ಮಾಡಬಾರದ ಕೆಲಸ ಮಾಡಿದ್ದು ರಮೇಶ್ ಜಾರಕಿಹೊಳಿ, ನನ್ನದು ಎಳ್ಳಷ್ಟೂ ಪಾತ್ರವಿಲ್ಲ; ತನಿಖಾಧಿಕಾರಿಗಳ ಮುಂದೆಯೂ ಇದನ್ನೇ ಹೇಳುವೆ- ವಿಡಿಯೋದಲ್ಲಿ ನರೇಶ್

ಆಕೆ ತನಗೆ ರಮೇಶ್ ಜಾರಕಿಹೊಳಿಯಿಂದ ತನಗೆ ತೊಂದರೆ ಆಗಿರುವುದಾಗಿ ಹೇಳಿದ್ದ ಕಾರಣ ಸಾಕ್ಷಿ ಇದ್ದರೆ ಕಳುಹಿಸಿ ಎಂದಿದ್ದೆ. ಅದಾದ ನಂತರ ಆಕೆ ನನ್ನಿಂದ ಸಹಾಯ ಕೇಳಿದ್ದರು. ಆ ಸಂದರ್ಭದಲ್ಲಿ ನಾನು ತಾಯಿಗೆ ಆರೋಗ್ಯ ಸರಿಯಿಲ್ಲ, ಸದ್ಯಕ್ಕೆ ನನ್ನ ಮಗುವಿಗೆ ನಾಮಕರಣ ಇದೆ, ಬನ್ನಿ ಎಂದು ಕರೆದಿದ್ದೆ. ಆಕೆ ನಾಮಕರಣಕ್ಕೆ ಬಂದಿದ್ದರು.

ಮಾಡಬಾರದ ಕೆಲಸ ಮಾಡಿದ್ದು ರಮೇಶ್ ಜಾರಕಿಹೊಳಿ, ನನ್ನದು ಎಳ್ಳಷ್ಟೂ ಪಾತ್ರವಿಲ್ಲ; ತನಿಖಾಧಿಕಾರಿಗಳ ಮುಂದೆಯೂ ಇದನ್ನೇ ಹೇಳುವೆ- ವಿಡಿಯೋದಲ್ಲಿ ನರೇಶ್
Edited By:

Updated on: Mar 18, 2021 | 2:40 PM

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಮಾಜಿ ಪತ್ರಕರ್ತ ನರೇಶ್​, ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಇದರಲ್ಲಿ ನನ್ನ ಹೆಸರನ್ನು ವ್ಯವಸ್ಥಿತವಾಗಿ ಸೇರಿಸಲಾಗಿದೆ ಎಂದು ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪತ್ರಕರ್ತನಾಗಿದ್ದ ಕಾರಣ ಯುವತಿಯ ಪರಿಚಯ ಆಗಿತ್ತು, ಆಕೆ ತನಗೆ ರಮೇಶ್ ಜಾರಕಿಹೊಳಿಯಿಂದ ತನಗೆ ತೊಂದರೆ ಆಗಿರುವುದಾಗಿ ಹೇಳಿದ್ದ ಕಾರಣ ಸಾಕ್ಷಿ ಇದ್ದರೆ ಕಳುಹಿಸಿ ಎಂದಿದ್ದೆ. ಅದಾದ ನಂತರ ಆಕೆ ನನ್ನಿಂದ ಸಹಾಯ ಕೇಳಿದ್ದರು. ಆ ಸಂದರ್ಭದಲ್ಲಿ ನಾನು ತಾಯಿಗೆ ಆರೋಗ್ಯ ಸರಿಯಿಲ್ಲ, ಸದ್ಯಕ್ಕೆ ನನ್ನ ಮಗುವಿಗೆ ನಾಮಕರಣ ಇದೆ, ಬನ್ನಿ ಎಂದು ಕರೆದಿದ್ದೆ. ಆಕೆ ನಾಮಕರಣಕ್ಕೆ ಬಂದಿದ್ದರು, ಜೊತೆಗೆ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಸೇರಿ ಎಲ್ಲಾ ಪಕ್ಷದವರೂ ಬಂದಿದ್ದರು ಎಂದು ಹೇಳಿದ್ದಾರೆ.

ನಾನು ಯಾರಿಂದಲೂ ಹಣ ಪಡೆದಿಲ್ಲ. ಅಷ್ಟು ಹಣ ನನ್ನ ಬಳಿ ಇಲ್ಲ 15 ಸಾವಿರ EMI ಕಟ್ಟುತ್ತಿದ್ದೇನೆ. ಜೀವನದಲ್ಲಿ ಈವರೆಗೆ ಇಂತಹ ಯಾವುದೇ ಆರೋಪ ಇಲ್ಲ. ನಾನು ಪೊಲೀಸರ ವಿಚಾರಣೆಗೆ ಹಾಜರಾಗುತ್ತಿದ್ದೆ. ಆದರೆ, ಬಂದರೆ ಏನಾಗುತ್ತೆ ಅನ್ನೋದು ಗೊತ್ತಿದೆ. ಇನ್ನು 5-10 ದಿನಗಳೊಳಗೆ ಬಂದು ವಿಚಾರಣೆಗೆ ಹಾಜರಾಗ್ತೇನೆ. ಸಿಡಿ ವಿಚಾರ ಹೇಗೆ ಹೊರಗೆ ಬಂತು ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಇದನ್ನೇ ಇಟ್ಟುಕೊಂಡು ನನ್ನ ಕುಟುಂಬಕ್ಕೆ ಕಿರುಕುಳ ಮಾಡಲಾಗುತ್ತಿದೆ. ಮಾಡಬಾರದ ಕೆಲಸ ಮಾಡಿದ್ದು ರಮೇಶ್ ಜಾರಕಿಹೊಳಿ. ನಾನು ವಿಚಾರಣೆ ವೇಳೆ ಎಲ್ಲವನ್ನೂ ಹೇಳುವೆ ಎಂದು ನರೇಶ್​ ವಿಡಿಯೋದ ಮೂಲಕ ತಿಳಿಸಿದ್ದಾರೆ.

Published On - 2:17 pm, Thu, 18 March 21