ಸಿಪಿ ಯೋಗೇಶ್ವರ್ ವಿರುದ್ಧ ಸಹಿ ನಕಲು ಆರೋಪ, ದೂರು ದಾಖಲು

| Updated By: ವಿವೇಕ ಬಿರಾದಾರ

Updated on: Nov 19, 2024 | 11:00 AM

ಚನ್ನಪಟ್ಟಣ ವಿಧಾಸನಭೆ ಕ್ಷೇತ್ರದ ಉಪ ಚುನಾವಣೆ ಮತದಾನ ನಡೆದಿದ್ದು 23ಕ್ಕೆ ಫಲಿತಾಂಶ ಹೊರಬೀಳಲಿದೆ. ಆದರೆ, ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ್​​ಗೆ ಸಂಕಷ್ಟ ಎದುರಾಗಿದೆ. ಸಿಪಿ ಯೋಗೇಶ್ವರ್​ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಸಿಪಿ ಯೋಗೇಶ್ವರ್ ವಿರುದ್ಧ ಸಹಿ ನಕಲು ಆರೋಪ, ದೂರು ದಾಖಲು
ಶ್ರವಣ್​, ಸಿಪಿ ಯೋಗೇಶ್ವರ್​
Follow us on

ರಾಮನಗರ, ನವೆಂಬರ್​ 19: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ (Channapattan ByPoll) ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ್ (C. P. Yogeshwara) ಅವರಿಗೆ​ ಸಂಕಷ್ಟ ಶುರುವಾಗಿದೆ. ಪುತ್ರ ಶ್ರವಣ್ ಅವರ ಸಹಿ ನಕಲು ಮಾಡಿದ ಆರೋಪದಡಿ ಸಿಪಿ ಯೋಗೇಶ್ವರ್ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ಬುಧವಾರ (ನ.20) ನಡೆದಿದೆ.

ಏನಿದು ಸಹಿ ನಕಲು ವಿವಾದ

ಸಿಪಿ ಯೋಗೇಶ್ವರ ಅವರ ಮೊದಲ ಪತ್ನಿ ಮತ್ತು ಪುತ್ರ ಶ್ರವಣ್​ ಅವರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು. ಈ ಮನೆ ಸಿಪಿ ಯೋಗೇಶ್ವರ್ ಮೊದಲ ಪತ್ನಿ ಹಾಗೂ ಶ್ರವಣ್ ಹೆಸರಲ್ಲಿದೆ. ಶ್ರವಣ್ ಹಾಗೂ ಶ್ರವಣ್ ತಾಯಿ ಇಬ್ಬರೂ ಸೇರಿ ಮನೆಯನ್ನು ನಿಶಾಗೆ ಉಡುಗೊರೆಯಾಗಿ ನೀಡಿದ್ದಾರೆ.

ಆದರೆ, ಈ ಮನೆಯಲ್ಲಿ ತನಗೂ ಭಾಗ ಬೇಕು ಎಂದು ಸಿಪಿ ಯೋಗೇಶ್ವರ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಇಷ್ಟೇ ಅಲ್ಲದೇ, “ನಾನು ನನ್ನ ಅಕ್ಕನಿಗೆ ಮನೆ ಗಿಫ್ಟ್ ನೀಡಿಲ್ಲ. ಮನೆಯಲ್ಲಿ ನನಗೂ ಭಾಗ ಬೇಕು” ಅಂತ ಶ್ರವಣ್​ ಅವರ ಹೆಸರಿನಲ್ಲಿ ಸಿಪಿ ಯೋಗೇಶ್ವರ ಕೋರ್ಟ್​​ನಲ್ಲಿ ಅರ್ಜಿ ಹಾಕಿದ್ದಾರೆ. ಈ ಅರ್ಜಿಯಲ್ಲಿ ಶ್ರವಣ್​ ಅವರ ಸಹಿಯನ್ನು ಸಿಪಿ ಯೋಗೇಶ್ವರ್​ ಮಾಡಿದ್ದಾರೆ. ಹೀಗೆ, ಸಿಪಿ ಯೋಗೇಶ್ವರ್​ ಪುತ್ರ ಶ್ರವಣ ಅವರ ಸಹಿ ನಕಲು ಮಾಡಿದ್ದಾರೆ.

“ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಮನೆಯಲ್ಲಿ ಭಾಗ ಬೇಕು ಅಂತ ನಾನು ಕೇಳಿಲ್ಲ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ” ಎಂದು ಶ್ರವಣ್​ ಹೇಳಿದ್ದಾರೆ.

ಸಹಿ ಮಾಡಿದ್ದು ಒಪ್ಪಿಕೊಂಡ ಸಿಪಿ ಯೋಗೇಶ್ವರ್​

ಈ ವಿಚಾರವಾಗಿ ಶ್ರವಣ ತಂದೆ ಸಿಪಿ ಯೋಗೇಶ್ವರ್​ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇಬ್ಬರ ಸಂಭಾಷಣೆ ರೆಕಾರ್ಡ್​​ ಆಗಿದೆ. ಅದರಲ್ಲಿ, ಸಿಪಿ ಯೋಗೇಶ್ವರ್​ ಸಹಿ ನಕಲು ಮಾಡಿದ್ದಾನ್ನು ಒಪ್ಪಿಕೊಂಡಿದ್ದಾರೆ. ಸಿಪಿ ಯೋಗೇಶ್ವರ ಮತ್ತು ಶ್ರವಣ್​ ಮಾತನಾಡಿರುವ ಆಡಿಯೋ ಸಂಭಾಷಣೆ ವೈರಲ್​ ಆಗಿದೆ.

ದೂರವಾಣಿ ಸಂಭಾಷಣೆಯಲ್ಲಿ ಏನಿದೆ?

ಶ್ರವಣ್​: ಯಾರೋ ವಕೀಲರು ಕರೆ ಮಾಡಿ, ಆಸ್ತಿ ಸಂಬಂಧಿಸಿದ ದಾಖಲೆ ಕೇಳುತ್ತಿದ್ದಾರೆ. ಸಹಿ ಹೊಂದಾಣಿಕೆಯಾಗುತ್ತಿಲ್ಲ ಎನ್ನುತ್ತಿದ್ದಾರೆ. ನಾನು ಯಾವುದೇ ಆಸ್ತಿ ವಕಾಲತ್​ಗೆ ಸಹಿ ಮಾಡಿಲ್ಲ. ಆದ್ರೆ, ಈ ಮಾಡಿದ್ದು ಯಾರು?

ಸಿಪಿವೈ: ಹಿಂದೆ ನೀನೆ ಮಾಡಿದ್ದಿಯಲ್ಲ

ಶ್ರವಣ್​: ಇಲ್ಲ ನಾನು ಮಾಡಿಲ್ಲ

ಸಿಪಿವೈ: ಇರಲಿ, ಅವರು ಏನ್ ಹೇಳುತ್ತಾರೆ ಅದನ್ನು ಮಾಡು

ಶ್ರವಣ್​: ಆದರೆ ನಾನು ಸಹಿ ಮಾಡಿಲ್ಲ, ಯಾರು ಮಾಡಿದ್ದು?

ಆಸ್ತಿ ಮಾರಾಟವಾಗಬಾರದು ಅಂತ ನಾನೇ ಮಾಡಿದೆ ಎಂದು ಒಪ್ಪಿಕೊಳ್ಳುತ್ತಾರೆ.
ಇದೇ ವಿಚಾರಕ್ಕೆ ಶ್ರವಣ್​ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಒಂದು ವೇಳೆ, ಬುಧವಾರ ನಡೆಯುವ ವಿಚಾರಣೆಯಲ್ಲಿ ಸಿಪಿ ಯೋಗೇಶ್ವರ ವಿರುದ್ಧದ ಆರೋಪ ಸಾಬೀತಾದರೆ ಬಂಧನವಾಗುವ ಸಾಧ್ಯತೆ ಇದೆ. ಫಲಿತಾಂಶಕ್ಕೂ ಮುನ್ನವೇ ಸಿಪಿ ಯೋಗೇಶ್ವರ ಜೈಲಿಗೆ ಹೋಗುವ ಸಾಧ್ಯತೆ ಇದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:27 am, Tue, 19 November 24