ರಾಯಚೂರಿನಲ್ಲಿ ನಕಲಿ ಬ್ರಾಂಡ್ ದಂಧೆ ಪತ್ತೆ; ಬ್ರಾಂಡೆಡ್ ಪ್ರಾಡಕ್ಟ್ ನಕಲಿ ಮಾಡಿ ಮಾರಾಟ, ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ

| Updated By: ಆಯೇಷಾ ಬಾನು

Updated on: Jun 17, 2022 | 8:55 AM

ಸಿರವಾರ ತಾಲೂಕಿನ ಬಾಲಾಜಿ ಕ್ಯಾಂಪ್ ಬಳಿ ನಕಲಿ ವಸ್ತುಗಳ ತಯಾರಿ ಕೇಂದ್ರ ವಿದ್ದು ನಿತ್ಯ ಬಳಕೆ ಮಾಡುವ ಟೀ ಪುಡಿ, ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ತಯಾರಿ ಮಾಡಿ ಮಾರಾಟ ಮಾಡುತ್ತಿದ್ದರು.

ರಾಯಚೂರಿನಲ್ಲಿ ನಕಲಿ ಬ್ರಾಂಡ್ ದಂಧೆ ಪತ್ತೆ; ಬ್ರಾಂಡೆಡ್ ಪ್ರಾಡಕ್ಟ್ ನಕಲಿ ಮಾಡಿ ಮಾರಾಟ, ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ
ಬ್ರಾಂಡೆಡ್ ಪ್ರಾಡಕ್ಟ್ ನಕಲಿ ಮಾಡಿ ಮಾರಾಟ
Follow us on

ರಾಯಚೂರು: ಜಿಲ್ಲೆಯಲ್ಲಿ ನಕಲಿ ಬ್ರಾಂಡ್ಗಳ ದಂಧೆ(Fake Brand) ಜೋರಾಗಿ ಸಾಗಿದೆ. ಗ್ರಾಮೀಣ ಭಾಗದ ಜನರನ್ನು ಟಾರ್ಗೆಟ್ ಮಾಡಿ ನಕಲಿ ವಸ್ತು ಮಾರಾಟ ಮಾಡುತ್ತಿದ್ದ ಜಾಲ ಪತ್ತೆಯಾಗಿದೆ. ಹೈದರಾಬಾದ್ ಮೂಲದ ಕಿಂಗ್ ಪಿನ್ ಮೂಲಕ ನಡೆಯುತ್ತಿದ್ದ ಬೃಹತ್ ದಂಧೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ರಾಯಚೂರು ಜಿಲ್ಲೆ ಸಿರವಾರ ಪೊಲೀಸರ ಬಲೆಗೆ ಇಬ್ಬರು ಖದೀಮರು ಬಿದ್ದಿದ್ದಾರೆ.

ಸಿರವಾರ ತಾಲೂಕಿನ ಬಾಲಾಜಿ ಕ್ಯಾಂಪ್ ಬಳಿ ನಕಲಿ ವಸ್ತುಗಳ ತಯಾರಿ ಕೇಂದ್ರ ವಿದ್ದು ನಿತ್ಯ ಬಳಕೆ ಮಾಡುವ ಟೀ ಪುಡಿ, ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ತಯಾರಿ ಮಾಡಿ ಮಾರಾಟ ಮಾಡುತ್ತಿದ್ದರು. ಮೂಲ ಕಂಪನಿ ಹೆಸರು, ಚಿಹ್ನೆ ಬಳಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದರು. ಇದನ್ನು ತಿಳಿದ ಸಿರವಾರ ಪೊಲೀಸರು ಗೋದಾಮಿನ ಮೇಲೆ ದಾಳಿ ನಡೆಸಿ ಅಕ್ರಮ ಬಯಲಿಗೆಳೆದಿದ್ದಾರೆ. ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರತನ್ ಸಿಂಗ್ ಹಾಗೂ ರಾಘವೇಂದ್ರ ಬಂಧಿತ ಆರೋಪಿಗಳು. ಇದನ್ನೂ ಓದಿ: ಚಿನ್ನದ ಸರ, ಬೈಕ್ ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರ ಬಂಧನ: 14.45 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಹೈದರಾಬಾದ್ ಮೂಲದ ಕಿಂಗ್ ಪಿನ್ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಇನ್ನು ಬಂಧಿತ ಇಬ್ಬರನ್ನೂ ವಿಚಾರಣೆ ಮಾಡಿದಾಗ ಲಕ್ಷಾಂತರ ನಕಲಿ ವಸ್ತುಗಳು ಪತ್ತೆಯಾಗಿವೆ. ನಕಲಿ ರೆಡ್ ಲೇಬಲ್ ಟೀ ಪೌಡರ್, ತ್ರೀ ರೋಸಸ್ ಟೀ ಪೌಡರ್, ಸರ್ಫ್ ಎಕ್ಸೆಲ್ ಡಿಟರ್ಜಂಟ್ ಪೌಡರ್, ಫೆವಿಕ್ವಿಕ್ ಸೇರಿ‌ ವಿವಿಧ ಪ್ರಾಡಕ್ಟ್ ಸೀಜ್ ಮಾಡಲಾಗಿದೆ. ಸುಮಾರು 26 ಲಕ್ಷ ಮೌಲ್ಯದ ವಿವಿಧ ಪ್ರಾಡಕ್ಟ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ ಲಕ್ಷಾಂತರ ರೂ. ಮೌಲ್ಯದ ಯಂತ್ರಗಳು ಹಾಗೂ ವಾಹನಗಳನ್ನೂ ಸೀಜ್ ಮಾಡಲಾಗಿದ್ದು ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:55 am, Fri, 17 June 22