ಮಾನಸಿಕ ಖಿನ್ನತೆ: ಬೆಂಗಳೂರಿನಲ್ಲಿ ನಿವೃತ್ತ DySP ನೇಣಿಗೆ ಶರಣು

|

Updated on: Dec 27, 2020 | 3:15 PM

ಬ್ಲಡ್​​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಿವೃತ್ತ DySP ಹನುಮಂತಪ್ಪ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಮಾನಸಿಕ ಖಿನ್ನತೆ: ಬೆಂಗಳೂರಿನಲ್ಲಿ ನಿವೃತ್ತ DySP ನೇಣಿಗೆ ಶರಣು
ನಿವೃತ್ತ DySP ಹನುಮಂತಪ್ಪ
Follow us on

ಬೆಂಗಳೂರು: ನಿವೃತ್ತ DySP ಹನುಮಂತಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರದ ಎಂ.ಸಿ.ಲೇಔಟ್​ನಲ್ಲಿ ನಡೆದಿದೆ.

ಬ್ಲಡ್​​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಿವೃತ್ತ DySP ಹನುಮಂತಪ್ಪ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇವರು ಮಾಗಡಿ ರಸ್ತೆ, ಬ್ಯಾಟರಾಯನಪುರ ಠಾಣೆಗಳಲ್ಲಿ ಇನ್ಸ್ಪೆಕ್ಟರ್ ಆಗಿದ್ದರು ಹಾಗೂ ವಿಜಯನಗರ ಉಪವಿಭಾಗದಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಕೆಲಸದಿಂದ ನಿವೃತ್ತಿ, ಬ್ಲಡ್​​ ಕ್ಯಾನ್ಸರ್, ಅಲ್ಲದೆ ನಾಳೆಯಿಂದ ಕೀಮೋಥೆರಫಿ ಚಿಕಿತ್ಸೆಗೆ ಒಳಪಡಬೇಕಿತ್ತು. ಈ ಎಲ್ಲಾ ಕಾರಣಕ್ಕಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ವಿಜಯನಗರ ಪೊಲೀಸ್​​​ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು ಖಚಿತ ಕಾರಣ ತಿಳಿದು ಬರಬೇಕಿದೆ.

ಚುನಾವಣೆ ನಿಮಿತ್ತ ಬಸ್ ಕೊಂಡೊಯ್ದಿದ್ದ ಚಾಲಕ ಡಿಪೋದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣು