ಸಾಯಂಕಾಲ ಸೈರನ್ ಮತ್ತು ರಾತ್ರಿ ಸಮಯ ಬ್ಲ್ಯಾಕ್​ ಔಟ್- ಎರಡೂ ಮಾಕ್​ ಡ್ರಿಲ್​ಗಳನ್ನು ಕಂಡ ಬೆಂಗಳೂರು

ಅರುಣ್​ ಕುಮಾರ್​ ಬೆಳ್ಳಿ

Updated on: May 07, 2025 | 8:37 PM

ಸೈರನ್ ಬಾರಿಸಿದ್ದನ್ನು ಕೇಳಿಸಿಕೊಂಡಿಲ್ಲ ಎಂದು ನಗರದ ಬಹಳಷ್ಟು ಭಾಗಗಳ ನಿವಾಸಿಗಳು ಹೇಳುತ್ತಿದ್ದಾರೆ. ನಾವು ನಿನ್ನೆ ವರದಿ ಮಾಡಿದಂತೆ 35 ಸ್ಥಳಗಳಲ್ಲಿ ಸೈರನ್ ಮೊಳಗಿಸಲು ವ್ಯವಸ್ಥೆ ಮಾಡಲಾಗಿತ್ತು ಮತ್ತು ಅವುಗಳ ಪೈಕಿ 32 ಮಾತ್ರ ವರ್ಕಿಂಗ್ ಕಂಡೀಷನ್​ನಲ್ಲಿದ್ದವು. ಬೆಂಗಳೂರಿನ ಜನಸಂಖ್ಯೆ 1.25 ಕೋಟಿಗಿಂತ ಜಾಸ್ತಿ ಎಂದು ಹೇಳಲಾಗುತ್ತಿದೆ. ಕೆಲವರಿಗೆ ಸೈರನ್ ಕೇಳಿಸದಿರೋದು ಆಶ್ಚರ್ಯವೇನೂ ಅಲ್ಲ.

ಬೆಂಗಳೂರು, ಮೇ 7: ಸಾಮಾನ್ಯವಾಗಿ ಯುದ್ಧದ ಸಮಯದಲ್ಲಿ (war time) ಕಾರ್ಯರೂಪಕ್ಕೆ ತರುವ ಎರಡು ಆಯಾಮಗಳ ಮಾಕ್​ ಡ್ರಿಲ್ ಅನ್ನು ಇಂದು ನಗರದಲ್ಲಿ ಪ್ರಯೋಗಿಸಲಾಯಿತು. ಸೈರನ್ ಮೊಳಗುವುದು ಮತ್ತು ರಾತ್ರಿಯ ಸಮಯ ಬ್ಲ್ಯಾಕ್ ಔಟ್ ಮಾಡುವುದು ಅಣುಕು ಪ್ರದರ್ಶನದ ಪ್ರಮುಖ ಆಯಾಮಗಳಾಗಿವೆ. ಇಂದು ಸಾಯಂಕಾಲ 4 ಗಂಟೆಗೆ ಸೈರನ್ ಮೊಳಗಿಸಲಾಯಿತು. ಸಾಯಂಕಾಲದ ನಂತರ ಬ್ಲ್ಯಾಕ್ ಔಟ್ ಮಾಡಿರುವುದನ್ನು ದೃಶ್ಯಗಳಲ್ಲಿ ನೋಡಬಹದು. ದೊಡ್ಡದೊಡ್ಡ ಕಟ್ಟಡಗಳಲ್ಲಿ ಮಿಣುಕು ದೀಪಗಳು ಚೆಲ್ಲುವಂಥ ಬೆಳಕನ್ನು ಕಾಣಬಹುದು.

ಇದನ್ನೂ ಓದಿ:  ಭಾರತದ ಯುದ್ಧ ತಯಾರಿ: ಮಾಕ್ ಡ್ರಿಲ್ ಹಿನ್ನೆಲೆ ನಾಳೆ ಬೆಂಗಳೂರಲ್ಲಿ ಮೊಳಗಲಿದೆ ಮೂರು ಹಂತದ ಸೈರನ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.