ಬೆಳಗಾವಿಯಲ್ಲೇ ಈ ಬಾರಿಯ ಅಧಿವೇಶನ ನಡೆಸಬೇಕು: ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು?

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ ಬರೆಯಲಿರುವ ಬಗ್ಗೆ ತಿಳಿದುಬಂದಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ರೆ ಸರ್ಕಾರವನ್ನ ಮುಜುಗರಕ್ಕೀಡು ಮಾಡಬಹುದೆಂದು ಲೆಕ್ಕಾಚಾರ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿಯಲ್ಲೇ ಈ ಬಾರಿಯ ಅಧಿವೇಶನ ನಡೆಸಬೇಕು: ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು?
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
TV9kannada Web Team

| Edited By: ganapathi bhat

Jul 04, 2021 | 4:10 PM

ಬೆಂಗಳೂರು: ಈ ಬಾರಿಯ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಕಾಂಗ್ರೆಸ್ ಒತ್ತಾಯ ಮಾಡಿದೆ. ಉತ್ತರ ಕರ್ನಾಟಕ ಶಾಸಕರಿಂದ ಸಿದ್ದರಾಮಯ್ಯಗೆ ಒತ್ತಾಯ ವ್ಯಕ್ತವಾಗಿದೆ. ಸರ್ಕಾರ 2 ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ. ಉತ್ತರ ಕರ್ನಾಟಕ ಭಾಗದವರ ಪ್ರತಿಭಟನೆಗೆ ಹೆದರಿ ಅಧಿವೇಶನ ಮಾಡಿಲ್ಲ. ಕೊರೊನಾ ಕಾರಣ ನೀಡಿ ಈ ಸಲವೂ ಬೆಳಗಾವಿಯಲ್ಲಿ ನಡೆಸಲ್ಲ. ಆದರೆ, ಬೆಳಗಾವಿಯಲ್ಲೇ ಅಧಿವೇಶನ ನಡೆಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ ಬರೆಯಲಿರುವ ಬಗ್ಗೆ ತಿಳಿದುಬಂದಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ರೆ ಸರ್ಕಾರವನ್ನ ಮುಜುಗರಕ್ಕೀಡು ಮಾಡಬಹುದೆಂದು ಲೆಕ್ಕಾಚಾರ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ನೆರೆ ನಿರ್ವಹಣೆ ವೈಫಲ್ಯ, ಕಬ್ಬು ಬೆಳೆಗಾರರ ಸಮಸ್ಯೆ, ಉತ್ತರ ಕರ್ನಾಟಕ ಭಾಗಕ್ಕೆ ಅನುದಾನದ ಕೊರತೆಯ ಬಗ್ಗೆ ಚರ್ಚಿಸಬಹುದು ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಲೆಕ್ಕಾಚಾರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಈಗಾಗಲೇ ‘ಕೈ’ ನಾಯಕರ ಜೊತೆ ಸಿದ್ದರಾಮಯ್ಯ ಚರ್ಚಿಸಿದ್ದಾರೆ ಎಂದೂ ತಿಳಿದುಬಂದಿದೆ.

ಲಸಿಕೆ ನೀಡಿಕೆಯಲ್ಲಿ ರಾಜ್ಯ ಸರ್ಕಾರ ವಿಫಲ ರಾಜ್ಯ ಸರ್ಕಾರ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಗಳು, ನೌಕರರು ಸೇರಿ ಎಲ್ಲರಿಗೂ ಕಡ್ಡಾಯಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಲಸಿಕೆ ನೀಡಲು ಮಾತ್ರ ವಿಫಲಗೊಂಡಿದೆ ಎಂದು ಟ್ವೀಟ್‌ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ ಹೊರಹಾಕಿದೆ. ಸಮರ್ಪಕವಾಗಿ ಕೊವಿಡ್ ಲಸಿಕೆ ನೀಡಲಾಗದ ರಾಜ್ಯ ಸರ್ಕಾರ, ಜಾಹೀರಾತು ಮಾತ್ರ ಎಲ್ಲೆಡೆ ಹಾಕಿ ಲಸಿಕೆಯನ್ನ ಪಿಆರ್ ಮೆಟೀರಿಯಲ್ ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ.

ರಾಜ್ಯಾದ್ಯಂತ ಜನರು ಕೊವಿಡ್ ಲಸಿಕೆಗಾಗಿ ಪರದಾಡುತ್ತಿದ್ದಾರೆ. ರಾಜ್ಯಕ್ಕೆ ಲಸಿಕೆಗಳು ಬರಲಿಲ್ಲವೇ? ಬಂದವು ಎಲ್ಲಿ ಹೋದವು? ಲಸಿಕೆ ಕಾರ್ಯಕ್ರಮದಲ್ಲಿ ಪಾರದರ್ಶಕತೆ ಇಲ್ಲವೇಕೆ? ಎಂದು ಟ್ವೀಟ್‌ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿದೆ.

ನೌಕರರು ಕೆಲಸಕ್ಕೆ ಹೋಗಲು ಲಸಿಕೆ ಪಡೆದಿರಬೇಕು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಲಸಿಕೆ ಪಡೆದಿರಬೇಕು, ವಿದೇಶ ಪ್ರಯಾಣಕ್ಕೆ ಲಸಿಕೆ ಪಡೆದಿರಬೇಕು, ಶಿಕ್ಷಕ ವರ್ಗದವರು ಲಸಿಕೆ ಪಡೆದಿರಬೇಕು, ಎಲ್ಲಾ ಕ್ಷೇತ್ರಗಳು ಮರು ಕಾರ್ಯಾರಂಭ ಮಾಡಲು ಲಸಿಕೆ ಪಡೆದಿರುವುದು ಕಡ್ಡಾಯ ನಿಯಮ ಮಾಡಿರುವ ಸರ್ಕಾರ ಲಸಿಕೆ ನೀಡಲು ಮಾತ್ರ ವಿಫಲಗೊಂಡಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಹೇಳಿದೆ.

ಇದನ್ನೂ ಓದಿ: ಕಾಂಗ್ರೆಸ್​ನಿಂದ ಹೋದ 14 ಜನರನ್ನೂ ಸೇರಿಸಿಕೊಳ್ಳುತ್ತೇವೆ ಎಂದು ಯಾರೂ ಹೇಳಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ

ಲಂಚ ಪಡೆಯುವವರಿಗೆ ಶ್ರೀರಾಮುಲು ಬೆಂಬಲ ಕೊಟ್ಟರೆ, ಗೊತ್ತಿದ್ದೂ ಮಾಡ್ತಿದ್ದಾನೆಂದು ಅರ್ಥ: ಸಿದ್ದರಾಮಯ್ಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada