AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಕೀ ಬಳಸಿ ಮೊಬೈಲ್ ಶೋ ರೂಮ್‌ನಲ್ಲಿ ಕಳ್ಳತನ.. ಎಲ್ಲಿ?

ನಕಲಿ ಕೀ ಬಳಸಿ ರಿಲಾಯನ್ಸ್ ಫ್ರೆಶ್ ಟೆರೇಸ್ ಬಳಿಯ ಡೋರ್ ಓಪನ್ ಮಾಡಿ ಶೋ ರೂಮ್​ಗೆ ನುಗ್ಗಿ ವಿವಿಧ ಬ್ರಾಂಡ್​ನ 23 ಆ್ಯಂಡ್ರಾಯ್ಡ್ ಮೊಬೈಲ್‌ಗಳು, 6 ಐಫೋನ್‌ಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನ ಎಗರಿಸಿ ಪರಾರಿಯಾಗಿದ್ದಾರೆ.

ನಕಲಿ ಕೀ ಬಳಸಿ ಮೊಬೈಲ್ ಶೋ ರೂಮ್‌ನಲ್ಲಿ ಕಳ್ಳತನ.. ಎಲ್ಲಿ?
ಕಳ್ಳತನದ ವೇಳೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು
ಆಯೇಷಾ ಬಾನು
ಆಯೇಷಾ ಬಾನು|

Updated on: Dec 25, 2020 | 8:11 AM

Share

ಬೆಂಗಳೂರು: ನಕಲಿ ಕೀ ಬಳಸಿ ಮೊಬೈಲ್ ಶೋ ರೂಮ್‌ನಲ್ಲಿ ಕಳ್ಳತನ ಮಾಡಿರುವ ಘಟನೆ ಇಂದಿರಾನಗರದಲ್ಲಿರುವ ಶೋ ರೂಮ್ ಒಂದರಲ್ಲಿ ನಡೆದಿದೆ. ಖತರ್ನಾಕ್ ಖದೀಮರು ಇಂದಿರಾನಗರದ ಹಂಡ್ರೆಡ್ ಫೀಟ್ ರಸ್ತೆಯ ರಿಲಾಯನ್ಸ್ ಶೋ ರೂಮ್​ನಲ್ಲಿ ತಡ ರಾತ್ರಿ ತಮ್ಮ ಕೈಚಳಕ ತೋರಿಸಿದ್ದಾರೆ.

ನಕಲಿ ಕೀ ಬಳಸಿ ರಿಲಾಯನ್ಸ್ ಫ್ರೆಶ್ ಟೆರೇಸ್ ಬಳಿಯ ಡೋರ್ ಓಪನ್ ಮಾಡಿ ಶೋ ರೂಮ್​ಗೆ ನುಗ್ಗಿ ವಿವಿಧ ಬ್ರಾಂಡ್​ನ 23 ಆ್ಯಂಡ್ರಾಯ್ಡ್ ಮೊಬೈಲ್‌ಗಳು, 6 ಐಫೋನ್‌ಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನ ಎಗರಿಸಿ ಪರಾರಿಯಾಗಿದ್ದಾರೆ. ಸದ್ಯ ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾಗಿರಿಯ 4 ಅಂಗಡಿಗಳಲ್ಲಿ ಕಳ್ಳತನ: ಕಳ್ಳರ ಪತ್ತೆ ಹಚ್ಚಲು ಶ್ವಾನದಳದ ನೆರವು

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.