‘ಯಾವನ್ರೀ ಆ ಕೆಇಬಿ ಎಂಜಿನಿಯರ್? ಫೋನ್ ರಿಸಿವ್ ಮಾಡ್ಲಿ ಉಗೀತೀನಿ‘: ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ

15ನೇ ಪೇ ಕಮಿಷನ್‌ನಿಂದ 5495 ಕೋಟಿ ರೂ. ಬರಬೇಕು. ರಾಜ್ಯಕ್ಕೆ ಬರಬೇಕಾದ ಹಣ ಕೇಂದ್ರ ವಿತ್ತ ಸಚಿವೆ ತಡೆದಿದ್ದಾರೆ. ನಾನು ಆಯೋಗದಿಂದಲೇ ಮಾಹಿತಿ ಪಡೆದಿದ್ದು, ಇದರ ಬಗ್ಗೆ ಸಿಎಂ ಯಡಿಯೂರಪ್ಪ ಕೂಡ ಮಾತನಾಡಿಲ್ಲ. ನಿರ್ಮಲಾ ಸೀತಾರಾಮನ್‌ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಯಾವನ್ರೀ ಆ ಕೆಇಬಿ ಎಂಜಿನಿಯರ್? ಫೋನ್ ರಿಸಿವ್ ಮಾಡ್ಲಿ ಉಗೀತೀನಿ‘: ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ
ವಿಪಕ್ಷ ನಾಯಕ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
TV9kannada Web Team

| Edited By: guruganesh bhat

Jul 03, 2021 | 3:06 PM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ರಾಜಾಜಿನಗರದಲ್ಲಿ ಫುಡ್ ಕಿಟ್ ವಿತರಣೆ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪದೇ ಪದೇ ವಿದ್ಯುತ್ ಸ್ಥಗಿತವಾಗುತ್ತಿತ್ತು. ಇದರಿಂದ ಅಸಮಾಧಾನಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಕ್ರೋಶಗೊಂಡರು. ‘ಯಾವನ್ರೀ ಆ ಕೆಇಬಿ ಎಂಜಿನಿಯರ್? ಫೋನ್ ರಿಸಿವ್ ಮಾಡ್ಲಿ..’ ಎಂದು ಜೋರಾಗಿಯೇ ಅವರು ಹರಿಹಾಯ್ದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧವೂ ಟೀಕಿಸಿದರು. ಸಚಿವ ಬಿ.ಶ್ರೀರಾಮುಲು ಆಪ್ತ ಸಹಾಯಕರನ್ನು ಇವರು ಹಿಡಿದುಕೊಟ್ಟಿದ್ದಾರಾ? ಇವರೇ ಎಲ್ಲದರಲ್ಲೂ ಶಾಮೀಲಾಗಿ ಹಣ ಹೊಡೆಯುತ್ತಿದ್ದಾರೆ. ಮಂತ್ರಿಗಳ ಪಿಎಗಳು, ಸಿಎಂ ಮಗ, ಎಲ್ಲರೂ ಶಾಮೀಲಾಗಿದ್ದಾರೆ. ಇಂತಹ ಸರ್ಕಾರ ನಿಮಗೆ ಬೇಕೇ? ಎಂದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಲಸಿಕೆ ವಿಚಾರದಲ್ಲಿ ಈ ಸರ್ಕಾರ ಪದೇಪದೆ ವಿಫಲವಾಗಿದೆ. ಉಚಿತವಾಗಿ ಲಸಿಕೆ ಕೊಡುವುದಾಗಿ ಪ್ರಧಾನಿ ಹೇಳಿದ್ದರು. 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಕೊಡುತ್ತೇವೆ ಅಂದಿದ್ದರು. ಆದರೆ ರಾಜ್ಯದಲ್ಲಿ ಕೊವಿಡ್ ಲಸಿಕೆಯೇ ಸಿಗುತ್ತಿಲ್ಲ. ಲಸಿಕೆ ಸಂಗ್ರಹವಿಲ್ಲ ಎಂದು ಬಿಬಿಎಂಪಿ ಆಯುಕ್ತರೇ ಹೇಳಿದ್ದರು. ಸಚಿವ ಸುಧಾಕರ್ ಮಾತ್ರ ನಮ್ಮಲ್ಲಿ ಸಮಸ್ಯೆ ಇಲ್ಲ ಅಂತಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಆ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

15ನೇ ಪೇ ಕಮಿಷನ್‌ನಿಂದ 5495 ಕೋಟಿ ರೂ. ಬರಬೇಕು. ರಾಜ್ಯಕ್ಕೆ ಬರಬೇಕಾದ ಹಣ ಕೇಂದ್ರ ವಿತ್ತ ಸಚಿವೆ ತಡೆದಿದ್ದಾರೆ. ನಾನು ಆಯೋಗದಿಂದಲೇ ಮಾಹಿತಿ ಪಡೆದಿದ್ದು, ಇದರ ಬಗ್ಗೆ ಸಿಎಂ ಯಡಿಯೂರಪ್ಪ ಕೂಡ ಮಾತನಾಡಿಲ್ಲ. ನಿರ್ಮಲಾ ಸೀತಾರಾಮನ್‌ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕಾ? ಎಂದು ಪ್ರಶ್ನಿಸಿದರು.

ರಾಜಾಜಿನಗರದಲ್ಲಿ ಕಾಂಗ್ರೆಸ್‌ನಿಂದ ಫುಡ್ ಕಿಟ್ ವಿತರಣೆ ವೇಳೆ ದೈಹಿಕ ಅಂತರ ಮಾಯವಾಗಿತ್ತು. ದೈಹಿಕ ಅಂತರ ಮರೆತು ಕಿಟ್‌ಗಾಗಿ ಜನರು ಮುಗಿಬಿದ್ದಿದ್ದರು.

ಇದನ್ನೂ ಓದಿ: 

ಇದು ಕೊವಿಡ್​ 19 ಸಾಂಕ್ರಾಮಿಕದ ಅತ್ಯಂತ ಅಪಾಯಕಾರಿ ಹಂತ; ಡೆಲ್ಟಾ ವೈರಾಣು ಬಗ್ಗೆ ಡಬ್ಲ್ಯೂಎಚ್​ಒ ತೀವ್ರ ಆತಂಕ

ಟಿವಿ9 ವಿಶೇಷ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಂದರ್ಶನ: ‘ಎಲ್ಲರೂ ಕಾಂಗ್ರೆಸ್ ಮುಖ್ಯಮಂತ್ರಿಯ ಮಾತಾಡುವಂತೆ ಪಕ್ಷವನ್ನು ಬೆಳೆಸಿದ್ದೇವೆ‘

(Opposition Leader Siddaramaiah questions Who is that KEB engineer in food kit distribution programme)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada