ಬೆಂಗಳೂರು: ನಿವೃತ್ತ ಡಿಜಿ ಮತ್ತು ಐಜಿಪಿ ಜಗನ್ನಾಥ್ ನಿಧನರಾಗಿದ್ದಾರೆ. 80 ವರ್ಷದ ಜಗನ್ನಾಥ್ ಬೆಂಗಳೂರಿನ ಪುಟ್ಟೇನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1997-1998ರಲ್ಲಿ ಜಗನ್ನಾಥ್ ಅವರು ಡಿಜಿ ಮತ್ತು ಐಜಿಪಿಯಾಗಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಡಿಜಿ ಮತ್ತು ಐಜಿಪಿ ಜಗನ್ನಾಥ್ ಇಂದು ಬೆಳಿಗ್ಗೆ ಸುಮಾರು 7.45 ಕ್ಕೆ ವಿಧಿವಶರಾಗಿದ್ದಾರೆ. ಜೆ.ಪಿ.ನಗರದ 6ನೇ ಹಂತದ ಅಪಾರ್ಟ್ಮೆಂಟ್ ಬಳಿಯ ಪುಟ್ಟೇನಹಳ್ಳಿಯಲ್ಲಿ ಜಗನ್ನಾಥ್ರವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಇಂದು ಮಧ್ಯಾಹ್ನ 3.30ರ ಹೊತ್ತಿಗೆ ಬನಶಂಕರಿಯ ಬಳಿಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ
(Retired DG and IGP Jagannath passed away in Bengaluru)