ಬೆಂಗಳೂರು: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಮಾಡಿದ ಆರೋಪಿಗಳು ಜೈಲಿನಲ್ಲಿ ಮೊಬೈಲ್ ಬಳಕೆ ಮಾಡಿ ಟೀಕೆ ವ್ಯಕ್ತವಾದ ಬೆನ್ನಲ್ಲೆ ಗೃಹಸಚಿವ ಅರಗ ಜ್ಞಾನೇಂದ್ರ (Araga Jnanendra) ಅವರು ಕೇಂದ್ರ ಕಾರಾಗೃಹಕ್ಕೆ ದಿಡೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಹರ್ಷ ಕೊಲೆ ಮಾಡಿದ ಆರೋಪಿಗಳ ಮೊಬೈಲ್ ಬಳಕೆ ಹಿನ್ನೆಲೆ ವಸ್ತು ಸ್ಥಿತಿ ಅರಿಯಲು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ಗೃಹಸಚಿವರು, ಹರ್ಷ ಆರೋಪಿಗಳ ಬ್ಯಾರೆಕ್ ಕಡೆ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮೊಬೈಲ್ ಸಿಕ್ಕಿದ್ದು ಹೇಗೆ ಅಂತ ಖುದ್ದಾಗಿ ಪರಿಶೀಲನಗೆ ಇಳಿದ ಗೃಹ ಸಚಿವರು, 35 ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಯುವತಿಯರನ್ನು ಚುಡಾಯಿಸುತ್ತಿದ್ದ ಅನ್ಯ ಕೋಮಿನ ಯುವಕರು; ಪ್ರಶ್ನಿಸಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ
ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ವರದಿ ಹಿನ್ನೆಲೆ ಕಾರಾಗೃಹದ ಕೆಲವು ಹೈಸೆಕ್ಯೂರಿಟಿ ಬ್ಯಾರಕ್ಗಳ ಪರಿಶೀಲನೆ ನಡೆಸಿದ ಗೃಹಸಚಿವರು ಜೈಲಿನಲ್ಲಿ ಮೊಬೈಲ್, ನಿಷೇಧಿತ ವಸ್ತು ಬಳಕೆ ಮಾಡಲಾಗುತ್ತಿದೆಯೇ? ಮೊಬೈಲ್ ಅಥವಾ ಇನ್ನಿತರ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸಲಾಗಿದೆಯೇ ಎಂಬುದರ ಬಗ್ಗೆ ಕುರಿತು ತಪಾಸಣೆ ನಡೆಸಿದರು.
ಅಧಿಕಾರಿಗಳ ಧನದಾಹಕ್ಕೆ ಗೃಹಸಚಿವರ ಕಿಡಿ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮದ ಘಾಟು ಪದೇಪದೇ ಕೇಳಿಬರುತ್ತಿರುತ್ತದೆ. ಇದೀಗ ಜೈಲಿನಲ್ಲಿ ಕೈದಿಗಳನ್ನು ನೋಡಲು ಬರುತ್ತಿರುವವರಿಂದ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವ ವಿಚಾರ ತಿಳಿದುಬಂದಿದೆ. ಅದರಂತೆ ಜೈಲು ಅಧಿಕಾರಿಗಳ ಧನದಾಹಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಕಿಡಿಯಾಗಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೈಲಿನ 35 ಸಿಬ್ಬಂದಿಗಳು ಅಮಾನತು
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ, ಮಾದಕ ವಸ್ತು ಬಳಕೆ ಆರೋಪ ಕೇಳಿ ಬಂದ ಹಿನ್ನೆಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ 35 ಸಿಬ್ಬಂದಿ ಅಮಾನತುಗೊಳಿಸಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಆದೇಶ ಹೊರಡಿಸಿದ್ದಾರೆ. ಜೈಲಿನ ಮೇಲಾಧಿಕಾರಿಗಳ ಹೆಸರು ಕೂಡ ಅಮಾನತು ಪಟ್ಟಿಯಲ್ಲಿದೆ. ಇದೇ ವೇಳೆ ಹಣದಾಸೆಗೆ ವೃತ್ತಿ ದ್ರೋಹ ಮಾಡಿದ ಸಿಬ್ಬಂದಿ ಕಿಕೌಟ್ ಮಾಡಲಾಗಿದೆ.
ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇಲ್ಲಿ ಆರೋಪಿಗಳಿಗೆ ರಾಜಾಥಿತ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೆಲವು ದಿನಗಳ ಹಿಂದೆ ಆರೋಪಿಗಳು ಮೊಬೈಲ್ನಲ್ಲಿ ಮನೆಯವರೊಂದಿಗೆ ಮೊಬೈಲ್ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದ ಬಗ್ಗೆ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಇದನ್ನೂ ಓದಿ: ಶಾಲೆಗೆ ಹೋಗಲು ಇಷ್ಟವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ
ಜೈಲಿನಲ್ಲಿ ಹರ್ಷ ಹಂತಕರು ಮೊಬೈಲ್ ಬಳಕೆ ಮಾಡುತ್ತಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ಆಕ್ರೋಶಗೊಂಡಿರುವ ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದ್ದವು. ಇದೇ ವೇಳೆ ಹರ್ಷ ಸಹೋದರಿ ಸೇರಿದಂತೆ ಕುಟುಂಬಸ್ಥರು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು.
ಜೈಲಿನಲ್ಲಿ ಆರೋಪಿಗಳಿಗೆ ರಾಜಾಥಿತ್ಯ ನೀಡಿರುವ ಬಗ್ಗೆ ಗೃಹಸಚಿವರನ್ನು ಭೇಟಿಯಾಗಲು ಮುಂದಾದ ಹರ್ಷ ಸಹೋದರಿ, ಗೃಹಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ವಿಚಾರವನ್ನು ಪ್ರಶ್ನಿಸಿದ್ದಕ್ಕೆ ತನ್ನನ್ನು ಬೈದಿದ್ದಾರೆ ಎಂದು ಆರೋಪಿಸಿದ್ದರು. ಈ ಎಲ್ಲಾ ಬೆಳವಣಿಗಳ ನಡುವೆ ಗೃಹಸಚಿವರು ದಿಡೀರ್ ಆಗಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಹಾಡಹಗಲೇ ಪುರಸಭೆ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆ!
Published On - 12:09 pm, Tue, 12 July 22