ಸೇಫ್ ಆಗಿ ಇಳಿಸಿದ್ದ ಚಾಲಕನೇ ವಿದ್ಯಾರ್ಥಿ ಮೇಲೆ ಬಸ್ ಹರಿಸಿಬಿಟ್ಟ!
ಆನೇಕಲ್: ಶಾಲಾ ಬಸ್ ಹರಿದು ಎಲ್ಕೆಜಿ ವಿದ್ಯಾರ್ಥಿ ದೀಕ್ಷಿತ್ ಮೃತಪಟ್ಟಿರುವ ಘಟನೆ ಕಮ್ಮಸಂದ್ರ ಬಳಿಯ ಅನಂತನಗರದಲ್ಲಿ ನಡೆದಿದೆ. ಅತೀ ವೇಗವಾಗಿ ಶಾಲಾ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅವಘಡದಲ್ಲಿ ಹೊಸೂರು ಮುಖ್ಯರಸ್ಯೆಯಲ್ಲಿರುವ ಕಮ್ಮಸಂದ್ರದ ಸೇಂಟ್ ಪೀಟರ್ಸ್ ಇಂಗ್ಲಿಷ್ ಶಾಲೆಗೆ ಸೇರಿದ ವಿದ್ಯಾರ್ಥಿ ದೀಕ್ಷಿತ್ ಸಾವಿಗೀಡಾಗಿದ್ದಾನೆ. ಮೊದಲು ಶಾಲಾ ಬಸ್ನಿಂದ ಮಗುವನ್ನು ಚಾಲಕನೇ ಕೆಳಗಿಳಿಸಿದ್ದಾನೆ. ಬಸ್‌ನ ಎಡ ಭಾಗದಲ್ಲಿ ಮಗು ನಡೆದುಕೊಂಡು ಹೋಗುತ್ತಿತ್ತು. ಮಗುವನ್ನು ಗಮನಿಸದೆ ಬಸ್ ಅನ್ನು ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಬಸ್ […]
ಆನೇಕಲ್: ಶಾಲಾ ಬಸ್ ಹರಿದು ಎಲ್ಕೆಜಿ ವಿದ್ಯಾರ್ಥಿ ದೀಕ್ಷಿತ್ ಮೃತಪಟ್ಟಿರುವ ಘಟನೆ ಕಮ್ಮಸಂದ್ರ ಬಳಿಯ ಅನಂತನಗರದಲ್ಲಿ ನಡೆದಿದೆ. ಅತೀ ವೇಗವಾಗಿ ಶಾಲಾ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅವಘಡದಲ್ಲಿ ಹೊಸೂರು ಮುಖ್ಯರಸ್ಯೆಯಲ್ಲಿರುವ ಕಮ್ಮಸಂದ್ರದ ಸೇಂಟ್ ಪೀಟರ್ಸ್ ಇಂಗ್ಲಿಷ್ ಶಾಲೆಗೆ ಸೇರಿದ ವಿದ್ಯಾರ್ಥಿ ದೀಕ್ಷಿತ್ ಸಾವಿಗೀಡಾಗಿದ್ದಾನೆ. ಮೊದಲು ಶಾಲಾ ಬಸ್ನಿಂದ ಮಗುವನ್ನು ಚಾಲಕನೇ ಕೆಳಗಿಳಿಸಿದ್ದಾನೆ. ಬಸ್‌ನ ಎಡ ಭಾಗದಲ್ಲಿ ಮಗು ನಡೆದುಕೊಂಡು ಹೋಗುತ್ತಿತ್ತು. ಮಗುವನ್ನು ಗಮನಿಸದೆ ಬಸ್ ಅನ್ನು ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಬಸ್ ಕೆಳಗೆ ಸಿಲುಕಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.