ಕಂದಾಯ ಅಧಿಕಾರಿಯಿಂದ ರೈತ ಮಹಿಳೆ ಮೇಲೆ ದೌರ್ಜನ್ಯ; ಜೆಸಿಬಿ ಬಳಸಿ ಕೆರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆ ನಾಶ

| Updated By: ಸಾಧು ಶ್ರೀನಾಥ್​

Updated on: Jun 04, 2022 | 6:40 PM

ಜೆಸಿಬಿ ಬಳಸಿ ಬೆಳೆ ನಾಶ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶ್ರೀನಿವಾಸಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಂದಾಯ ಅಧಿಕಾರಿಯಿಂದ ರೈತ ಮಹಿಳೆ ಮೇಲೆ ದೌರ್ಜನ್ಯ; ಜೆಸಿಬಿ ಬಳಸಿ ಕೆರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆ ನಾಶ
ಕಂದಾಯ ಅಧಿಕಾರಿಯಿಂದ ರೈತ ಮಹಿಳೆ ಮೇಲೆ ದೌರ್ಜನ್ಯ; ಜೆಸಿಬಿ ಬಳಸಿ ಕೆರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆ ನಾಶ
Follow us on

ಕೋಲಾರ: ಕೆರೆ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದೆ ಅನ್ನೋ ಕಾರಣಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ರೈತ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಒತ್ತುವರಿ ತೆರವು ಹೆಸರಲ್ಲಿ ಕೆರೆಯಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋ ಬೆಳೆಯನ್ನು ನಾಶ ಮಾಡಿರುವ ಮನ ಕಲಕುವ ಘಟನೆ ನಡೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ನೆರ್ನಹಳ್ಳಿ ಗ್ರಾಮದಲ್ಲಿಂದು ಈ ಘಟನೆ ನಡೆದಿದ್ದು, ಗ್ರಾಮದ ಶಾಂತಮ್ಮ ಎಂಬುವವರು ಕೆರೆಯಲ್ಲಿ ಬೆಳೆದಿದ್ದ ಒಂದು ಎಕರೆ ಟೊಮ್ಯಾಟೋ ಬೆಳೆಯನ್ನ ಕಂದಾಯ ಇಲಾಖೆ ಅಧಿಕಾರಿಗಳು ನಾಶ ಮಾಡಿದ್ದಾರೆ.

ಕಂದಾಯ ನಿರೀಕ್ಷಕ ವಿನೋದ್ ಎಂಬುವರಿಂದ ಈ ಅಮಾನವೀಯ ಕೃತ್ಯ ನಡೆದಿದ್ದು, ಬೆಳೆ ಬರುವವರೆಗೆ ಕಾಲಾವಕಾಶ ಕೊಡಿ ಎಂದು ಅಂಗಲಾಚಿದ್ರು ಕೇಳಿಸಿಕೊಳ್ಳದೆ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನ ನಾಶ ಮಾಡಲಾಗಿದೆ. ಬೆಳೆಯ ಜೊತೆಗೆ ಬೆಳೆಗೆ ಅಳವಡಿಸಿದ್ದ ಡ್ರಿಪ್, ಟೊಮ್ಯಾಟೊ ಕಡ್ಡಿಗಳು ಸೇರಿ ಎಲ್ಲವೂ ಹಾಳಾಗಿದೆ, ಇನ್ನೂ ಬೆಳೆ ಕಳೆದುಕೊಂಡ ಮಹಿಳೆಯ ಕಣ್ಣೀರು ಹಾಕುತ್ತಿದ್ದು, ಜೆಸಿಬಿ ಬಳಸಿ ಬೆಳೆ ನಾಶ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಅಮಾಯಕ ಮಹಿಳೆಯ ಬೆಳೆ ನಾಶ ಮಾಡಿರುವುದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Also Read:

ಘನಘೋರ ತಪ್ಪನ್ನು ಒಪ್ಪಿಕೊಂಡ ಆ್ಯಸಿಡ್ ನಾಗೇಶ, ಆಸ್ಪತ್ರೆಯಲ್ಲಿ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ ಭಯಾನಕ ಕಥನ

ನರಸಾಪುರ ಹೊಂಡಾ ಕಂಪನಿಯ ಗುತ್ತಿಗೆ ನೌಕರರಿಂದ ಪ್ರತಿಭಟನೆ

ಕೋಲಾರ ಜಿಲ್ಲೆಯ ನರಸಾಪುರ ಬಳಿ ಇರುವ ಹೊಂಡಾ ಕಂಪನಿಯ ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಲಾರ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆಗೆ ತಯಾರಿ ನಡೆಸಿದ್ದಾರೆ. 500 ಕ್ಕೂ ಹೆಚ್ಚು ಹೋಂಡಾ ಕಂಪನಿಯ ಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ನೌಕರರ ಬೇಡಿಕೆಗಳ ಈಡೇರಿಕೆಗೆ ಹೊಂಡಾ ಕಂಪನಿಯ ಮ್ಯಾನೇಜ್ಮೆಂಟ್ ಎರಡು ವಾರಗಳ ಕಾಲಾವಕಾಶ ಕೋರಿತ್ತು, ಆದರೆ ಕಾಲಾವಕಾಶ ಮುಕ್ತಾಯವಾದ ಹಿನ್ನೆಲೆ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನೌಕರರು, ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

ಅರಸೀಕೆರೆ ಮಹಿಳಾ ತಹಶೀಲ್ದಾರ್ ನೇತೃತ್ವದಲ್ಲಿ ರಾತ್ರಿ ವೇಳೆ ದಾಳಿ, ಅಕ್ರಮ ಪಡಿತರ ಅಕ್ಕಿ ದಾಸ್ತಾನು ಪತ್ತೆ

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಪತ್ತೆ ಹಚ್ಚಲಾಗಿದೆ. ಅರಸೀಕೆರೆ ತಹಶೀಲ್ದಾರ್​​​ ವಿದ್ಯಾ ನೇತೃತ್ವದಲ್ಲಿ ಅರಸೀಕೆರೆ ತಾಲೂಕಿನ ಹಲವು ಗೋಡೌನ್​ಗಳ ಮೇಲೆ ನಿನ್ನೆ ರಾತ್ರಿ ದಾಳಿ ನಡೆಸಲಾಗಿದ್ದು, ಒಟ್ಟು 50 ಮೆಟ್ರಿಕ್ ಟನ್​​​ಗಿಂತಲೂ ಅಧಿಕ ಪ್ರಮಾಣದ ಅಕ್ಕಿ ಜಪ್ತಿ ಮಾಡಲಾಗಿದೆ. ಡಿ. ಎಂ. ಕುರ್ಕೆ ಗ್ರಾಮದ ಹನುಮಂತಪ್ಪ ಎಂಬುವವರ ಗೋಡೌನ್​
ಕೋಳಿ ಫಾರಂನಲ್ಲಿ ಅಪಾರ ಪ್ರಮಾಣದ ಅಕ್ರಮ ಪಡಿತರ ಅಕ್ಕಿ ಜಪ್ತಿಯಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Sat, 4 June 22