ಬಿಡದಿ‌ ಟೌನ್‌ಶಿಪ್: ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಪೀಕಲು ಯತ್ನಿಸಿದ್ದ 12 ಜನ ಅರೆಸ್ಟ್

ಬಿಡದಿ ಭಾಗದಲ್ಲಿ ಪ್ರಸ್ತಾಪವಾಗಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (ಬಿಡದಿ ಟೌನ್‌ಶಿಪ್) ಯೋಜನೆ ವಿರುದ್ಧ ರೈತರು ಮತ್ತು ಸರ್ಕಾರದ ನಡುವಿನ ಭೂಸ್ವಾಧೀನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಲ ರೈತರು ಭೂಸ್ವಾಧೀನಕ್ಕೆ ಒಪ್ಪಿಕೊಂಡು ಸರ್ಕಾರಿಂದ ಪರಿಹಾರ ಪಡೆದುಕೊಂಡಿದ್ದು, ಕೆಲವರು ಯಾವುದೇ ಕಾರಣಕ್ಕೆ ತಮ್ಮ ಭೂಮಿ ಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆ ಕೆಲ ಖದೀಮರು ಕೋಟ್ಯಂತರ ರೂ. ಪರಿಹಾರ ಹಣ ದೋಚಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ಬಿಡದಿ‌ ಟೌನ್‌ಶಿಪ್: ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಪೀಕಲು ಯತ್ನಿಸಿದ್ದ 12 ಜನ ಅರೆಸ್ಟ್
Bidadi Township fake Gang
Edited By:

Updated on: Sep 30, 2026 | 4:12 PM

ಬೆಂಗಳೂರು ದಕ್ಷಿಣ, (ಸೆಪ್ಟೆಂಬರ್ 30): ಬಿಡದಿ ಟೌನ್‌ಶಿಪ್ ವಿಚಾರವಾಗಿ ರೈತರು ಹಾಗೂ ಸರ್ಕಾರದ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಕೆಲ ರೈತರು ಯಾವುದೇ ಕಾರಣಕ್ಕೂ ತಮ್ಮ ಜಮೀನು ನೀಡಲ್ಲ ಎಂದಿದ್ದಾರೆ. ಇದರ ಮಧ್ಯೆ ಈ ಯೋಜನೆ ಬಗ್ಗೆ ಪರ ವಿರೋಧಗಳ ಚರ್ಚೆಗಳು ನಡೆಯುತ್ತಿದ್ದು, ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರೈತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಲು ಯತ್ನಿಸಿದ್ದ ಜಾಲವನ್ನು ಪೊಲೀಸರು ಹಿಡಿದಿದ್ದಾರೆ.ಹೌದು…ಅರಳಾಳುಸಂದ್ರ ಗ್ರಾಮದಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಹಣ ಪೀಕಲು ಮುಂದಾಗಿದ್ದ 12 ಆರೋಪಿಗಳನ್ನು ಬಂಧಿಸುವಲ್ಲಿ ಬಿಡದಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರೈತರ ಹೆಸರಿನಲ್ಲಿ ನಕಲಿ ದಾಖಲೆಗಳು ಸೃಷ್ಟಿ

ಬಿಡದಿ ಟೌನ್​ಶಿಪ್​ ಯೋಜನೆ ಸಂಬಂಧಿಸಿದಂತೆ ಅರಳಾಳುಸಂದ್ರ ಗ್ರಾಮದಲ್ಲಿ ವಿವಿಧ ಸರ್ವೆ ನಂಬರ್​​ಗಳು ಇರುವ ಮೂರೂವರೆ ಎಕರೆಯ ಮೂಲ ವಾರಸುದಾರರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಪರಿಹಾರದ ಹಣ ದೋಚಲು ಗ್ಯಾಂಗ್ ಮುಂದಾಗಿತ್ತು. ದಾಬಸ್​ಪೇಟೆ ನಿವಾಸಿ ತರುಣ್, ಇಡೀ ಪ್ರಕರಣದ ಕಿಂಗ್​ ಪಿನ್ ಆಗಿದ್ದು, ಈತ ಈ ಹಿಂದೆ ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ತನ್ನದೇ ಗ್ಯಾಂಗ್ ಕಟ್ಟಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ಹಣ ದೋಚುತ್ತಿದ್ದ. ಅದರಂತೆ ವಿವಾದಿತ ಬಿಡದಿ ಟೌನ್​​ಶಿಪ್​​​ ಯೋಜನೆಯಲ್ಲೂ ಸಹ ರೈತರ ಹೆಸರಿನಲ್ಲಿ ನಕಲಿ ವೋಟರ್​​ ಐಡಿ, ಆಧಾರ್ ಕಾರ್ಡ್​, ಬ್ಯಾಂಕ್​ ಪಾಸ್​ಬುಕ್​ ಸೃಷ್ಟಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ಸಹಿ ಹಾಗೂ ಸೀಲ್ ನಕಲಿ ಮಾಡಿದ್ದು, ಎಲ್ಲಾ ನಕಲಿ ದಾಖಲಾತಿಗಳೊಂದಿಗೆ ಪರಿಹಾರಕ್ಕಾಗಿ ಜಿಬಿಡಿಎ ಕಚೇರಿಗೆ ಸಲ್ಲಿಕೆ ಮಾಡಿದ್ದ.

ಇದನ್ನೂ ಓದಿ: ಬಿಡದಿ‌ ಟೌನ್‌ಶಿಪ್ ಯೋಜನೆ: ಭೂಸ್ವಾಧೀನಕ್ಕೆ ಭೂಮಿ ಕೊಡುವ ರೈತರ ಮೇಲೆ ವಂಚಕರ ಕಣ್ಣು; ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂ. ಪೀಕಲು ಯತ್ನ

ನಕಲಿ ಜಾಲ ಬೆಳಕಿಗೆ ಬಂದಿದ್ಹೇಗೆ?

ಆದ್ರೆ, ದಾಖಲೆಗಳ ಪ್ರಾಥಮಿಕ ಭೌತಿಕ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೀಗಾಗಿ ಸೆಪ್ಟೆಂಬರ್ 3ರಂದು GBDA ಅಧಿಕಾರಿಗಳು ಪರಿಶೀಲನೆಗಾಗಿ ರಾಮನಗರ ತಹಶೀಲ್ದಾರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ದೂರಿನ ಮೇರೆಗೆ ಪೊಲೀಸರು ಕಾರ್ಯಚರಣೆ ನಡೆಸಿ ಇದೀಗ ಪ್ರಕರಣದ ಕಿಂಗ್ ಪಿನ್ ತರುಣ್ ಸೇರಿದಂತೆ 12 ಜನರ ತಂಡವನ್ನು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Loading...
Unable to load recommendations.
Follow Us