AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Varun Singh Death: ವರುಣ್​ ಸಿಂಗ್​ ನಿಧನ ಸುದ್ದಿ ಕೇಳಿ ಅತ್ಯಂತ ವೇದನೆಯಾಯಿತು; ಪ್ರಧಾನಿ ಮೋದಿ ಸಂತಾಪ

ಜೀವನ್ಮರಣದ ನಡುವೆ ಹೋರಾಟ ನಡೆಸಿದ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಮರಣದಿಂದ ನೋವಾಗಿದೆ. ಅವರು ಶೌರ್ಯ ಮತ್ತು ಅದಮ್ಯ ಧೈರ್ಯ ಮನೋಭಾವ ಪ್ರದರ್ಶಿಸಿದ್ದ ಸೈನಿಕ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.

Varun Singh Death: ವರುಣ್​ ಸಿಂಗ್​ ನಿಧನ ಸುದ್ದಿ ಕೇಳಿ ಅತ್ಯಂತ ವೇದನೆಯಾಯಿತು; ಪ್ರಧಾನಿ ಮೋದಿ ಸಂತಾಪ
ವರುಣ್ ಸಿಂಗ್ ಮತ್ತು ಪ್ರಧಾನಿ ಮೋದಿ
TV9 Web
| Edited By: |

Updated on: Dec 15, 2021 | 3:01 PM

Share

Varun Singh Passes Away: ತಮಿಳುನಾಡಿನ ಸೇನಾ ಹೆಲಿಕಾಪ್ಟರ್ ಪತನ(Tamil Nadu Chopper Crash)ದಲ್ಲಿ ಗಾಯಗೊಂಡಿದ್ದ ಗ್ರೂಪ್​ ಕ್ಯಾಪ್ಟನ್ ವರುಣ್​ ಸಿಂಗ್ (Group Captain Varun Singh) ಇಂದು ನಿಧನರಾಗಿದ್ದಾರೆ. ವರುಣ್​ ಸಿಂಗ್​ ನಿಧನಕ್ಕೆ ಇಡೀ ರಾಷ್ಟ್ರವೇ ಸಂತಾಪ ಸೂಚಿಸುತ್ತಿದೆ. ರಾಜಕೀಯ ಪಕ್ಷಗಳ ನಾಯಕರು, ರಕ್ಷಣಾ ಅಧಿಕಾರಿಗಳು, ಗಣ್ಯರು, ಸಾರ್ವಜನಿಕರು ವರುಣ್​ ಸಿಂಗ್​​ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಡಿಸೆಂಬರ್ 8ರಂದು ತಮಿಳುನಾಡಿನಲ್ಲಿ ನಡೆದಿದ್ದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ಮತ್ತು 11 ಸೇನಾಧಿಕಾರಿಗಳು ಮೃತಪಟ್ಟಿದ್ದರು. ಬದುಕುಳಿದಿದ್ದು ವರುಣ್​ ಸಿಂಗ್ ಮಾತ್ರವಾಗಿತ್ತು.  ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಸುಮಾರು 1 ವಾರಗಳ ಕಾಲ ಜೀವನ್ಮರಣ ಹೋರಾಟ ನಡೆಸಿ, ಇಂದು ಕೊನೆಯುಸಿರೆಳೆದಿದ್ದಾರೆ. ಭಾರತೀಯ ವಾಯುಸೇನೆ ವರುಣ್​ ಸಿಂಗ್​ ಮರಣವನ್ನು ದೃಢಪಡಿಸುತ್ತಿದ್ದಂತೆ ಪ್ರಧಾನಿ ಮೋದಿ ಸೇರಿ, ಹಲವರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.  

ಪ್ರಧಾನಮಂತ್ರಿ ನರೇಂದ್ರ ಮೋದಿ: ಗ್ರೂಪ್​ ಕ್ಯಾಪ್ಟನ್​ ವರುಣ್ ಸಿಂಗ್​ ಅವರು ಹೆಮ್ಮೆ, ವೃತ್ತಿಪರತೆ ಮತ್ತು ಶೌರ್ಯದಿಂದ ಈ ದೇಶದಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ನನಗೆ ತುಂಬ ವೇದನೆಯಾಗುತ್ತಿದೆ. ದೇಶಕ್ಕೆ ಅವರು ಸಲ್ಲಿಸಿದ ಸೇವೆಯನ್ನೆಂದೂ ನಾವು ಮರೆಯಲು ಸಾಧ್ಯವಿಲ್ಲ. ಅವರ ಕುಟುಂಬಸ್ಥರು, ಸ್ನೇಹಿತರು ಮತ್ತು ಆಪ್ತರಿಗೆ ನನ್ನ ಸಾಂತ್ವನಗಳು. ಓಂ ಶಾಂತಿ.

ಗೃಹ ಸಚಿವ ಅಮಿತ್​ ಶಾ: ಗ್ರೂಪ್​ ಕ್ಯಾಪ್ಟನ್​ ವರುಣ್ ಸಿಂಗ್​ ನಿಧನದ ಸುದ್ದಿ ಕೇಳಿ ತುಂಬ ನೋವಾಯಿತು. ಅವರ ವೀರ ಆತ್ಮಕ್ಕೆ ದೇವರು ಆಶೀರ್ವದಿಸಲಿ. ಅವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ರಾಷ್ಟ್ರಪತಿ ರಾಮನಾಥ ಕೋವಿಂದ್​: ಜೀವನ್ಮರಣದ ನಡುವೆ ಹೋರಾಟ ನಡೆಸಿದ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಮರಣದಿಂದ ನೋವಾಗಿದೆ. ಅವರು ಶೌರ್ಯ ಮತ್ತು ಅದಮ್ಯ ಧೈರ್ಯ ಮನೋಭಾವ ಪ್ರದರ್ಶಿಸಿದ್ದ ಸೈನಿಕ. ಇಡೀ ರಾಷ್ಟ್ರ ಅವರಿಗೆ ಆಭಾರಿಯಾಗಿದೆ. ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ: ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ನಿಧನದ ಸುದ್ದಿ ಕೇಳಿ ಸಂಕಟವಾಯಿತು. ಅವರ ಅತ್ಯಮೂಲ್ಯ ಸೇವೆಯನ್ನು ದೇಶವೆಂದೂ ಮರೆಯುವುದಿಲ್ಲ. ವರುಣ್ ಸಿಂಗ್ ಶೌರ್ಯಕ್ಕೆ ನನ್ನ ಸಲಾಂ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ: ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಅವರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ನನ್ನ ಸಾಂತ್ವನಗಳು. ಇಡೀ ದೇಶಕ್ಕೆ ಇದೊಂದು ದುಃಖದ ಸನ್ನಿವೇಶ. ವರುಣ್​ ಸಿಂಗ್​ ಕುಟುಂಬದೊಂದಿಗೆ ನಾವಿದ್ದೇವೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​: ವರುಣ್ ಸಿಂಗ್ ಸಾವಿನ ಸುದ್ದಿ ಕೇಳಿ ನನಗೆ ಆಗುತ್ತಿರುವ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೊನೆಯ ಉಸಿರು ಇರುವವರೆಗೂ ಹೋರಾಡಿದ ವೀರ ಅವರು. ಇಂಥ ದುಃಖದ ಸನ್ನಿವೇಶದಲ್ಲಿ ಅವರ ಕುಟುಂಬದೊಟ್ಟಿಗೆ ನಾವಿದ್ದೇವೆ.

ಇನ್ನುಳಿದಂತೆ ಭಾರತದ ಮಾಜಿ ಕ್ರಿಕೆಟರ್​ಗಳಾದ ವಿವಿಎಸ್ ಲಕ್ಷ್ಮಣ್​, ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್​​ ಕೂಡ ಸಂತಾಪ ಸೂಚಿಸಿದ್ದಾರೆ. ಹಾಗೇ, ಬಹುತೇಕ ಎಲ್ಲ ಕೇಂದ್ರ ಸಚಿವರುಗಳು, ಕಾಂಗ್ರೆಸ್​ ನಾಯಕರು, ಭಾರತೀಯ ಸೇನೆ ಎಡಿಜಿ, ಜನರಲ್​ ಎಂ.ಎಂ.ನರವಾಣೆ, ಎಲ್ಲ ಶ್ರೇಣಿಯ ಸೇನಾಧಿಕಾರಿಗಳೂ ಕೂಡ ಟ್ವೀಟ್ ಮೂಲಕ ನೋವು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊವಿಡ್ ನಿರೋಧಕ ಲಸಿಕಾ ಆಂದೋಲನಕ್ಕೆ ಇನ್ನಷ್ಟು ವೇಗ: ಜೈಕೋವ್ ಲಸಿಕೆ ಶೀಘ್ರ ಲಭ್ಯ

Follow Us
TV9 Web
TV9 Web

TV9 Kannada

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು