ಬೆಂಗಳೂರು: ಕೊರೊನಾ ಆತಂಕದ ನಡುವೆಯೇ ಕೊರೊನಾ ರೂಪಾಂತರದ ಭಯ ಶುರುವಾಗಿದೆ. ಮೊನ್ನೆ ಅಂದ್ರೆ ಡಿ.23 ಬ್ರಿಟನ್ ನಿಂದ ಬೆಂಗಳೂರಿಗೆ ಬಂದಿದ್ದ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ನಿನ್ನೆ ಮತ್ತೆ ಬ್ರಿಟನ್ ನಿಂದ ಬಂದವರ ಪೈಕಿ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
ಇನ್ನು ಬ್ರಿಟನ್‌ನಿಂದ ವಾಪಸಾದ 7 ಜನರಿಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಬ್ರಿಟನ್‌ನಿಂದ ಬಂದ ಎಲ್ಲರಿಗೂ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ಡಿ.12ರಿಂದ 21ರವರೆಗೆ 1,582 ಜನ ಬೆಂಗಳೂರಿಗೆ ಆಗಮಿಸಿದ್ದರು. ಅವರೆಲ್ಲರಿಗೂ RTPCR ಟೆಸ್ಟ್ ಮಾಡಲು ಬಿಬಿಎಂಪಿ ಮುಂದಾಗಿತ್ತು.
ಆ ಒಂದು ಸಾವಿರ ಜನರಿಂದಲೇ ರಾಜ್ಯಕ್ಕೆ ಕಾದಿದೆ ಕಂಟಕ
ಈ ಪೈಕಿ ಕೆಲವರು ರಾಜ್ಯಾದ್ಯಂತ ಓಡಾಡಿರುವ ಮಾಹಿತಿ ಸಿಕ್ಕಿದೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಚಾರ ನಡೆಸಿದ್ದಾರೆ. ಸದ್ಯ ಈಗ BBMP ಬ್ರಿಟನ್‌ನಿಂದ ವಾಪಸಾದವರ ಪಟ್ಟಿ ಸಿದ್ಧಪಡಿಸಿದೆ. ಆದರೆ ಇವರನ್ನು ಪತ್ತೆ ಮಾಡುವುದೇ ಈಗ ದೊಡ್ಡ ಸವಾಲಾಗಿದೆ. ಬ್ರಿಟನ್‌ನಿಂದ ವಾಪಸಾಗಿರುವ ಕೆಲವರು ಕೈಗೆ ಸಿಗುತ್ತಿಲ್ಲ. ಕೆಲವರು ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿದ್ದಾರೆ. ಇನ್ನೂ ಕೆಲವರು ಬೆಂಗಳೂರು ಬಿಟ್ಟು ಪ್ರವಾಸದಲ್ಲಿದ್ದಾರೆ.
ಬ್ರಿಟನ್‌ನಲ್ಲಿ ಕೊರೊನಾ ಹೊಸ ಪ್ರಭೇದ ಪತ್ತೆ ಹಿನ್ನೆಲೆಯಲ್ಲಿ ಈಗ ಅನಿವಾರ್ಯವಾಗಿ ಎಲ್ಲರಿಗೂ ಕೊವಿಡ್ ಟೆಸ್ಟ್ ಅಗತ್ಯವಾಗಿದೆ. ಕೊವಿಡ್ ಪಾಸಿಟಿವ್ ಬಂದರೂ ಮತ್ತೊಮ್ಮೆ ಟೆಸ್ಟ್ ಅಗತ್ಯ. ಹೊಸ ಪ್ರಭೇದದ ಕೊರೊನಾ ಸೋಂಕು ಇದೆಯಾ ಅಥವಾ ಹಳೆಯ ಕೊವಿಡ್ ವೈರಸ್ ಎಂಬ ಬಗ್ಗೆ ಟೆಸ್ಟ್ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಕೊರೊನಾದ ಭಯ ಮತ್ತಷ್ಟು ಹೆಚ್ಚಾಗಿದೆ.
ಬ್ರಿಟನ್‌ನಲ್ಲಿ ಕೊರೊನಾ ಅವತಾರ್ 2 ಮಧ್ಯೆಯೇ.. ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾವತಾರ ಪತ್ತೆ!
Published On - 8:54 am, Fri, 25 December 20