ಶಿಕ್ಷಕರು ಬೈದಿದ್ದಕ್ಕೆ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

|

Updated on: Dec 12, 2019 | 2:05 PM

ಬೆಂಗಳೂರು: ಶಿಕ್ಷಕರು ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಮ್ಮಲೂರು ಲೇಔಟ್​ನಲ್ಲಿ ನಡೆದಿದೆ. ಮನೆಯ ಕೋಣೆಯಲ್ಲಿ ನೇಣುಬಿಗಿದುಕೊಂಡು ವಿದ್ಯಾರ್ಥಿ ವೇಣುಗೋಪಾಲ್​(13) ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಿಸೆಂಬರ್ 9 ರಂದು ಶಾಲೆಯಲ್ಲಿ ಸಹಪಾಠಿಯೊಂದಿಗೆ ವೇಣುಗೋಪಾಲ್ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವೇಳೆ ಸಹಪಾಠಿಗೆ ಚಾಕು ತೋರಿಸಿ ಹೆದರಿಸಿದ್ದ ಎನ್ನಲಾಗಿದೆ. ಹೀಗಾಗಿ ಪೋಷಕರನ್ನ ಕರೆದುಕೊಂಡು ಬರುವಂತೆ ಶಿಕ್ಷಕರು ಸೂಚಿಸಿದ್ದರು. ಪೋಷಕರನ್ನು ಶಾಲೆಗೆ ಕರೆತರಲು ಹೆದರಿ ಮನನೊಂದು ತಡರಾತ್ರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆ ಬಳಿ ಮೃತ ವಿದ್ಯಾರ್ಥಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, […]

ಶಿಕ್ಷಕರು ಬೈದಿದ್ದಕ್ಕೆ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ
Follow us on

ಬೆಂಗಳೂರು: ಶಿಕ್ಷಕರು ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಮ್ಮಲೂರು ಲೇಔಟ್​ನಲ್ಲಿ ನಡೆದಿದೆ. ಮನೆಯ ಕೋಣೆಯಲ್ಲಿ ನೇಣುಬಿಗಿದುಕೊಂಡು ವಿದ್ಯಾರ್ಥಿ ವೇಣುಗೋಪಾಲ್​(13) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡಿಸೆಂಬರ್ 9 ರಂದು ಶಾಲೆಯಲ್ಲಿ ಸಹಪಾಠಿಯೊಂದಿಗೆ ವೇಣುಗೋಪಾಲ್ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವೇಳೆ ಸಹಪಾಠಿಗೆ ಚಾಕು ತೋರಿಸಿ ಹೆದರಿಸಿದ್ದ ಎನ್ನಲಾಗಿದೆ. ಹೀಗಾಗಿ ಪೋಷಕರನ್ನ ಕರೆದುಕೊಂಡು ಬರುವಂತೆ ಶಿಕ್ಷಕರು ಸೂಚಿಸಿದ್ದರು. ಪೋಷಕರನ್ನು ಶಾಲೆಗೆ ಕರೆತರಲು ಹೆದರಿ ಮನನೊಂದು ತಡರಾತ್ರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆ ಬಳಿ ಮೃತ ವಿದ್ಯಾರ್ಥಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ತಡರಾತ್ರಿಯಾದ್ರೂ ವೇಣುಗೋಪಾಲ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಕುಟುಂಬಸ್ಥರು ಹುಡುಕಿದರೂ ವೇಣುಗೋಪಾಲ್ ಪತ್ತೆಯಾಗಿಲ್ಲ. ಬೆಳಗ್ಗೆ ಮನೆ ಹಿಂಭಾಗ ಇರುವ ಪಾಳು ಬಾವಿಯಲ್ಲಿ ನೋಡಿದಾಗ ವಿದ್ಯಾರ್ಥಿ ಆತ್ಮಹತ್ಯೆ  ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೋಷಕರು ನೀಡುವ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. 

Published On - 12:19 pm, Thu, 12 December 19