ಕರ್ನೂಲ್ ಜಿಲ್ಲೆ: ಗುರು ರಾಘವೇಂದ್ರ ಸನ್ನಿಧಾನದಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕರ್ನಾಟಕದ ರಾಯಚೂರಿನ ಮಂತ್ರಾಲಯದ(Mantralayam) ಶ್ರೀರಾಘವೇಂದ್ರ ಸ್ವಾಮಿಯ ಶ್ರೀ ಮಠದ ಸನ್ನಿಧಾನದಲ್ಲಿ ಭಕ್ತರೊಬ್ಬರು ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆಗೆ(Suicide) ಯತ್ನಿಸಿದ್ದಾರೆ.
ರಾಯರ ದರ್ಶನಕ್ಕೆ ಶಿವಮೊಗ್ಗಾದಿಂದ ಮಂತ್ರಾಲಯಕ್ಕೆ ಬಂದಿದ್ದ ಮಹಿಳೆ ಶ್ರೀ ಮಠದಲ್ಲಿ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದು ಮಠದ ಭದ್ರತಾ ಸಿಬ್ಬಂದಿ ರಘು ಎಂಬುವವರು ಹಾಗೂ ಕೆಲವರು ಆಕೆಯನ್ನು ಎಮ್ಮಿಗನೂರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದ್ರೆ ಮಹಿಳೆಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇನ್ನು ಮಹಿಳೆ ಬಳಿ ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಬಂದ ಕೆಎಸ್ಆರ್ಟಿಸಿ ಬಸ್ ಟಿಕೆಟ್ ಲಭ್ಯವಾಗಿದೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ: ಮಂತ್ರಾಲಯದ ಬಳಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ; ರಾಯರ ಭಕ್ತರು ನದಿ ದಂಡೆಗೆ ತೆರಳದಂತೆ ಕಟ್ಟೆಚ್ಚರ
ರಾಯಚೂರು: ಮಂತ್ರಾಲಯದ ಗೋಶಾಲೆಗೆ ಮೇವು ದಾನ ನೀಡಿದ ರೈತರು
Published On - 7:56 am, Tue, 10 August 21