ಡಿಕೆಶಿಗೆ ಗಾಂ.. ಪದವನ್ನು ಬಳಸಬಾರದಿತ್ತು; ನನ್ನ ಮಾತನ್ನು ವಾಪಸ್ ಪಡೆದುಕೊಳ್ತೇನೆ -ರಮೇಶ್​ ವಿಷಾದ

|

Updated on: Mar 27, 2021 | 8:04 PM

ರಮೇಶ್ ತಮ್ಮ ಹೇಳಿಕೆ ವಿಚಾರವಾಗಿ ಅಸಭ್ಯ ಪದ ಬಳಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಂತಹ ಪದ ನಾನು ಬಳಸಬಾರದಿತ್ತು. ಬಳಸಿದ್ದಕ್ಕೆ ವಿಷಾದವಿದೆ. ನಾನು ನನ್ನ ಮಾತನ್ನು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಡಿಕೆಶಿಗೆ ಗಾಂ.. ಪದವನ್ನು ಬಳಸಬಾರದಿತ್ತು; ನನ್ನ ಮಾತನ್ನು ವಾಪಸ್ ಪಡೆದುಕೊಳ್ತೇನೆ -ರಮೇಶ್​ ವಿಷಾದ
ಡಿ.ಕೆ.ಶಿವಕುಮಾರ್​ (ಎಡ); ರಮೇಶ್​ ಜಾರಕಿಹೊಳಿ (ಬಲ)
Follow us on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಿಕುಮಾರ್​ ಕುರಿತು ಅಸಭ್ಯ ಪದ ಬಳಿಸಿದ್ದಕ್ಕೆ ಇದೀಗ ರಮೇಶ್​ ಜಾರಕಿಹೊಳಿ‌ ವಿಷಾದ ವ್ಯಕ್ತಪಡಿಸಿದ್ದಾರೆ. ರಮೇಶ್ ತಮ್ಮ ಹೇಳಿಕೆ ವಿಚಾರವಾಗಿ ಅಸಭ್ಯ ಪದ ಬಳಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಂತಹ ಪದ ನಾನು ಬಳಸಬಾರದಿತ್ತು. ಬಳಸಿದ್ದಕ್ಕೆ ವಿಷಾದವಿದೆ. ನಾನು ನನ್ನ ಮಾತನ್ನು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ರಮೇಶ್​ ಜಾರಕಿಹೊಳಿ ಮನೆ ಬಳಿ ಕಾಂಗ್ರೆಸ್ ಕಾರ್ಯಕರ್ತರ​ ಪ್ರತಿಭಟನೆ
ಇತ್ತ, ಡಿಕೆಶಿ ಬಗ್ಗೆ ರಮೇಶ್ ಜಾರಕಿಹೊಳಿ ಅಸಭ್ಯ ಹೇಳಿಕೆ ವಿಚಾರವಾಗಿ ರಮೇಶ್​ ಜಾರಕಿಹೊಳಿ ಮನೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ರಮೇಶ್​ ಜಾರಕಿಹೊಳಿ ಮನೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಮೇಶ್​ ವಿರುದ್ಧ ಯುವ ಕಾಂಗ್ರೆಸ್ ಘಟಕದವರು ಘೋಷಣೆ ಕೂಗುತ್ತಿದ್ದಾರೆ. ರಮೇಶ್​ ಜಾರಕಿಹೊಳಿ ಮನೆ ಬಳಿ ಕಾರ್ಯಕರ್ತರ ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ರಮೇಶ್ ನಿವಾಸದ ಬಳಿ ಧರಣಿ ನಡೆಯುತ್ತಿದೆ.

ಕಾಂಗ್ರೆಸ್​ ಕಾರ್ಯಕರ್ತರ ಧರಣಿ

ಇದರ ಜೊತೆ, ಯಾರೋ ಹೆಸರು ಹೇಳಿದ್ದಕ್ಕೆ ರಾಜೀನಾಮೆ ಕೇಳುವ ಬಿಜೆಪಿ ಚಾಂದಿನಿ ನಾಯ್ಕ್‌ಗೆ ಹಲ್ಲೆ ನಡೆಸಿದವರನ್ನ ಉಚ್ಚಾಟನೆ ಮಾಡಲಿ. ಹಲ್ಲೆ ನಡೆಸಿದ್ದ ಶಾಸಕ ಸಿದ್ದು ಸವದಿಯನ್ನು ಉಚ್ಚಾಟನೆ ಮಾಡಿ. ತಡೆಯಾಜ್ಞೆ ತಂದಿರುವ 6 ಸಚಿವರ ರಾಜೀನಾಮೆ ಪಡೆಯಿರಿ. ಸದನ ಸದಸ್ಯರ ಚಾರಿತ್ರ್ಯ ಪ್ರಶ್ನಿಸಿದವರ ರಾಜೀನಾಮೆ ಪಡೆಯಿರಿ. ಚಾರಿತ್ರ್ಯ ಪ್ರಶ್ನಿಸಿದ ಸಚಿವ ಸುಧಾಕರ್​ ರಾಜೀನಾಮೆ ಪಡೆಯಿರಿ. ಅತ್ಯಾಚಾರಿ ಮಾಜಿ ಸಚಿವನನ್ನ ಪಕ್ಷದಿಂದ ಉಚ್ಚಾಟನೆ ಮಾಡಿ. ಪಕ್ಷದಿಂದ ಉಚ್ಚಾಟನೆ ಮಾಡಿ ನೈತಿಕತೆಯನ್ನು ತೋರಿಸಿ ಎಂದು ಕರ್ನಾಟಕ ಬಿಜೆಪಿಗೆ ಕರ್ನಾಟಕ ಕಾಂಗ್ರೆಸ್​ ಘಟಕ ಒತ್ತಾಯ ಮಾಡಿದೆ.

ಅಂದ ಹಾಗೆ, ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ ನನ್ನ ಬಳಿ 11 ಸಾಕ್ಷ್ಯಗಳಿವೆ. ಮಹಾನಾಯಕ ಯಾರೆಂದು ಪೋಷಕರು ಬಹಿರಂಗಗೊಳ್ಸಿದ್ದಾರೆ. ಮಹಾನಾಯಕ ರಾಜಕೀಯದಲ್ಲಿರಲು ನಾಲಾಯಕ್​. ನಾನು ಗಂಡಸು, ಆ ಮಹಾನಾಯಕ ಓರ್ವ ಗಾಂ.. ಎಂದು  ಖಾರವಾಗಿ ಮಾತನಾಡಿದ್ದರು.

‘ನಮ್ಮ ಕುಟುಂಬದವರು ಯಾವ ಹುಡುಗಿಯನ್ನೂ ಮೂಸಿನೋಡಿಲ್ಲ’
ನಮ್ಮ ಕುಟುಂಬದವರು ಯಾವ ಹುಡುಗಿಯನ್ನೂ ಮೂಸಿನೋಡಿಲ್ಲ. ಡಿ.ಕೆ.ಶಿವಕುಮಾರ್​ ವಿರುದ್ಧ ನೇರ ಹೋರಾಟಕ್ಕೆ ಇಳಿಯುತ್ತೇವೆ. ಕನಕಪುರದಲ್ಲಿ ಅವನನ್ನು ಸೋಲಿಸಲು ಹೋರಾಟ ಮಾಡುವೆ. ಡಿ.ಕೆ.ಶಿವಕುಮಾರ್​​ ಬೆಳಗಾವಿಗೆ ಬಂದರೆ ಸ್ವಾಗತಿಸುತ್ತೇವೆ. ಬೆಳಗಾವಿಯಿಂದ ಮರ್ಯಾದೆಯಿಂದ ಕಳಿಸಿಕೊಡುತ್ತೇವೆ ಎಂದು ರಮೇಶ್​ ಜಾರಕಿಹೊಳಿ ಹೇಳಿದರು. ಬೆಳಗಾವಿಗೆ ಬಂದಾಗ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ. ಯಾಕೆಂದರೆ ಬೆಳಗಾವಿ ನಮ್ಮೂರು, ಯಾವುದೇ ತೊಂದರೆಕೊಡಲ್ಲ ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದರು.

‘ನಾನು ನಿರಪರಾಧಿ ಎಂದು ಆ ಕುಟುಂಬಸ್ಥರು ಹೇಳಿದ್ದಾರೆ’
ಡಿ.ಕೆ.ಶಿವಕುಮಾರ್​ ರಾಜಕೀಯದಲ್ಲಿರಲು ಅರ್ಹನೇ ಅಲ್ಲ. ಡಿಕೆಶಿ ರಾಜಕೀಯದಿಂದ ನಿವೃತ್ತಿ ಪಡೆಯುವುದು ಉತ್ತಮ. ಯುವತಿ ಕುಟುಂಬಸ್ಥರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ನಿರಪರಾಧಿ ಎಂದು ಆ ಕುಟುಂಬಸ್ಥರು ಹೇಳಿದ್ದಾರೆ ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದಾರೆ. ನಮ್ಮ ಸಿಎಂ, ಅಮಿತ್ ಶಾ ಜತೆ ಮಾತನಾಡುತ್ತೇನೆ ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದರು.

‘ನಾನು ನಿರಪರಾಧಿ ಎಂದು ಆ ಕುಟುಂಬಸ್ಥರು ಹೇಳಿದ್ದಾರೆ’
ಡಿ.ಕೆ.ಶಿವಕುಮಾರ್​ ರಾಜಕೀಯದಲ್ಲಿರಲು ಅರ್ಹನೇ ಅಲ್ಲ. ಡಿಕೆಶಿ ರಾಜಕೀಯದಿಂದ ನಿವೃತ್ತಿ ಪಡೆಯುವುದು ಉತ್ತಮ. ಯುವತಿ ಕುಟುಂಬಸ್ಥರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ನಿರಪರಾಧಿ ಎಂದು ಆ ಕುಟುಂಬಸ್ಥರು ಹೇಳಿದ್ದಾರೆ ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದಾರೆ. ನಮ್ಮ ಸಿಎಂ, ಅಮಿತ್ ಶಾ ಜತೆ ಮಾತನಾಡುತ್ತೇನೆ ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದರು.

ಇದನ್ನೂ ಓದಿ: Ramesh Jarkiholi Press Meet | ನಾನು ಗಂಡಸು.. ಆ ಮಹಾನಾಯಕ ಗಾಂ.. ಅವನನ್ನು ಒದ್ದು ಒಳಗಾಕಿ -ರಮೇಶ್ ಜಾರಕಿಹೊಳಿ

Published On - 7:46 pm, Sat, 27 March 21