ಕಾಂಗ್ರೆಸ್​ನಿಂದ ಹೋದ 14 ಜನರನ್ನೂ ಸೇರಿಸಿಕೊಳ್ಳುತ್ತೇವೆ ಎಂದು ಯಾರೂ ಹೇಳಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸ್ಟೇ ತಂದ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ತಾರೆ. ಏನೋ ಇರಬೇಕು, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಕಾಂಗ್ರೆಸ್​ನಿಂದ ಹೋದ 14 ಜನರನ್ನೂ ಸೇರಿಸಿಕೊಳ್ಳುತ್ತೇವೆ ಎಂದು ಯಾರೂ ಹೇಳಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: ganapathi bhat

Updated on: Jul 03, 2021 | 3:56 PM

ಬೆಂಗಳೂರು: ಕಾಂಗ್ರೆಸ್‌ನಿಂದ ಹೋದ 14 ಜನ ವಾಪಸ್‌ ಆಗುವ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನಾನು ಈ ಬಗ್ಗೆ ಡಿ.ಕೆ. ಶಿವಕುಮಾರ್ ಬಳಿ ಮಾತನಾಡುತ್ತೇನೆ. ನಾನು ಸದನದಲ್ಲೇ ಪ್ರಳಯ ಆದ್ರೂ ಅವರನ್ನ ಸೇರಿಸಿಕೊಳ್ಳಲ್ಲ ಎಂದು ಹೇಳಿದ್ದೆ. 14 ಜನರನ್ನೂ ಸೇರಿಸಿಕೊಳ್ಳುತ್ತೇವೆ ಎಂದು ಯಾರೂ ಹೇಳಿಲ್ಲ. ಯಾರು ಬೇಕಾದರೂ ಬರಬಹುದು ಎಂದಷ್ಟೇ ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸ್ಟೇ ತಂದ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ತಾರೆ. ಏನೋ ಇರಬೇಕು, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಲಸಿಕೆ ವಿಚಾರದಲ್ಲಿ ಈ ಸರ್ಕಾರ ಪದೇಪದೆ ವಿಫಲವಾಗಿದೆ ಎಂದೂ ಸಿದ್ದರಾಮಯ್ಯ ಕುಟುಕಿದ್ದಾರೆ. ಉಚಿತವಾಗಿ ಲಸಿಕೆ ಕೊಡುವುದಾಗಿ ಪ್ರಧಾನಿ ಹೇಳಿದ್ದರು. 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಕೊಡುತ್ತೇವೆ ಎಂದಿದ್ದರು. ಆದ್ರೆ ರಾಜ್ಯದಲ್ಲಿ ಕೊವಿಡ್ ಲಸಿಕೆಯೇ ಸಿಗುತ್ತಿಲ್ಲ. ಲಸಿಕೆ ಸಂಗ್ರಹವಿಲ್ಲ ಎಂದು ಬಿಬಿಎಂಪಿ ಆಯುಕ್ತರೇ ಹೇಳಿದ್ರು. ಸಚಿವ ಸುಧಾಕರ್ ಮಾತ್ರ ನಮ್ಮಲ್ಲಿ ಸಮಸ್ಯೆ ಇಲ್ಲ ಅಂತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಆ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಬೆಲೆ ಏರಿಕೆ ವಿರುದ್ಧ ಸಿದ್ದರಾಮಯ್ಯ ಚಾಟಿ ಸಿದ್ದರಾಮಯ್ಯ ವಿರುದ್ಧ ನಿರ್ಮಲಾ ಆರೋಪ ವಿಚಾರವಾಗಿ ಮಾತನಾಡಿದ್ದಾರೆ. 15ನೇ ಪೇ ಕಮಿಷನ್‌ನಿಂದ 5,495 ಕೋಟಿ ರೂಪಾಯಿ ಬರಬೇಕು. ರಾಜ್ಯಕ್ಕೆ ಬರಬೇಕಾದ ಹಣ ಕೇಂದ್ರ ವಿತ್ತ ಸಚಿವೆ ತಡೆದಿದ್ದಾರೆ. ನಾನು ಆಯೋಗದಿಂದಲೇ ಮಾಹಿತಿ ಪಡೆದಿದ್ದು. ಇದರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಮಾತನಾಡಿಲ್ಲ. ನಿರ್ಮಲಾ ಸೀತಾರಾಮನ್‌ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕಾ? ಎಂದು ಕೇಳಿದ್ದಾರೆ.

ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ ಡೀಸೆಲ್ ಮೇಲಿನ ಸೆಸ್ 3.45 ರೂಪಾಯಿ ಇತ್ತು. ಪೆಟ್ರೋಲ್ ಮೇಲೆ 5.25 ರೂಪಾಯಿ ಸೆಸ್ ಇತ್ತು. ಈಗ ಡೀಸೆಲ್ ಮೇಲಿನ ಸೆಸ್ 31.84 ರೂಗೆ ಏರಿಸಿದ್ದು ಏಕೆ? ಪೆಟ್ರೋಲ್ ಮೇಲೆ 32.92 ಪೈಸೆ ಸೆಸ್ ಹಾಕಿದ್ದಾರೆ. ಇದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಗೊತ್ತಿಲ್ಲವೇ? ಎಂದು ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಎಂಟಿಬಿ ನಾಗರಾಜ್ ಬಗ್ಗೆ ಡಿ.ಕೆ. ಶಿವಕುಮಾರ್ ವ್ಯಂಗ್ಯ ಡಿಕೆಶಿ ಎದೆಯಲ್ಲಿದ್ದಾರೆ ಎಂದು ತೋರಿಸುವವರು ಇದ್ದಾರೆ. ಎಂಟಿಬಿ ನಾಗರಾಜ್‌ಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದು ನಾನೇ. ನನ್ನಿಂದ ಗೆದ್ದ ಅಂತ ಹೇಳಲ್ಲ, ಆದ್ರೆ ಟಿಕೆಟ್ ಕೊಡಿಸಿದ್ದು ನಾನೇ. ಆಮೇಲೆ ಗೆದ್ದರು, ತನ್ನ ಎದೆಯಲ್ಲಿ ಕಾಂಗ್ರೆಸ್ ಇದೆ ಅಂತಿದ್ರು. ಬಳಿಕ ಪಾರ್ಟಿ ಬಿಟ್ಟು ಹೋದ್ರು, ಏನು ಮಾಡಲು ಆಗುತ್ತೆ ಎಂದು ಸಚಿವ ಎಂಟಿಬಿ ನಾಗರಾಜ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ಯಾವನ್ರೀ ಆ ಕೆಇಬಿ ಎಂಜಿನಿಯರ್? ಫೋನ್ ರಿಸಿವ್ ಮಾಡ್ಲಿ ಉಗೀತೀನಿ‘: ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ

ಲಂಚ ಪಡೆಯುವವರಿಗೆ ಶ್ರೀರಾಮುಲು ಬೆಂಬಲ ಕೊಟ್ಟರೆ, ಗೊತ್ತಿದ್ದೂ ಮಾಡ್ತಿದ್ದಾನೆಂದು ಅರ್ಥ: ಸಿದ್ದರಾಮಯ್ಯ