ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಚರಣೆ; 7 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ
ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ಚುನಾವಣಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7.86 ಕೋಟಿ ರೂ. ಮೌಲ್ಯದ ಮದ್ಯವನ್ನ ಜಪ್ತಿ ಮಾಡಿದ್ದಾರೆ. ಇದರ ಜೊತೆಗೆ 2 ಲಾರಿ, 2 ಕಾರು, ಜೀಪ್ ಮತ್ತು ಬೈಕ್ಸ್ ಸೇರಿದಂತೆ ಒಟ್ಟು 9 ವಾಹನ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಗ್ರಾಮಾಂತರ, ಮಾ.22: ಲೋಕಸಭಾ ಚುನಾವಣೆ(Lok sabha Election) ನೀತಿಸಂಹಿತೆ ಜಾರಿ ಆಗುತ್ತಿದ್ದಂತೆ ಅಲರ್ಟ್ ಆದ ಚುನಾವಣಾಧಿಕಾರಿಗಳು ಚೆಕ್ಪೋಸ್ಟ್ ನಿರ್ಮಿಸಿ ಯಾವುದೇ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಅದರಂತೆ ಇಂದು(ಮಾ.22) ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ಚುನಾವಣಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7.86 ಕೋಟಿ ರೂ. ಮೌಲ್ಯದ ಮದ್ಯವನ್ನ ಜಪ್ತಿ ಮಾಡಿದ್ದಾರೆ.
ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿ ಡಾ.ಶಿವಶಂಕರ್ ನೇತೃತ್ವದ ಅಬಕಾರಿ ಪೊಲೀಸರ ತಂಡವು ದಾಳಿ ನಡೆಸಿ, ನೆಲಮಂಗಲದ ಡಿಸ್ಟಿಲರಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಿಟ್ಟಿದ್ದ ಬರೊಬ್ಬರಿ 1.48.985 ಲೀಟರ್ ಮದ್ಯವನ್ನ ಸೀಜ್ ಮಾಡಿದೆ. ಅಬಕಾರಿ ಇಲಾಖೆ ಸೆಕ್ಷನ್ಗಳ ಅಡಿ ಸೂಕ್ತ ದಾಖಲೆ ಇಲ್ಲದ ಕಾರಣ ಜಿಲ್ಲೆಯಲ್ಲಿ 45 ಕೇಸ್ ದಾಖಲು ಮಾಡಲಾಗಿದ್ದು, ಲಿಕ್ಕರ್ ಸೀಜ್ ಹಿನ್ನೆಲೆ 2 ಲಾರಿ, 2 ಕಾರು, ಜೀಪ್ ಮತ್ತು ಬೈಕ್ಸ್ ಸೇರಿದಂತೆ ಒಟ್ಟು 9 ವಾಹನ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಲಕ್ಷಾಂತರ ಮೌಲ್ಯದ 10 ಕೆ.ಜಿ ಗಾಂಜಾ ಕೂಡ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1.84 ಕೋಟಿ ರೂ. ಮೌಲ್ಯದ ಎಲ್ಇಡಿ ಟಿವಿಗಳು ಜಪ್ತಿ
ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.50 ಲಕ್ಷ ನಗದು ಜಪ್ತಿ
ಬೆಳಗಾವಿ: ಏಪೋರ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1ಲಕ್ಷ 50ಸಾವಿರ ನಗದನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೆಳಗಾವಿಯಿಂದ ದೆಹಲಿಗೆ ಕೊಂಡೊಯ್ಯುತ್ತಿದ್ದಾಗ ತಪಾಸಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಮೂಲದ ಜಸ್ವೀರ್ ಸಿಂಗ್ ಎಂಬಾತ, 2 ಲಕ್ಷ ಇಟ್ಟುಕೊಂಡು ದೆಹಲಿಗೆ ಹೊರಟಿದ್ದ. ಇನ್ನುವಿಮಾನದಲ್ಲಿ 50 ಸಾವಿರ ಕೊಂಡೊಯ್ಯಲು ಮಾತ್ರ ಅವಕಾಶವಿದ್ದು, ಉಳಿದ 1.50 ಲಕ್ಷ ಹಣವನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ