KSRTC ಬಸ್‌ನಲ್ಲಿ ಅರ್ಧ ಕೆ.ಜಿ ಚಿನ್ನ ಜಪ್ತಿ, ಶಿವಮೊಗ್ಗದಲ್ಲಿ 1.01 ಕೋಟಿ ಮೌಲ್ಯದ ಬಟ್ಟೆಗಳು ವಶಕ್ಕೆ

ಕೆಎಸ್​ಆರ್​ಟಿಸಿ (KSRTC) ಬಸ್‌ನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ ಅರ್ಧ ಕೆ.ಜಿ ಚಿನ್ನವನ್ನು ಚಿಕ್ಕಮಗಳೂರು(Chikkamagaluru) ತಾಲೂಕಿನ ಮಾಗಡಿ ಚೆಕ್‌ ಪೋಸ್ಟ್‌ನಲ್ಲಿ ಜಪ್ತಿ ಮಾಡಿದರೆ, ಶಿವಮೊಗ್ಗದ ‌ಕೆಆರ್ ಪುರಂನಲ್ಲಿರುವ ಡಿಲಕ್ಸ್ ಲಾಜಿಸ್ಟಿಕ್ ಗೋದಾಮಿನಲ್ಲಿ ಸುಮಾರು 1 ಕೋಟಿ 1ಲಕ್ಷ ಮೌಲ್ಯದ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ.

KSRTC ಬಸ್‌ನಲ್ಲಿ ಅರ್ಧ ಕೆ.ಜಿ ಚಿನ್ನ ಜಪ್ತಿ, ಶಿವಮೊಗ್ಗದಲ್ಲಿ 1.01 ಕೋಟಿ ಮೌಲ್ಯದ ಬಟ್ಟೆಗಳು ವಶಕ್ಕೆ
ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ ಹಣ ಜಪ್ತಿ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 21, 2024 | 5:04 PM

ಚಿಕ್ಕಮಗಳೂರು, ಮಾ.21: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ಚೆಕ್​ಪೋಸ್ಟ್​ಗಳನ್ನು ನಿರ್ಮಾಣ ಮಾಡಿ ಯಾವುದೇ ಅಕ್ರಮ ನಡೆಯದಂತೆ ಹದ್ದಿನ ಕಣ್ಣು ಇಡಲಾಗಿದೆ. ಈ ಮಧ್ಯೆ ಕೆಎಸ್​ಆರ್​ಟಿಸಿ (KSRTC) ಬಸ್‌ನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ ಅರ್ಧ ಕೆ.ಜಿ ಚಿನ್ನವನ್ನ ಚಿಕ್ಕಮಗಳೂರು(Chikkamagaluru) ತಾಲೂಕಿನ ಮಾಗಡಿ ಚೆಕ್‌ ಪೋಸ್ಟ್‌ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಚಿನ್ನದ ಸರ ಸೇರಿ ಉಂಗುರಗಳ ಜೊತೆಗೆ ಚಿನ್ನ ಸಾಗಿಸುತ್ತಿದ್ದ ಓರ್ವ ಪ್ರಯಾಣಿಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ 1.01 ಕೋಟಿ ಮೌಲ್ಯದ ಬಟ್ಟೆಗಳು ವಶಕ್ಕೆ

ಶಿವಮೊಗ್ಗ: ಕೆಆರ್ ಪುರಂನಲ್ಲಿರುವ ಡಿಲಕ್ಸ್ ಲಾಜಿಸ್ಟಿಕ್ ಕೋರಿಯರ್ ಗೋದಾಮಿನ ಮೇಲೆ ಚುನಾವಣಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಸೂಕ್ತ ದಾಖಲೆ ಇಲ್ಲದೇ ಗೋದಾಮಿಗೆ ಬಂದಿದ್ದ ಸುಮಾರು‌ 1 ಕೋಟಿ 1ಲಕ್ಷ ಮೌಲ್ಯದ ಬಟ್ಟೆಗಳನ್ನು  ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು, ಚುನಾವಣಾ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದ ಹಲವು ಬಟ್ಟೆ ಅಂಗಡಿಗಳಿಗೆ ಬಂದಿರುವ ಬಟ್ಟೆಗಳ ಬಂಡಲ್ ಎಂಬ ಶಂಕೆ ವ್ಯಕ್ತವಾಗಿದ್ದು, ಬಟ್ಟೆಗಳನ್ನ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ಪೊಲೀಸರು ನೀಡಿದ್ದಾರೆ.

ಇದನ್ನೂ ಓದಿ:ಕಂತೆ ಕಂತೆ ಹಣ, ಕುಕ್ಕರ್, ನೂರಾರು ಸೀರೆಗಳು ಜಪ್ತಿ: ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು ನೋಡಿ

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಲಕ್ಷ ಹಣ ಜಪ್ತಿ

ಕಲಬುರಗಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಲಕ್ಷ ರೂ. ಹಣವನ್ನ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ನಾಗಾಅಲ್ಲಾಪುರ ಚೆಕ್ ಪೋಸ್ಟ್ ನಲ್ಲಿ ಜಪ್ತಿ ಮಾಡಲಾಗಿದೆ. ಎರಡೂ ಪ್ರತ್ಯೇಕ ವಾಹನಗಳಲ್ಲಿ ಹಣವನ್ನ ಸಾಗಿಸುತ್ತಿದ್ದರು. ತಪಾಸಣೆ ವೇಳೆ ಸೂಕ್ತ ದಾಖಲೆ ಇಲ್ಲದೇ ಹಿನ್ನಲೆ ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ