ರಾಮನಗರ, ಮಾ.22: ಜಿಲ್ಲೆಯ ಹೆಜ್ಜಾಲ ಬಳಿಯ ಕಣಮಿಣಕೆ ಟೋಲ್ ಬಳಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 5.30 ಕೋಟಿ ರೂ. ನಗದು ಹಣವನ್ನ ವಶಕ್ಕೆ ಪಡೆಯಲಾಗಿದೆ. ಲೋಕಸಭಾ ಚುನಾವಣೆ(Lok Sabha Election) ಹಿನ್ನಲೆ ಯಾವುದೇ ಅಕ್ರಮ ನಡೆಯದಂತೆ ಕ್ರಮ ಕೈಗೊಂಡಿರುವ ಚುನಾವಣಾಧಿಕಾರಿಗಳು, ಪ್ರತಿಯೊಂದು ವಾಹನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅದರಂತೆ ಇಂದು(ಮಾ.22) ತಪಾಸಣೆ ವೇಳೆ ಕಂತೆ ಕಂತೆ ನೋಟು ಪತ್ತೆಯಾಗಿದ್ದು, ಬ್ಯಾಂಕಿಗೆ ಸೇರಿರುವ ಹಣ ಎಂದು ವಾಹನ ಮಾಲೀಕರು ಹೇಳುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಬ್ಯಾಂಕ್ ದಾಖಲೆ ಕೇಳಿರುವ ಬಿಡದಿ ಪೊಲಿಸರು, ಸಮರ್ಪಕ ದಾಖಲೆಗಾಗಿ ಕಾಯುತಿದ್ದಾರೆ.
ಹುಬ್ಬಳ್ಳಿ: ರೈಲ್ವೆ ನಿಲ್ದಾಣದ ಪಾರ್ಸಲ್ ಆಫೀಸ್ನಲ್ಲಿದ್ದ ಎಂಟು ಲಕ್ಷ ಮೌಲ್ಯದ 480 ಮಿಕ್ಸರ್ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಯಾವುದೇ ದಾಖಲೆ ಇಲ್ಲದೆ 24 ರಟ್ಟಿನ ಬಾಕ್ಸ್ನಲ್ಲಿ 480 ಮಿಕ್ಸರ್ಗಳನ್ನು ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಂದ ಅನಧಿಕೃತ ಮಿಕ್ಸರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇದು ಲೋಕಸಭೆ ಚುನಾವಣೆ ಹಿನ್ನಲೆ ತರಿಸಿರಬಹುದು ಎನ್ನುವ ಮಾಹಿತಿ ಇದೆ. ಈ ಕುರಿತು ಮಿಕ್ಸರ್ ಸೀಜ್ ಮಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಚರಣೆ; 7 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ
ಧಾರವಾಡ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 38.50 ಲಕ್ಷ ಮೌಲ್ಯದ 778 ಗ್ರಾಂ ಚಿನ್ನಾಭರಣವನ್ನ ಧಾರವಾಡ ಹೊರವಲಯದ ತೇಗೂರು ಚೆಕ್ಪೋಸ್ಟ್ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಪ್ಪಾಣಿ-ಗಂಗಾವತಿ ಕೆಎಸ್‌ಆರ್‌ಟಿಸಿ ಬಸ್ನಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಿಂದ ಸಿಂಧನೂರು ಕಡೆ ಹೊರಟಿದ್ದ ಪ್ರಕಾಶ ಕುಮಾರ ಎಂಬಾತನ ಬಳಿ ಇತ್ತು. ತಪಾಸಣೆ ವೇಳೆ ಬಿಲ್ ಮತ್ತು ಚಿನ್ನಾಭರಣಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಚಿನ್ನಾಭರಣವನ್ನ ವಶಕ್ಕೆ ಪಡೆದು, ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ