ಪುಲ್ವಾಮಾನಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕ ಯೋಧ ಕಾಶೀರಾಯ ಹುತಾತ್ಮ
35 ವರ್ಷದವರಾಗಿದ್ದ ಹುತಾತ್ಮ ಯೋಧ ಕಾಶೀರಾಯ ಅವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಸೇನಾಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಕಾಶೀರಾಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನಲ್ಲಿ (ಎಮ್ಈಜಿ) ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು
ಭಾರತದ ಗಡಿಯನ್ನು ಕಾಯುತ್ತಾ ಉಗ್ರರು ನಮ್ಮ ಗಡಿಯೊಳಗೆ ನುಗ್ಗದಂತೆ ಮೈಯೆಲ್ಲ ಕಣ್ಣಾಗಿಸಿಕೊಂಡು ಹಗಲು-ರಾತ್ರಿ ತನ್ನ ಕಾಯಕದಲ್ಲಿ ನಿರತನಾಗಿದ್ದ ದೇಶದ ಮತ್ತೊಬ್ಬ ಯೋಧ ಮತ್ತು ಕನ್ನಡ ನಾಡಿನ ವೀರಪುತ್ರ ಕಾಶೀರಾಯ ಬೊಮ್ಮನಹಳ್ಳಿ ಅವರು ಶುಕ್ರವಾರ ಪುಲ್ವಾಮಾದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ವೀರಮಣವನ್ನಪ್ಪಿದ್ದಾರೆ. 35 ವರ್ಷದವರಾಗಿದ್ದ ಹುತಾತ್ಮ ಯೋಧ ಕಾಶೀರಾಯ ಅವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಸೇನಾಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಕಾಶೀರಾಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನಲ್ಲಿ (ಎಮ್ಈಜಿ) ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು.
ಕಾಶೀರಾಯ ಅವರು; ತಂದೆ, ತಾಯಿ, ಪತ್ನಿ, ಒಂದು ಗಂಡು ಮಗು, ಮತ್ತೊಂದು ಹೆಣ್ಣು ಮಗುವಿನ ಜೊತೆಗೆ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ವಿಜಯಪುರದಿಂದ ಟಿವಿ9 ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ವೀರಯೋಧ ಕಾಶೀರಾಯರ ಪಾರ್ಥೀವ ಶರೀರ ಶನಿವಾರ ಮಧ್ಯಾಹ್ನ ಅವರ ಸ್ವಗ್ರಾಮ ಉಕ್ಕಲಿ ತಲುಪಲಿದೆ. ಹುತಾತ್ಮರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು.
ಭಾರತೀಯ ಸೇನೆ, ಜಮ್ಮು & ಕಾಶ್ಮೀರ ಪೊಲೀಸ, ಸಿಆರ್ಪಿಎಫ್ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ಬಗ್ಗೆ ಕಾಶ್ಮೀರದ ಐಜಿಪಿ ವಿಜಯಕುಮಾರ್ ಅವರು ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತಾಡಿ, ‘ ನಿನ್ನೆ ಸಾಯಂಕಾಲ ನಮಗೆ ಲಭ್ಯವಾದ ಮಾಹಿತಿಯ ಪ್ರಕಾರ ಐವರು ಭಯೋತ್ಪಾದಕರು, ಹಂಜಿನ್ ಎಂಬ ಗ್ರಾಮದಲ್ಲಿ ಅಡಗಿದ್ದರು. ಆ ಪ್ರದೇಶವನ್ನು ಸೇನೆ, ಪೊಲೀಸ್ ಮತ್ತು ಸಿಆರ್ಪಿಎಫ್ ಜವಾನರು ಸುತ್ತುವರಿದರು. ಗುಂಡಿನ ಚಕಮಕಿ ಅರಂಭವಾದಾಗ ಸೇನೆಯ ಒಬ್ಬ ಯೋಧ ತೀವ್ರವಾಗಿ ಗಾಯಗೊಂಡು ಸ್ವಲ್ಪ ಹೊತ್ತಿನ ನಂತರ ಹುತಾತ್ಮರಾದರು,’ ಎಂದು ಹೇಳಿದ್ದಾರೆ.
Based on the input received last evening about 5 terrorists who were hiding in the Hanjin village, Army, Police & CRPF cordoned off the area. An army personnel was critically injured in the initial firing & succumbed to the injuries: IGP Kashmir Vijay Kumar pic.twitter.com/5tXaRY8Dng
— ANI (@ANI) July 2, 2021
ಮುಂದುವರಿದು ಹೇಳಿರುವ ಅವರು, ಆಮಿರ್ ಹೆಸರಿನ ಉಗ್ರರ ಸಹಚರನೊಬ್ಬನಿಗೆ ನಾವು ಶರಣಾಗುವಂತೆ ಮನವಿ ಮಾಡಿದೆವು. ಅದರೆ ಅವನಾಗಲೀ ಉಳಿದ ಉಗ್ರರಾಗಲೀ ನಮ್ಮ ಮನವಿಯನ್ನು ಕೇಳಲಿಲ್ಲ. ರೆಹಾನ್ ಹೆಸರಿನ ಪಾಕಿಸ್ತಾನಿ ಭಯೋತ್ಪಾದಕ ಸೇರದಂತೆ ಎಲ್ಲ 5 ಎಲ್ಈಟಿ ಉಗ್ರರನ್ನು ಹೊಡೆದುರಳಿಲಾಯಿತು. ಅವರ ಬಳಿಯಿದ್ದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಕೆಲ ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.’ ಎಂದು ವಿಜಯ ಕುಮಾರ್ ಹೇಳಿದ್ದಾರೆ.
Parents of Amir, a terror associate were called to appeal to surrender but failed. All 5 LeT terrorists including a Pakistani terrorist Rehan were killed. Arms, ammunition & some documents recovered. They were planning an attack at Srinagar-Pulwama National Highway: IGP Kashmir
— ANI (@ANI) July 2, 2021
ಸುಮಾರು ಎರಡೂವರೆ ವರ್ಷಗಳ ಹಿಂದೆ ಇದೇ ಪುಲ್ವಾಮ ಪ್ರದೇಶದಲ್ಲಿ ಭಯೋತ್ಪಾಕರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಭಾರತದ 40 ಯೋಧರು ಹುತಾತ್ಮರಾಗಿದ್ದರು. ಆ ದಾಳಿ ಫೆಬ್ರುವರಿ 14, 2019 ರಂದು ನಡೆದಿತ್ತು. ಉಗ್ರರ ದಾಳಿಗೆ ಪ್ರತಿಕಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆದೇಶದ ಮೇರೆಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತದ ವಾಯುಸೇನೆ ಗಡಿಯಾಚೆಯಿದ್ದ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿ ಹಲವಾರು ಉಗ್ರರನ್ನು ಕೊಂದು ಹಾಕಿತ್ತು.
ಈಗ ಅದೇ ಪುಲ್ವಾಮ ಜಿಲ್ಲೆಯಲ್ಲಿ ವೀರ ಕನ್ನಡಿಗ ಕಾಶೀರಾಯ ಬೊಮ್ಮನಹಳ್ಳಿ ದೇಶಕ್ಕಾಗಿ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ. ಈ ಕೆಚ್ಚೆದೆಯ ವೀರ ಯೋಧನಿಗೆ ಕನ್ನಡಿಗರ ಸಲಾಂ.
ಜೈ ಕಾಶೀರಾಯ, ಜೈ ಹಿಂದ್, ಜೈ ಕರ್ನಾಟಕ.
ವರದಿ: ಅಶೋಕ ಯಡಹಳ್ಳಿ, ವಿಜಯಪುರ
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್ಕೌಂಟರ್: ಲಷ್ಕರ್ ಕಮಾಂಡರ್ ಮುದಾಸೀರ್ ಪಂಡಿತ್ ಸೇರಿ ಮೂವರು ಉಗ್ರರು ಬಲಿ
Published On - 12:47 am, Sat, 3 July 21