ಟಿವಿ9 ವಿಶೇಷ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಂದರ್ಶನ: ‘ಎಲ್ಲರೂ ಕಾಂಗ್ರೆಸ್ ಮುಖ್ಯಮಂತ್ರಿಯ ಮಾತಾಡುವಂತೆ ಪಕ್ಷವನ್ನು ಬೆಳೆಸಿದ್ದೇವೆ‘

Karnataka Politics: 2023ರಲ್ಲಿ ಕಾಂಗ್ರೆಸ್ ನೂರಕ್ಕೆ ಇನ್ನೂರು ಪ್ರತಿಶತ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಸಮ್ಮಿಶ್ರ ಸರ್ಕಾರ ಬರುವ ಸಂದರ್ಭವೇ ಸೃಷ್ಟಿಯಾಗುವುದಿಲ್ಲ. ನಾನು ಮುಖ್ಯಮಂತ್ರಿ ಆಗುವ ಚರ್ಚೆಯ ಅಗತ್ಯವೇ ಈಗ ಇಲ್ಲ..

ಟಿವಿ9 ವಿಶೇಷ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಂದರ್ಶನ: ‘ಎಲ್ಲರೂ ಕಾಂಗ್ರೆಸ್ ಮುಖ್ಯಮಂತ್ರಿಯ ಮಾತಾಡುವಂತೆ ಪಕ್ಷವನ್ನು ಬೆಳೆಸಿದ್ದೇವೆ‘
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)
Follow us
Guruganesh Bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 02, 2021 | 11:19 PM

ಅಖಿಲ ಭಾರತ ಮಟ್ಟದ ಪಕ್ಷ ಕಾಂಗ್ರೆಸ್​ನ ಕರ್ನಾಟಕ ರಾಜ್ಯಮಟ್ಟದ ಘಟಕ ಕೆಪಿಸಿಸಿ. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ಧಾರಿ ಸ್ವೀಕರಿಸಿ ಒಂದು ವರ್ಷ ತುಂಬಿದೆ. ಗತಕಾಲದಲ್ಲಿ ವೈಭವೋಪೇತ  ಪಕ್ಷವಾಗಿ ಮೆರೆದಿದ್ದ ಕಾಂಗ್ರೆಸ್ ಸದ್ಯ ಅಷ್ಟು ಪ್ರಖರವಾಗಿಲ್ಲ. ಇದ್ದ ನಾಯಕರಲ್ಲೇ ಅಧಿಕಾರಕ್ಕಾಗಿ ಕಲಹ, ತಿಕ್ಕಾಟ ಮತ್ತು ಪರಸ್ಪರ ಪೈಪೋಟಿ. ಹೀಗಾಗಿ ಕಾಂಗ್ರೆಸ್​ನಲ್ಲಿ ಯಾವುದೇ ಹುದ್ದೆ ಅಲಂಕರಿಸುವುದು ಸದ್ಯ ಹುದ್ದೆಯಾಗಷ್ಟೇ ಇರುವುದಿಲ್ಲ, ಅದು ಜವಾಬ್ದಾರಿಯಾಗಿರುತ್ತದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಒಂದೇ ಹಡಗಲ್ಲಿ ದಡ ಮುಟ್ಟಿಸಬೇಕು. ಈ ಪಯಣದಲ್ಲಿ ವಿವಿಧ ಕಾರಣಗಳಿಗೆ ನಾಯಕರು, ಮತದಾರರು ಹಡಗಿನಿಂದ ಸಮುದ್ರಕ್ಕೆ ಜಿಗಿಯುವ ಭೀತಿಯೂ ತಪ್ಪಿದ್ದಲ್ಲ. ಇಂತಹ ಅನೇಕ ಕಾರಣಗಳಿಂದ ಇತರ ಪಕ್ಷಗಳಿಗಿಂತಲೂ ಕಾಂಗ್ರೆಸ್​ನ ಪದಾಧಿಕಾರಿಗಳ ಜವಾಬ್ದಾರಿ ಸ್ವಲ್ಪ ಹೆಚ್ಚೇ ಇದೆ. ಇಂತಹ ಹೊತ್ತಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಟಿವಿ9 ಕನ್ನಡದ ಹಿರಿಯ ನಿರೂಪಕ ಹರಿಪ್ರಸಾದ್ ಅವರು ಸಂದರ್ಶಿಸಿದ್ದಾರೆ. ಅದರ ಪೂರ್ಣ ಬರಹ ರೂಪ ಇಲ್ಲಿದೆ.

ಹರಿಪ್ರಸಾದ್: ಕೆಪಿಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದೀರಿ. ಈ ಜವಾಬ್ದಾರಿಯ ಅವಧಿ 3 ವರ್ಷದ್ದು. ಮುಂದಿನ 2 ವರ್ಷಗಳ ಅವಧಿಗೆ ಕಳೆದ 1 ವರ್ಷದಲ್ಲಿ ಹೇಗೆ ಅಡಿಪಾಯ ಹಾಕಿದ್ದೀರಿ?

ಡಿ.ಕೆ.ಶಿವಕುಮಾರ್: ಕಾಂಗ್ರೆಸ್ ಎಂದಿಗೂ ಸಮಾಜದ ಅಡಿಪಾಯವನ್ನು ಭದ್ರಗೊಳಿಸುವತ್ತ ಯೋಚಿಸುತ್ತದೆ. ಎಲ್ಲ ವರ್ಗಗಳ ಅಭಿವೃದ್ಧಿ ಅದು ಯೋಜನೆ ರೂಪಿಸುತ್ತದೆ. ಇದೇ ಹಿನ್ನೆಲೆಯಲ್ಲಿ ನಾನು ಕಳೆದೊಂದು ವರ್ಷದಿಂದ ಕೆಲಸ ನಿರ್ವಹಿಸಿದ್ದೇನೆ. ಕಳೆದ ಒಂದು ವರ್ಷದಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ಮಾಡಿದ ಕೆಲಸದಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂದು ಜನರಿಗೆ ಅನಿಸಿದೆ.

ಹರಿಪ್ರಸಾದ್: ಕಾಂಗ್ರೆಸ್​ನನ್ನು ಮಾಸ್ ಪಕ್ಷವಾಗಿ ಹಿಂದೆ ವ್ಯಾಖ್ಯಾನಿಸಲಾಗುತ್ತಿತ್ತು. ಈಗ ಮತ್ತೆ ಅದೇ ಪರಿಸ್ಥಿತಿಯನ್ನು ನಿರ್ಮಿಸಲು ನಿಮ್ಮ ಯೋಜನೆ ಏನು?

ಡಿ.ಕೆ.ಶಿವಕುಮಾರ್: ಈಗ ಪಂಚಾಯತ್ ಮಟ್ಟದಲ್ಲಿ ನಾವು ಹೆಚ್ಚು ಕೇಂದ್ರೀಕರಿಸುತ್ತಿದ್ದೇವೆ. 42 ಬವರ್ಷದ ಒಳಗಿನ ಮತದಾರರ ಪ್ರಮಾಣ ಶೇಕಡಾ 62ರಷ್ಟಿದೆ. ಪ್ರತಿ ಪಂಚಾಯತ್ ಮಟ್ಟದಲ್ಲೂ ಯುವಕರು, ಡಿಜಿಟಲ್ ಬಳಕೆ ತಿಳಿದವರು ಪಕ್ಷಕ್ಕೆ ಬರಬೇಕು. ಇಂದಿನ ಜನರೇಶನ್​ನಲ್ಲಿ ಶಿಪ್ಟ್​ನ್ನು ಗಮನಿಸಿ ನಾವು ಪಕ್ಷದ ಸಂಘಟನೆಯತ್ತ ಗಮನಹರಿಸಿದ್ದೇವೆ.

ಹರಿಪ್ರಸಾದ್: ಸದ್ಯ ಬಿಜೆಪಿಯನ್ನು ನಾಯಕತ್ವ ಬದಲಾವಣೆಯ ಬಗ್ಗೆ ಗೊಂದಲ ಎದ್ದಿದೆ. ಇದು ಕಾಂಗ್ರೆಸ್​ಗೆ ಹೇಗೆ ಲಾಭ ತಂದುಕೊಡಲಿದೆ? ಡಿ.ಕೆ.ಶಿವಕುಮಾರ್: ಬಿಜೆಪಿಯಲ್ಲಿ ಗೊಂದಲ, ಘರ್ಷಣೆಗಳು ಕಾಂಗ್ರೆಸ್​ಗೆ ಮುಖ್ಯ ಅಲ್ಲ. ಅವರಿಗೆ ಅಧಿಕಾರ ಸಿಕ್ಕರೂ ಅವರು ಜನರ ಕಷ್ಟ ಸುಖಕ್ಕೆ ದನಿಯಾಗಲಿಲ್ಲ. ಮುಖ್ಯಮಂತ್ರಿಯಿಂದ ಹಿಡಿದು ಬಿಜೆಪಿಯ ಎಲ್ಲ ನಾಯಕರೂ ಅಧಿಕಾರದ ಸುತ್ತವೇ ಸುಳಿಯಲಾರಂಭಿಸಿದರೇ ಹೊರತು, ಜನರತ್ತ ತೆರಳಲಿಲ್ಲ. ಈ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸರ್ಕಾರದ ಪ್ರತಿನಿಧಿಗಳ ಜತೆ ಅಧಿಕಾರಿಗಳೂ ಹಣದ ಹಿಂದೆ ಬಿದ್ದಿದ್ದರು.

ಹರಿಪ್ರಸಾದ್: ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಅವರ ಹಸ್ತಕ್ಷೇಪದ ಬಗ್ಗೆ ಏನಾದರೂ ಹೇಳ್ತೀರಾ? ಡಿ.ಕೆ.ಶಿವಕುಮಾರ್: ನೋ ಕಾಮೆಂಟ್ಸ್. ನಮಗೆ ನಮ್ಮ ಪಕ್ಷವೇ ಮುಖ್ಯ.

ಹರಿಪ್ರಸಾದ್: ಸಿಎಂ ಯಡಿಯೂರಪ್ಪನವರು ನಮ್ಮ ಟಾರ್ಗೆಟ್ 130 ಅಂತಿದ್ದಾರೆ. ಹಾಗಾದರೆ ನಿಮ್ಮ ಟಾರ್ಗೆಟ್ ಎಷ್ಟು? ಡಿ.ಕೆ.ಶಿವಕುಮಾರ್: ನಮ್ಮದು 224. ಎಲ್ಲ ಕ್ಷೇತ್ರಗಳನ್ನೂ ನಾವು ಮುಖ್ಯವಾಗಿ ಪರಿಗಣಿಸುತ್ತೇವೆ. ಯಾವ ಕ್ಷೇತ್ರವನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ.

ಹರಿಪ್ರಸಾದ್: ಜಮೀರ್ ಅಹ್ಮದ್ ಅವರ ಹೇಳಿಕೆಗಳ ಬಗ್ಗೆ ಏನಂತೀರಾ? ಡಿ.ಕೆ.ಶಿವಕುಮಾರ್:  ಅವರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ವೈಯಕ್ತಿಕ ನಾಯಕರಿಗಿಂತ ಪಕ್ಷ ಮುಖ್ಯ. ಸದ್ಯ ಕೊವಿಡ್​ನಲ್ಲಿ ಜನರ ಹಿತ ರಕ್ಷಿಸಬೇಕು. 2023ರವರೆಗೆ ಅದಕ್ಕೆ ಸಮಯವಿದೆ. ನಾನು ಪಕ್ಷದ ಅಧ್ಯಕ್ಷನಾಗಿದ್ದರೂ ಮೊದಲು ಕಾರ್ಯಕರ್ತ. ನಾನು ಜಮೀರ್ ಅಹ್ಮದ್ ಆಗಲಿ, ನನ್ನದೇ ಸೋದರ ಡಿ.ಕೆ.ಸುರೇಶ್ ಹೇಳಿಕೆಗೂ ಮಹತ್ವ ನೀಡದೇ ಕಾಂಗ್ರೆಸ್​ನ್ನು ಬೆಳೆಸುವದತ್ತ ಮಾತ್ರವೇ ಗಮನಹರಿಸುತ್ತೇನೆ. ಎಲ್ಲರ ಬಾಯಲ್ಲೂ ಕಾಂಗ್ರೆಸ್​ ಮುಖ್ಯಮಂತ್ರಿ ಎಂಬ ಮಾತು ಬರುತ್ತಿರುವುದು ಸಾಕು, ಹಾಗೆ ನಾವು ಆ ಪಕ್ಷವನ್ನು ಬೆಳೆಸಿದ್ದೇವೆ.

ಹರಿಪ್ರಸಾದ್: ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಮಾಡುವುದು ಕಾಂಗ್ರೆಸ್​ನ ಸಂಪ್ರದಾಯ. ಹಾಗಾದರೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ನೀವೇನಾ? ಡಿ.ಕೆ.ಶಿವಕುಮಾರ್: ನೋಡಿ..ನನ್ನಿಂದೊಂದೇ ಅಧಿಕಾರಕ್ಕೆ ಬರಲಾಗದು, ಅಥವಾ ಸಿದ್ದರಾಮಯ್ಯ..ಮಲ್ಲಿಕಾರ್ಜುನ ಖರ್ಗೆ..ಹೀಗೆ ಯಾವುದೇ ಒಬ್ಬ ನಾಯಕನಿಂದಲೂ ಅಧಿಕಾರಕ್ಕೆ ಬರಲಾಗದು. ಎಲ್ಲರೂ ಜತೆಗೂಡಿದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ. ಅದೊಂದೇ ನಮ್ಮ ಗುರಿ ಈಗ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಒಂದು ವರ್ಷವಾದರೂ ಈಗಲೇ ಒಂದು ವಾಹಿನಿಗೆ ಸಮದರ್ಶನ ನೀಡುತ್ತಿದ್ದೇನೆ. ಇದರಲ್ಲೇ ಗಮನಿಸಿ, ನಾನು ವೈಯಕ್ತಿಕವಾಗಿ ಯಾವುದೇ ರೇಸ್​​ನಲ್ಲಿ ಇಲ್ಲ. ಇರುವುದು ಒಂದೇ, ಎಲ್ಲರನ್ನೂ ಜತೆಗೂಡಿಸಿಕೊಂಡು ಹೋಗುವುದು ಒಂದೇ ನನ್ನ ಉದ್ದೇಶ.

ಹರಿಪ್ರಸಾದ್: ನಿಮ್ಮನ್ನು ನಿಮ್ಮದೇ ಕ್ಷೇತ್ರ ಕನಕಪುರದಲ್ಲಿ ಸೋಲಿಸುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಶಪಥ ಮಾಡಿದ್ದಾರೆ.. ಡಿ.ಕೆ.ಶಿವಕುಮಾರ್:  ನಾನು ಒಂದು ಕಾಲದಲ್ಲಿ ರಮೇಶ್ ಜಾರಕಿಹೊಳಿ ಪರವಾಗಿ ಬೇಕಾದಷ್ಟು ಕೆಲಸ ಮಾಡಿದ್ದೆ. ಈಗ ಅವರಿಗೆ ಶುಭಕೋರುತ್ತೇನೆ. ಅವರಿಗೊಂದೇ ಅಲ್ಲ..ಅವರ ಪಕ್ಷಕ್ಕೂ ಸಹ. ಆಲ್ ದಿ ಬೆಸ್ಟ್!

ಹರಿಪ್ರಸಾದ್: ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಜಿಗಿದವರು ಮತ್ತೆ ಕಾಂಗ್ರೆಸ್​ಗೆ ಮರಳಲು ಅವಕಾಶ ಇದೆಯಾ? 2008ರಲ್ಲಿ ಸಿದ್ದರಾಮಯ್ಯನವರು ಪಕ್ಷ ಬಿಟ್ಟವರನ್ನು ಮತ್ತೆ ಸ್ವೀಕರಿಸಲ್ಲ ಎಂದಿದ್ದರು. ಈ ನಿಲುವಿನಲ್ಲೂ ಬದಲಾವಣೆ ಆಗುತ್ತಾ? ಡಿ.ಕೆ.ಶಿವಕುಮಾರ್:  ಮೊದಲು ಅಂಥವರು ಅರ್ಜಿ ಸಲ್ಲಿಸಲು. ಅದಕ್ಕೇ ಒಂದು ಪ್ರತ್ಯೇಕ ಸಮೀತಿಯಿದೆ. ಅವರು ನಿರ್ಧಾರ ಕೈಗೊಳ್ಳುತ್ತಾರೆ. ಪಕ್ಷದ ಅಧ್ಯಕ್ಷನಾಗಿ ಯಾರನ್ನೂ ಸ್ವೀಕರಿಸಲ್ಲ ಎಂದು ನಾನು ಹೇಳುವುದಿಲ್ಲ. 2008ರಲ್ಲಿ ಏನಾಗಿತ್ತು..ಈಗೇನಾಗಿದೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಹೀಗಾಗಿ ಏನನ್ನೂ ಹೇಳಲಿಕ್ಕೆ ಆಗದು.

ಹರಿಪ್ರಸಾದ್: 2023ರಲ್ಲಿ ಕಾಂಗ್ರೆಸ್​ನ ಗುರಿ ಏನು? ಒಂದಾನುವೇಳೆ ಸಮ್ಮಿಶ್ರ ಸರ್ಕಾರ ಬಂದರೆ.. ಡಿ.ಕೆ.ಶಿವಕುಮಾರ್:  ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವುದು. ಕೊವಿಡ್​ನಿಂದ ಮೃತಪಟ್ಟವರ ಸಂಖ್ಯೆಯನ್ನು ಕಡಿಮೆ ತೋರಿಸಿದ್ದಾರೆ. ಇಂತಹ ದುರಂತಗಳನ್ನು ವಿರೋಧಿಸಿ ಸತ್ಯವನ್ನು ಬಯಲಿಗೆಳೆಯಬೇಕು. 2023ರಲ್ಲಿ ಕಾಂಗ್ರೆಸ್ ನೂರಕ್ಕೆ ಇನ್ನೂರು ಪ್ರತಿಶತ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಸಮ್ಮಿಶ್ರ ಸರ್ಕಾರ ಬರುವ ಸಂದರ್ಭವೇ ಸೃಷ್ಟಿಯಾಗುವುದಿಲ್ಲ. ನಾನು ಮುಖ್ಯಮಂತ್ರಿ ಆಗುವ ಚರ್ಚೆಯ ಅಗತ್ಯವೇ ಈಗ ಇಲ್ಲ..

ಇದನ್ನೂ ಓದಿ: 

ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!

ಸುದ್ದಿ ವಿಶ್ಲೇಷಣೆ | ಕೊವಿಡ್ ಸುನಾಮಿ ಮಧ್ಯೆ ನಾಯಕತ್ವ ಬದಲಾವಣೆ ಚರ್ಚೆ ಹುಟ್ಟಿದ್ದೆಲ್ಲಿ? ರಾಜ್ಯ ಬಿಜೆಪಿ ಮುಂದಿನ ದಾರಿ ಯಾವುದು?

(KPCC President DK Shivakumar special Interview by TV9 Kannada Digital about Karnataka Politics and leadership)

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ