ಸುದ್ದಿ ಅಥವಾ ಸಂದೇಶ ನಿಜವೋ ಸುಳ್ಳೋ? ರಾಜ್ಯ ಸರ್ಕಾರದ ವೆಬ್​ಸೈಟ್​ನಲ್ಲಿ ಚೆಕ್ ಮಾಡಿ ನೋಡಿ

| Updated By: shruti hegde

Updated on: Jan 14, 2021 | 3:42 PM

ನೀವು ಓದಿದ ಸುದ್ದಿ, ವಾಟ್ಸ್ಆ್ಯಪ್ ಸಂದೇಶದಲ್ಲಿ ಬಂದ ಸುದ್ದಿ ನಿಜವೋ , ಸುಳ್ಳೋ ಎಂದು ಅರಿಯಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆರಂಭಿಸಿರುವ ಕರ್ನಾಟಕ ಪೊಲೀಸ್ ಫ್ಯಾಕ್ಟ್​ಚೆಕ್ ವೆಬ್​ಸೈಟ್​ಗೆ ಭೇಟಿ ನೀಡಿ

ಸುದ್ದಿ ಅಥವಾ ಸಂದೇಶ ನಿಜವೋ ಸುಳ್ಳೋ? ರಾಜ್ಯ ಸರ್ಕಾರದ ವೆಬ್​ಸೈಟ್​ನಲ್ಲಿ ಚೆಕ್ ಮಾಡಿ ನೋಡಿ
ಕರ್ನಾಟಕ ಪೊಲೀಸ್ ಫ್ಯಾಕ್ಟ್ ಚೆಕ್ ವೆಬ್ ಸೈಟ್
Follow us on

ನೀವು ಓದಿದ ಸುದ್ದಿ, ವಾಟ್ಸ್ಆ್ಯಪ್ ಸಂದೇಶದಲ್ಲಿ ಬಂದ ಸುದ್ದಿ ನಿಜವೋ , ಸುಳ್ಳೋ ಎಂದು ತಿಳಿಯುವುದು ಹೇಗೆ? ಎಂಬ ಪ್ರಶ್ನೆ ಬಹುತೇಕ ಜನರ ಮನಸ್ಸಿನಲ್ಲಿ ಮೂಡಿರುತ್ತದೆ. ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಾಕಷ್ಟು ಫ್ಯಾಕ್ಟ್​ಚೆಕ್ ವೆಬ್​ಸೈಟ್​ಗಳು ಇವೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ಪೊಲೀಸ್ ಫ್ಯಾಕ್ಟ್​ಚೆಕ್ ವೆಬ್ ಸೈಟ್ ಆರಂಭಿಸಿತ್ತು. ಕೊರೊನಾವೈರಸ್​ಗೆ ಸಂಬಂಧಿಸಿದ ಹಲವಾರು ಸುಳ್ಳುಸುದ್ದಿಗಳು ಹರಿದಾಡಿದ ಹಿನ್ನೆಲೆಯಲ್ಲಿ ಈ ವೆಬ್​ಸೈಟ್​ ಆರಂಭಿಸಲಾಗಿತ್ತು.

ಡಿಜಿಪಿ ಪ್ರವೀಣ್ ಸೂದ್ ಅವರ ಕನಸಿನ ಕೂಸು ಆಗಿರುವ ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್​ಚೆಕ್ ವೆಬ್​ಸೈಟ್​ನ್ನು ಸಿಐಡಿ ಸೈಬರ್ ಕ್ರೈಮ್ ವಿಭಾಗ ಮತ್ತು Check4Spam ನಿರ್ವಹಣೆ ಮಾಡುತ್ತದೆ. ಇಂಟರ್ನೆಟ್ ಸೌಲಭ್ಯ ಇಲ್ಲದೇ ಇದ್ದರೆ 9449878805 ಕರೆ ಮಾಡಿಯೂ ಸುದ್ದಿಗಳ ಸತ್ಯಾಸತ್ಯತೆಯನ್ನು ಅರಿಯಬಹುದು. ಒಂದು ವೇಳೆ ನಿಮಗೆ ಲಭಿಸಿದ ಸಂದೇಶ ಸತ್ಯವೋ ಸುಳ್ಳೊ ಎಂದು ಅರಿಯಲು ಸಮಯ ಇಲ್ಲದೇ ಇದ್ದರೆ ಆ ಸಂದೇಶಗಳನ್ನು ಹಂಚಲೇಬೇಡಿ. ಯಾಕೆಂದರೆ ಇದು ಸುಳ್ಳು ಸುದ್ದಿಗಳು ಹರಡುವಿಕೆಯನ್ನು ತಡೆಯುತ್ತದೆ.

ಕರ್ನಾಟಕ ರಾಜ್ಯ ಪೊಲೀಸರ ವೆಬ್​ಸೈಟ್​ ತೆರೆದರೆ ಅದರ ಮುಖಪುಟದಲ್ಲಿ ಮಂಗಳೂರಿನಲ್ಲಿ ಹಕ್ಕಿ ಜ್ವರ ಭೀತಿ, ಮಸೀದಿಯಲ್ಲಿ ಧ್ವನಿ ವರ್ಧಕ ತೆಗೆದುಹಾಕಲು ನೋಟಿಸ್ , ಕೋವಿಡ್ ರೋಗಿಯಾಗಿರುವ ಮಹಿಳೆ ಬೆಂಗಳೂರಿನಲ್ಲಿ ನಾಪತ್ತೆ ಮೊದಲಾದ ಸುಳ್ಳುಸುದ್ದಿಗಳ ಫ್ಯಾಕ್ಟ್ ಚೆಕ್ ಮಾಡಿರುವುದನ್ನು ಕಾಣಬಹುದು.


ಇನ್ನು ಮುಂದೆ ನಿಮಗೆ ಬಂದ ಸಂದೇಶ ಅಥವಾ ನೀವು ಓದಿದ, ನೋಡಿದ ಸುದ್ದಿ ಸುಳ್ಳು ಎಂಬ ಸಂದೇಹ ಬಂದರೆ ಈ ವೆಬ್ ಸೈಟ್​ನಲ್ಲಿ Submit Suspicious Content ಎಂಬ ವಿಭಾಗದಲ್ಲಿ ನಿಮ್ಮ ಸಂದೇಶವನ್ನು ದಾಖಲಿಸಬಹುದು.

Fact Check | ಸ್ಟ್ಯಾಂಡ್​ಅಪ್ ಕಾಮಿಡಿಯನ್ ಮುನಾವರ್​ಗೆ ಥಳಿತ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?