ರಾಮನಗರ: ರಾಮನಗರ ಜಿಲ್ಲೆಯ ಐದನೇ ತಾಲೂಕಾಗಿ ಹಾರೋಹಳ್ಳಿ ರಚನೆ ಆಗಿದ್ದು ನಿನ್ನೆ(ಫೆ.21) ತಾಲೂಕು ಉದ್ಘಾಟನೆ ಅದ್ಧೂರಿಯಾಗಿ ನೆರವೇರಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ(Ashwath Narayana) ಹಾಗೂ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ(Anitha Kumaraswamy) ನಡುವೆ ಜಟಾಪಟಿ ನಡೆದಿತ್ತು. ಸದ್ಯ ಈ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಹಾರೋಹಳ್ಳಿ ತಾಲೂಕು ರಚನೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಕೊಡುಗೆ ಬಗ್ಗೆ ಹೇಳಿದ್ದೇನೆ. ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ದುರ್ಬುದ್ಧಿ ನನಗೆ ಇಲ್ಲ. ಕೆಲಸವನ್ನೇ ಮಾಡದೆ ನಾನೇ ಮಾಡಿದ್ದು ಎನ್ನುವ ಕುಬುದ್ಧಿಯಾಗಲಿ ನನಗಿಲ್ಲ. ನೇರ ನುಡಿ, ಅಭಿವೃದ್ಧಿ ಪರ ರಾಜಕಾರಣ ನನ್ನದು ಎಂದು ಅಶ್ವಥ್ ಟ್ವೀಟ್ ಮಾಡಿದ್ದಾರೆ.
ಹಾರೋಹಳ್ಳಿ ತಾಲೂಕು ರಚನೆಯಲ್ಲಿ ಹೆಚ್ಡಿಕೆ ಕೊಡುಗೆ ಬಗ್ಗೆ ಹೇಳಿದ್ದೇನೆ. ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ದುರ್ಬುದ್ಧಿ ನನಗೆ ಇಲ್ಲ. ಕೆಲಸವನ್ನೇ ಮಾಡದೆ ನಾನೇ ಮಾಡಿದ್ದು ಎನ್ನುವ ಕುಬುದ್ಧಿಯಾಗಲಿ ನನಗಿಲ್ಲ. ನೇರ ನುಡಿ, ಅಭಿವೃದ್ಧಿ ಪರ ರಾಜಕಾರಣ ನನ್ನದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ ಟ್ವೀಟ್ ಮಾಡಿದ್ದಾರೆ.
ಹಾರೋಹಳ್ಳಿ ಪ್ರತ್ಯೇಕ ತಾಲೂಕು ರಚನೆಯಲ್ಲಿ ಶ್ರೀ @hd_kumaraswamy ಅವರ ಕೊಡುಗೆಯ ಬಗ್ಗೆ ವೇದಿಕೆಯಲ್ಲಿ ಹೇಳಿದ್ದೇನೆ.
ಇನ್ನೊಬ್ಬರ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ದುರ್ಬುದ್ಧಿಯಾಗಲಿ, ಕೆಲಸವನ್ನೇ ಮಾಡದೇ ನಾನೇ ಮಾಡಿದ್ದು ಎನ್ನುವ ಕುಬುದ್ಧಿಯಾಗಲಿ ನನ್ನಲ್ಲಿಲ್ಲ.
ನೇರ ನುಡಿ, ಅಭಿವೃದ್ಧಿಪರ ರಾಜಕಾರಣ ನನ್ನದು.
3/3
— Dr. Ashwathnarayan C. N. (@drashwathcn) February 21, 2023
ನಮ್ಮ ರಾಮನಗರ ಜಿಲ್ಲೆಯ ಜನತೆಯ ಶ್ರೇಯವೇ ನನ್ನ ಆದ್ಯತೆ. ಕ್ಷುಲ್ಲಕ ರಾಜಕಾರಣ, ಕುಟುಂಬ ರಾಜಕಾರಣದ ಬಗ್ಗೆ ನನಗೆ ಆಸಕ್ತಿಯಿಲ್ಲ. ಬಿಜೆಪಿ ಸರ್ಕಾರ ಬರುವ ಮೊದಲು ಅಭಿವೃದ್ಧಿ ಹೇಗೆ ಕುಂಠಿತವಾಗಿತ್ತು. ನಮ್ಮ ಸರ್ಕಾರ ಬಂದ ಮೇಲೆ ಏನೆಲ್ಲಾ ಅಭಿವೃದ್ಧಿ ಕೆಲಸಗಳು ಆಗಿವೆ. ಅಭಿವೃದ್ಧಿ ಕೆಲಸ ಆಗಿರುವುದು ಜನರಿಗೆ ಗೊತ್ತಿದೆ, ದಾಖಲೆ ಹೇಳುತ್ತಿವೆ. ಹಾರೋಹಳ್ಳಿ ನೂತನ ತಾಲೂಕು ಕಚೇರಿ ಉದ್ಘಾಟನೆ ವೇಳೆ ಅನಿತಾಗೆ ಅವಮಾನಿಸಲಾಗಿದೆ ಎಂಬ ಮಾತು ಕೇಳಿ ಆಶ್ಚರ್ಯವಾಯಿತು. ಅನಿತಾ ಕುಮಾರಸ್ವಾಮಿ, ರಾಮನಗರ ವಿಧಾನಸಭಾ ಕ್ಷೇತ್ರದ JDS ಶಾಸಕಿ. ಶಿಷ್ಟಾಚಾರದ ಪ್ರಕಾರವೇ ಕಾರ್ಯಕ್ರಮ ಜರುಗಿದರೂ ಈ ರೀತಿ ಹೇಳಿಕೆ ನೀಡಲಾಗುತ್ತಿದೆ. ನಿಗದಿತ ಸಮಯಕ್ಕೆ ಕಾರ್ಯಕ್ರಮಕ್ಕೆ ಬರದೆ ಹೀಗೆ ಹೇಳುವುದು ಎಷ್ಟು ಸರಿ. ಶಾಸಕಿ ಅನಿತಾ ಕುಮಾರಸ್ವಾಮಿ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟ್ವೀಟ್ ಮೂಲಕ ಅನಿತಾ ಕುಮಾರಸ್ವಾಮಿಗೆ ಅಶ್ವತ್ಥ್ ನಾರಾಯಣ ಟಾಂಗ್ ಕೊಟ್ಟಿದ್ದಾರೆ.
ಹಾರೋಹಳ್ಳಿ ನೂತನ ತಾಲೂಕು ಕಚೇರಿ ಉದ್ಘಾಟನೆ ವೇಳೆ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಗೆ ಅಪಮಾನಿಸಲಾಗಿದೆ ಎಂಬರ್ಥದ ಮಾತನ್ನು ಕೇಳಿ ಆಶ್ಚರ್ಯವಾಯಿತು!
ಕಾರ್ಯಕ್ರಮ ಶಿಷ್ಟಾಚಾರದ ಪ್ರಕಾರವೇ ಜರುಗಿದರೂ ನಿಗದಿತ ಸಮಯಕ್ಕೆ ಹಾಜರಾಗದೇ, ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ.
1/3 pic.twitter.com/J8zFGMMDXM
— Dr. Ashwathnarayan C. N. (@drashwathcn) February 21, 2023
ಇದನ್ನೂ ಓದಿ: Ramanagara: ಹಾರೋಹಳ್ಳಿ ತಾಲೂಕು ಉದ್ಘಾಟನೆ; ವೇದಿಕೆಯಲ್ಲೇ ಅಶ್ವಥ್ಥನಾರಾಯಣ – ಅನಿತಾ ಕುಮಾರಸ್ವಾಮಿ ವಾಕ್ಸಮರ
ನಿನ್ನೆ ಹಾರೋಹಳ್ಳಿ ಉದ್ಘಾಟನಾ ಕಾರ್ಯಕ್ರಮವಿತ್ತು. ಆದ್ರೆ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಬರೋ ಮೊದಲೇ ಉದ್ಘಾಟನೆ ನೆರವೇರಿಸಿದ್ದರು. ಅಲ್ಲದೆ ವೇದಿಕೆಯಲ್ಲಿ ಸರ್ಕಾರದ ಸಾಧನೆ ಬಗ್ಗೆ, ರಾಮನಗರಕ್ಕೆ ಕುಡಿಯವ ನೀರಿನ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ಅನಿತಾ ಕುಮಾರಸ್ವಾಮಿ ಅವರು ಅಶ್ವತ್ಥ್ ಮಾತಿಗೆ ಆಕ್ಷೇಪ ಹೊರಹಾಕಿದರು.
ಸಚಿವ ಅಶ್ವತ್ಥ್ ನಾರಾಯಣ ಕಾರ್ಯಕ್ರಮದಲ್ಲಿ ರಾಮನಗರಕ್ಕೆ ಬಿಜೆಪಿ ಸರ್ಕಾರ ಏನೇನ್ ಮಾಡಿದೆ ಅಂತಾ ಮಾತಾಡಿದರು. ಅಶ್ವತ್ಥ್ ಬಳಿಕ ಬಂದು ಮಾತನಾಡಿದ ಅನಿತಾ ಕುಮಾರಸ್ವಾಮಿ, ಅಶ್ವತ್ಥ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು. ಈ ತಾಲೂಕಾಗಲು ನನ್ನ ಶ್ರಮ, ಹೆಚ್ಡಿಕೆ ಶ್ರಮ ಇದೆ, ಈಗ ಬಂದು ಇವರು ನಾವ್ ಮಾಡಿದ್ದು ಅಂದ್ರೆ ಹೇಗೆ ಅಂತಾ ಪ್ರಶ್ನಿಸಿದರು. ಇಲ್ಲಿಗೆ ಇವತ್ತೇನಾದ್ರೂ ಕುಮಾರಸ್ವಾಮಿ ಬಂದಿದ್ರೆ ಇವ್ರೆಲ್ಲ ಇಷ್ಟು ಮಾತಾಡೋಕೆ ಆಗ್ತಿರಲಿಲ್ಲ. ಅಷ್ಟೇ ಅಲ್ಲ ಸಚಿವ ಅಶ್ವತ್ಥ್ ನಾರಾಯಣ ಮೊದಲು ಅವರ ಮಲ್ಲೇಶ್ವರಂ ಕ್ಷೇತ್ರವನ್ನ ಅಭಿವೃದ್ಧಿ ಮಾಡ್ಲಿ ಅಂತಾ ಟಾಂಗ್ ಕೊಟರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:13 am, Wed, 22 February 23