕಹಿ ಅನುಭವ

Follow us on

Related Stories

Most Read Stories

Click on your DTH Provider to Add TV9 Kannada