ಮಗಳ ಕ್ಷೇಮಕ್ಕಾಗಿ ಪಾಲಕರು ನೀಡುವ ಉಡುಗೊರೆ ವರದಕ್ಷಿಣೆ ಅಲ್ಲ: ಕೇರಳ ಹೈಕೋರ್ಟ್

Kerala High Court ಯಾವುದೇ ಬೇಡಿಕೆಯಿಲ್ಲದೆ ಮದುವೆಯ ಸಮಯದಲ್ಲಿ ವಧುವಿಗೆ ನೀಡಿದ ಉಡುಗೊರೆಗಳು ಮತ್ತು ಈ ಅಧಿನಿಯಮದ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿ ನಿರ್ವಹಿಸಲಾದ ಪಟ್ಟಿಯಲ್ಲಿ ನಮೂದಿಸಲಾದವುಗಳು ಸೆಕ್ಷನ್ 3 (1)ರ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದ ಕೇರಳ ಹೈಕೋರ್ಟ್

ಮಗಳ ಕ್ಷೇಮಕ್ಕಾಗಿ ಪಾಲಕರು ನೀಡುವ ಉಡುಗೊರೆ ವರದಕ್ಷಿಣೆ ಅಲ್ಲ: ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 15, 2021 | 12:48 PM

ತಿರುವನಂತಪುರಂ: ಮಹತ್ವದ ತೀರ್ಪಿನಲ್ಲಿ ಕೇರಳ ಹೈಕೋರ್ಟ್ (Kerala High Court) ವರದಕ್ಷಿಣೆ ನಿಷೇಧ ಕಾಯ್ದೆ, 1961 ರ ಅಡಿಯಲ್ಲಿ(Dowry Prohibition Act, 1961) ವಧುವಿನ ಕ್ಷೇಮಕ್ಕಾಗಿ ಮದುವೆಯ ಸಮಯದಲ್ಲಿ ನೀಡಿದ ಉಡುಗೊರೆಗಳನ್ನು ವರದಕ್ಷಿಣೆ (Dowry) ಎಂದು ಪರಿಗಣಿಸಲಾಗುವುದಿಲ್ಲ ಎಂದು ತೀರ್ಪು ನೀಡಿದೆ.  ನೊಂದ ಪತಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಎಂ.ಆರ್. ಅನಿತಾ ಅವರು,  ಯಾವುದೇ ಬೇಡಿಕೆಯಿಲ್ಲದೆ ಮದುವೆಯ ಸಮಯದಲ್ಲಿ ವಧುವಿಗೆ ನೀಡಿದ ಉಡುಗೊರೆಗಳು ಮತ್ತು ಈ ಅಧಿನಿಯಮದ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಅನುಸಾರವಾಗಿ ನಿರ್ವಹಿಸಲಾದ ಪಟ್ಟಿಯಲ್ಲಿ ನಮೂದಿಸಲಾದವುಗಳು ಸೆಕ್ಷನ್ 3 (1)ರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದು ವರದಕ್ಷಿಣೆ ನೀಡುವುದನ್ನು ಅಥವಾ ತೆಗೆದುಕೊಳ್ಳುವುದನ್ನು ನಿಷೇಧಿಸುತ್ತದೆ ಎಂದಿದ್ದಾರೆ.  ಅರ್ಜಿದಾರರು ಇಲ್ಲಿನ 4ನೇ ಪ್ರತಿವಾದಿ ದೀಪ್ತಿ ಕೆ.ಎಸ್ ಅವರ ಪತಿ. ಅರ್ಜಿದಾರರ ಪ್ರಕಾರ, ಅವರು 2020 ರಲ್ಲಿ ಹಿಂದೂ ಪದ್ಧತಿ ಮತ್ತು ಆಚರಣೆಗಳ ಪ್ರಕಾರ ದೀಪ್ತಿ ಅವರನ್ನು ವಿವಾಹವಾದರು. ಮದುವೆಯ ನಂತರ ಅವರು ಅರ್ಜಿದಾರರ ಸ್ಥಳದಲ್ಲಿ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಅವರ ಸಂಬಂಧ ಹಳಸಿತು. ವರದಕ್ಷಿಣೆ ನೋಡಲ್ ಅಧಿಕಾರಿಯ ಮುಂದೆ ಅರ್ಜಿ ಸಲ್ಲಿಸುವ ಮೂಲಕ ದೀಪ್ತಿ ಅರ್ಜಿದಾರ ಪತಿ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ ಎಂಬುದು ಅರ್ಜಿದಾರರು ಹೇಳಿದ್ದಾರೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಕೆ.ಪಿ.ಪ್ರದೀಪ್, ಹರೀಶ್ ಎಂ.ಆರ್, ರಶ್ಮಿ ನಾಯರ್ ಟಿ, ಟಿ.ಟಿ ಬಿಜು, ಟಿ. ಥಸ್ಮಿ ಮತ್ತು ಎಂ.ಜೆ ಅನೂಪಾ ಅವರು ವಾದ ಮಂಡಿಸಿ, 4ನೇ ಪ್ರತಿವಾದಿಯ ಕುಟುಂಬವು ಆಕೆಯ ಎಲ್ಲ ಆಭರಣಗಳನ್ನು ದಂಪತಿಯ ಹೆಸರಿನಲ್ಲಿ ಬ್ಯಾಂಕ್ ಲಾಕರ್‌ನಲ್ಲಿ ಠೇವಣಿ ಇರಿಸಿದೆ. ಈ ಲಾಕರ್‌ನ ಕೀ ಕೂಡ ದೀಪ್ತಿ ಬಳಿಯೇ ಇತ್ತು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಆಕೆಯ ಯೋಗಕ್ಷೇಮಕ್ಕಾಗಿ ಉಡುಗೊರೆಯಾಗಿ ನೀಡಿದ ಆಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗಿದ್ದು ಇನ್ನೂ ಹಿಂತಿರುಗಿಸಿಲ್ಲ ಎಂಬ ಆರೋಪ ಕೇಳಿಬಂದಿರುವುದರಿಂದ ಅರ್ಜಿಯನ್ನು ಪರಿಗಣಿಸಲು ಜಿಲ್ಲಾ ವರದಕ್ಷಿಣೆ ನಿಷೇಧ ಅಧಿಕಾರಿಗೆ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದರು.   ಪ್ರತಿವಾದಿಗಳ ಪರವಾಗಿ ವಕೀಲ ಕೆ.ವಿ.ಅನಿಲ್‌ಕುಮಾರ್‌ ಹಾಗೂ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸಂಗೀತರಾಜ್‌ ಎನ್‌.ಆರ್‌ ಹಾಜರಾಗಿದ್ದರು.

ಆಕೆಯ ಯೋಗಕ್ಷೇಮಕ್ಕಾಗಿ ಆಕೆಗೆ ಉಡುಗೊರೆಯಾಗಿ ನೀಡಿದ ಆಭರಣಗಳನ್ನು ಪ್ರತಿವಾದಿಗಳ ನಿಯಂತ್ರಣದಲ್ಲಿರುವ ಬ್ಯಾಂಕಿನ ಲಾಕರ್‌ನಲ್ಲಿ ಇರಿಸಲಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. ಆದುದರಿಂದ ವಧುವಿಗೆ ಮದುವೆಯ ಸಂದರ್ಭದಲ್ಲಿ ಯಾವುದೇ ಬೇಡಿಕೆಯಿಲ್ಲದೆ ನೀಡಿದ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.  ವರದಕ್ಷಿಣೆ ನಿಷೇಧ ಅಧಿಕಾರಿಯು 4 ನೇ ಪ್ರತಿವಾದಿಯವರಿಗೆ ಹಿಂದಿರುಗಿಸಲು ನಿರ್ದೇಶಿಸಿದ ಆಭರಣಗಳು ವರದಕ್ಷಿಣೆಯಾಗಿವೆ ಎಂದು ಕಂಡುಬಂದರೆ ಮಾತ್ರ ನಿಯಮ 6 (xv) ಅಡಿಯಲ್ಲಿ ನಿರ್ದೇಶನವನ್ನು ರವಾನಿಸಲು ಅಧಿಕಾರವನ್ನು ಹೊಂದಿರುತ್ತಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

“ಅಂತಹ ಅನ್ವೇಷಣೆಯ ಅನುಪಸ್ಥಿತಿಯಲ್ಲಿ, ವರದಕ್ಷಿಣೆ ನಿಷೇಧ ಅಧಿಕಾರಿಯು ನಿಯಮ 6 (xv) ಅಡಿಯಲ್ಲಿ ನಿರ್ದೇಶನ ನೀಡಲು ಯಾವುದೇ ನ್ಯಾಯವ್ಯಾಪ್ತಿಯನ್ನು ಪಡೆಯುವುದಿಲ್ಲ. ಆದ್ದರಿಂದ ಜಾರಿಗೊಳಿಸಲಾದ ಆಕ್ಷೇಪಾರ್ಹ ಆದೇಶವು ಕಾನೂನಿನಲ್ಲಿ ಸಮರ್ಥನೀಯವಲ್ಲ ಮತ್ತು ಈ ಮೂಲಕ ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.  ಚಿನ್ನಾಭರಣಗಳನ್ನು 4ನೇ ಪ್ರತಿವಾದಿಗೆ ಹಸ್ತಾಂತರಿಸುವುದಾಗಿ ಅರ್ಜಿದಾರರು ಒಪ್ಪಿಕೊಂಡಿದ್ದು, 4ನೇ ಪ್ರತಿವಾದಿ ಈ ಆಭರಣಗಳನ್ನು ಸ್ವೀಕರಿಸಲು ಒಪ್ಪಿಗೆ ಸೂಚಿಸಿದ ಬಳಿಕ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿದೆ.

ಇದನ್ನೂ ಓದಿ:  ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಫೋಟೊ ಇದ್ದರೇನು? ಅವರು ನಮ್ಮ ಪ್ರಧಾನಿ: ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಕೇರಳ ಹೈಕೋರ್ಟ್

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು