ರಾಮನಗರ: ಅಂತರ್ಜಾಲದ 5ಜಿ ಯುಗದಲ್ಲೂ ಎತ್ತಿನ (bull) ಚಮತ್ಕಾರ ನಡೆಯುತ್ತಿದೆ. ವೈದ್ಯರ ಚಿಕಿತ್ಸೆಯಿಂದ ವಾಸಿಯಾಗದ ಖಾಯಿಲೆ (ailment) ಈ ಎತ್ತಿನಿಂದಾಗಿ ಗುಣವಾಗುತ್ತದೆ. ಇದು ನಿಜಕ್ಕೂ ವೈಜ್ಞಾನಿಕ ಲೋಕಕ್ಕೆ ಸವಾಲೇ ಸರಿ (miracle). ಈ ಎತ್ತಿನ ಗಂಜಳ ಕುಡಿದ್ರೆ ಎಲ್ಲಾ ಪಾಪ ಸರ್ವನಾಶ, ಕಷ್ಟಕಾರ್ಪಣ್ಯಕ್ಕೆ ಫುಲ್ ಸ್ಟಾಪ್ ಬೀಳುತ್ತದಂತೆ! ಕಷ್ಟ ದೂರ ಮಾಡು ಅಂತ ಬೊಗಸೆ ಚಾಚುತ್ತಾ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ.
ಆರೋಗ್ಯ ಹದಗೆಟ್ಡಿದ್ದರೆ ವಾಸಿ ಮಾಡುವ, ಏನೇ ಸಮಸ್ಯೆ ಇದ್ರೂ ಪರಿಹಾರ ನೀಡುವ ಎತ್ತು ಇದು. ಹತ್ತು ಹದಿನೈದು ವರ್ಷ ಮಕ್ಕಳಾಗದ ದಂಪತಿಗಳಿಗೆ ಮಕ್ಕಳ ಭಾಗ್ಯ ಕಲ್ಪಿಸುವ ಎತ್ತು ಇದು. ಗಂಡು ಅಂದ್ರೆ ಗಂಡು ಮಗು, ಹೆಣ್ಣು ಮಗು ಅಂದ್ರೆ ಹೆಣ್ಣು ಮಗು ಹುಟ್ಟುವ ಹಾಗೆ ಆಶೀರ್ವಾದ ಮಾಡುವ ಎತ್ತು ಇದು. ಇನ್ನು ಬಿಜಿನಸ್ ಲಾಸ್, ಹೊಸ ಕೆಲಸ ಅಪೇಕ್ಷೆ ಹೀಗೆ ಏನೇ ಇದ್ರು ಭಕ್ತರು ಇಲ್ಲೇ ಬಂದು ಪರಿಹಾರ ತೆಗೆದುಕೊಳ್ತಾರೆ.
ಭಕ್ತರ ಕಷ್ಟ ಕಳೆದು ಇಷ್ಟ ಸಿದ್ಧಿಸುವುದಾದ್ರೆ ಗಂಜಳ ನೀಡುತ್ತದೆ ಈ ಬಸವ. ಪ್ರತಿ ಎರಡು ನಿಮಿಷಕ್ಕೆ ಗೋಮೂತ್ರ (ಗಂಜಳ) ಬಿಡುತ್ತದೆ ಈ ಬಸವ. ಒಂದು ವೇಳೆ ಗಂಜಳ ನೀಡದಿದ್ದರೆ ಭಕ್ತರ ಬೇಡಿರುವ ಕೆಲಸ ಆಗಲ್ಲ ಎಂದು ಅರ್ಥ. ಇನ್ನು ಗಂಜಳ ಕುಡಿದು ಅನೇಕ ರೋಗ ವಾಸಿ ಮಾಡಿಕೊಂಡಿರುವ ಭಕ್ತರು ಇಲ್ಲಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿ ಹೋದವರೂ ಬಚಾವ್ ಆಗಿ ಬದುಕಿ ಬಂದಿದ್ದಾರೆ. ಬಸವನ ಇಂತಹ ಪವಾಡಗಳ ಬಗ್ಗೆ ಭಕ್ತರು ಕೃತಜ್ಞತಾ ಭಾವ ಹೊಂದಿದ್ದಾರೆ.
ರಾಮನಗರ (Ramanagara) ತಾಲೂಕಿನ ಹೆಗಡಿಗೆರೆ ಗ್ರಾಮದಲ್ಲಿದೆ ಈ ಪವಾಡದ ಎತ್ತು. ಜಲಕಂಟೇಶ್ವರ ಬಸವಣ್ಣ ಈ ಎತ್ತಿನ ಹೆಸರು. 11 ವರ್ಷ ವಯಸ್ಸಿನ ಎತ್ತಿನಲ್ಲಿ ಅದೇನೋ ಶಕ್ತಿ ಇದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಬಸವ ಹುಟ್ಟಿದಾಗ ಇದು ಜಾಸ್ತಿ ಹೊತ್ತು ಬಾಳಲ್ಲ ಎಂದಿದ್ದರಂತೆ ಪಶು ವೈದ್ಯರು. 9 ದಿನದಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಕರು ಅದಾಗಿತ್ತು.
Also Read: ಜಾನುವಾರುಗಳ ಯೋಗಕ್ಷೇಮ ಬಯಸಿ ಕಾರ್ತಿಕ ಮಾಸದಲ್ಲಿ ಮುಳಬಾಗಿಲು ಬಯಲು ಬಸವೇಶ್ವರನಿಗೆ ವಿಶೇಷ ಪೂಜೆ
ರಾಮನಗರ ತಾಲೂಕಿನ ಬಾನಂದೂರು ಗ್ರಾಮದ ನಂಜಪ್ಪ ಎಂಬುವವರಿಗೆ ಸೇರಿದ ಬಸವ ಇದು. ಆದರೆ ಬಸವ ಸಾಯುತ್ತಾನೆ ಯಾರಾದ್ರೂ ಬದುಕಿಸಿಕೊಂಡು ಸಾಕಿ ಎಂದು ನಂಜಪ್ಪ ಹೇಳಿದ್ದರಂತೆ. ಅದರಂತೆ ನಂಜಪ್ಪರಿಂದ ಉಚಿತವಾಗಿಯೇ ಹೆಗಡಿಗೆರೆ ನಿವಾಸಿ ಕುಮಾರ್ ಕರುವನ್ನು ತಂದು ಸಾಕತೊಡಗಿದರು. ಕುಮಾರ್ ತೋಟದ ಮನೆಯಲ್ಲೇ ಆ ಕರು ಆರೋಗ್ಯಪೂರ್ಣವಾಗಿ ಬೆಳೆದು ದೊಡ್ಡದಾಗಿದೆ. ಈ ಬಸವನಿಗೆ ಕುಮಾರರ ತೋಟದ ಮನೆಯ ಹುತ್ತದ ಬಳಿಯೇ ಹೆಚ್ಚು ಕಾಲ ಕಳೆಯುತ್ತದೆ. ಬಸವ ದೇವಸ್ಥಾನದ ಕಡೆಯೇ ಹೆಚ್ಚು ಕೂರುತ್ತಿದ್ದ. ಬಳಿಕ ಗ್ರಾಮಸ್ಥರು ಬಸವನ ಪವಾಡ ಗುರುತಿಸೊಕೆ ಶುರು ಮಾಡಿದರು. ಬಸವ ಗಂಜಲ ನೀಡುವುದಷ್ಟೇ ಅಲ್ಲ; ನಿಂಬೆಹಣ್ಣು ಕೂಡ ಮಂತ್ರಿಸಿಕೊಡುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:07 pm, Fri, 8 December 23