ರಾಜಕೀಯವಾಗಿ ನನ್ನನ್ನು ಮುಗಿಸಿದರೆ ದಾವಣಗೆರೆಯನ್ನು ಆಳಬಹುದು ಎಂದು ಶಾಮನೂರು ಕನಸು ಕಾಣುತ್ತಿದ್ದಾರೆ: ಜಿ.ಎಂ.ಸಿದ್ದೇಶ್ವರ್

| Updated By: shivaprasad.hs

Updated on: Jul 04, 2021 | 4:34 PM

ಶಾಮನೂರು ಶಿವಶಂಕರಪ್ಪನವರಿಗೆ ನಾನೊಬ್ಬನೇ ಟಾರ್ಗೆಟ್ ಆಗಿದ್ದೇನೆ. ನನ್ನನ್ನು ರಾಜಕೀಯವಾಗಿ ಮುಗಿಸಿದ್ರೆ ಜಿಲ್ಲೆ ಆಳಬಹುದು ಎಂಬ ಕನಸು ಕಾಣುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಸಂಸದ ಜಿ.ಎಂ.‌ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ.

ರಾಜಕೀಯವಾಗಿ ನನ್ನನ್ನು ಮುಗಿಸಿದರೆ ದಾವಣಗೆರೆಯನ್ನು ಆಳಬಹುದು ಎಂದು ಶಾಮನೂರು ಕನಸು ಕಾಣುತ್ತಿದ್ದಾರೆ: ಜಿ.ಎಂ.ಸಿದ್ದೇಶ್ವರ್
ಬಿಜೆಪಿ ಸಂಸದ ಜಿ.ಎಂ.ಸಿದ್ಧೇಶ್ವರ
Follow us on

ದಾವಣಗೆರೆ: ನನ್ನ ಬಗ್ಗೆ ಗೊತ್ತಿರುವುದರಿಂದಲೇ ನಾಲ್ಕು ಬಾರಿ ಜಿಲ್ಲೆಯ ಜನ ನನ್ನನ್ನು ಆರಿಸಿದ್ದಾರೆ. ಆದ್ದರಿಂದಲೇ ರಾಜಕೀಯವಾಗಿ ನನ್ನನ್ನು ಮುಗಿಸಿದರೆ ಜಿಲ್ಲೆಯನ್ನು ಆಳಬಹುದು ಎಂಬ ಕನಸನ್ನು ಶಾಮನೂರು ಶಿವಶಂಕರಪ್ಪ ಕಾಣುತ್ತಿದ್ದಾರೆ. ಅವರಿಗೆ ನಾನೊಬ್ಬನೇ ಟಾರ್ಗೆಟ್ ಆಗಿದ್ದೇನೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಸಂಸದ ಜಿ.ಎಂ.‌ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಬ್ಯಾನರ್​ ಅಡಿಯಲ್ಲಿ ಲಸಿಕೆ ಹಾಕಲಾಗುತ್ತಿತ್ತು. ಅದನ್ನು ತಡೆದಿದ್ದೇವೆ. ಇದೇ ಕಾರಣಕ್ಕೆ ನನ್ನ ವಿರುದ್ಧ ಪದೇ ಪದೇ ಆರೋಪ ನಡೆಸಲಾಗುತ್ತಿದೆ ಎಂದು ಸಿದ್ಧೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಜಿ.ಎಂ.ಸಿದ್ದೇಶ್ವರ್ ಕುರಿತು ಹಗುರವಾಗಿ ಮಾತನಾಡಬೇಡಿ: ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಎಚ್ಚರಿಕೆ

ಶಾಮನೂರು ಶಿವಶಂಕರಪ್ಪ ಸಂಸದ ಜಿ.ಎಂ.ಸಿದ್ಧೇಶ್ವರ್ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ. ಅಂತಹ ಹೇಳಿಕೆಗಳನ್ನು ನೀಡಬೇಡಿ. ಸುಖಾಸುಮ್ಮನೆ ಆರೋಪ ಮಾಡಿದರೆ ನಿಮ್ಮ ಹಗರಣ ಹೊರ ತೆಗೆಯಲಾಗುವುದು. ನೀವು ಮಾಡಿದ ಅವ್ಯವಹಾರಗಳ ಇತಿಹಾಸ ನನ್ನ ಬಳಿಯಿದೆ ಎಂದು ಶಾಮನೂರು ಶಿವಶಂಕರಪ್ಪ ಅವರಿಗೆ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಎಚ್ಚರಿಕೆ ನೀಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಕೇವಲ ಕಾಂಗ್ರೆಸ್ ಪಕ್ಷದವರಲ್ಲ. ಮೂರು ಪಕ್ಷಗಳು ಅಧಿಕಾರಕ್ಕೆ ಬಂದರೂ ಅವರ ಕೆಲಸವಾಗಬೇಕು. ಆದ್ದರಿಂದಲೇ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿ ಎಂಬ ಮಾತುಗಳನ್ನಾಡಿದ್ದಾರೆ ಎಂದು ಜಾಧವ್ ಹೇಳಿದರು.

ರಾಜ್ಯ ಸರ್ಕಾರ ದಾವಣಗೆರೆಯಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಬಂದರೆ ಶಾಮನೂರು ಅವರ ಆದಾಯಕ್ಕೆ ಹೊಡೆತ ಬೀಳಲಿದೆ. ಆದ್ದರಿಂದಲೇ ಅವರು ಇದಕ್ಕೆ ಅಡ್ಡಿಯಾಗಿದ್ದಾರೆ ಎಂದು ಯಶವಂತರಾವ್ ಜಾಧವ್ ಆರೋಪಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ  ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಬಹುತೇಕ ಖಚಿತ: ಶಾಮನೂರು ಸ್ವಾಗತ

ಈ ನಡುವೆ ದಾವಣಗೆರೆ ಜಿಲ್ಲೆಯಲ್ಲಿ  ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಬಹುತೇಕ ಖಚಿತವಾಗಿದೆ. ಇದನ್ನು ಇದೇ ತಿಂಗಳ ಒಂಬತ್ತರಂದು ದಾವಣಗೆರೆಗೆ ಆಗಮಿಸಲಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಘೋಷಣೆ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಇರುವ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮೆಡಿಕಲ್ ಕಾಲೇಜ್ ಆರಂಭಕ್ಕೆ  ಚಿಂತನೆ ನಡೆಸಲಾಗಿದೆ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸರ್ಕಾರಿ ‌ಮೆಡಿಕಲ್ ಕಾಲೇಜ್ ಸ್ಥಾಪನೆ ಸ್ವಾಗತಾರ್ಹ ನಿರ್ಧಾರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದರಿಂದಾಗಿ ಇನ್ನಷ್ಟು ಜನ ಪ್ರತಿಭಾನ್ವಿತರಿಗೆ  ಅವಕಾಶ ಒದಗಲಿದ್ದು ಆದಷ್ಟು ಬೇಗ ಕಾಲೇಜು ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲೇ ಈ ಬಾರಿಯ ಅಧಿವೇಶನ ನಡೆಸಬೇಕು: ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು?

(Shamanuru Shivashankarappa dreamt of ruling Davanagere when he politically finishes me says GM Siddeshwar)

Published On - 4:25 pm, Sun, 4 July 21