ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಸೋದರನಿಂದ ಶರಣಾ ನಾಯ್ಕ್ ಕುಟುಂಬದವರ ಮೇಲೆ ಮತ್ತೆ ಹಲ್ಲೆ ಆರೋಪ

ನಾಲ್ಕು ದಿನದ ಹಿಂದೆ ಶರಣಾ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದರಿಂದ ಶಿವಾಜಿ ಮೇಲೆ ಎಫ್​ಐಆರ್ ದಾಖಲಾಗಿತ್ತು. ನಿನ್ನೆ ಪೊಲೀಸ್​ ಠಾಣೆಯಲ್ಲಿ ಬೇಲ್ ತೆಗೆದುಕೊಂಡಿರುವ ಶಿವಾಜಿ ನಾಯಕ್​ ಈಗ ಕೇಸ್ ನೀಡಿದಕ್ಕೆ ಮತ್ತೆ ಶರಣಾ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಸೋದರನಿಂದ ಶರಣಾ ನಾಯ್ಕ್ ಕುಟುಂಬದವರ ಮೇಲೆ ಮತ್ತೆ ಹಲ್ಲೆ ಆರೋಪ
ಅರಸೀಕೆರೆ ಪೊಲೀಸ್ ಠಾಣೆ ಮುಂದೆ ಶರಣಾ ನಾಯ್ಕ್ ಕುಟುಂಬಸ್ಥರು ಕುಳಿತಿರುವುದು
Follow us
TV9 Web
| Updated By: preethi shettigar

Updated on: Jul 03, 2021 | 3:49 PM

ದಾವಣಗೆರೆ/ವಿಜಯನಗರ: ಕಾಂಗ್ರೆಸ್ ಶಾಸಕ ಪಿ. ಟಿ ಪರಮೇಶ್ವರ್ ನಾಯ್ಕ್ ಸಹೋದರ ಬಿಜೆಪಿ ಮುಖಂಡ ಪಿ. ಟಿ ಶಿವಾಜಿ ನಾಯ್ಕ್ ಅವರ ವಿರುದ್ಧ ಮತ್ತೆ ಗೂಂಡಾಗಿರಿ ಆರೋಪ ಕೇಳಿಬಂದಿದೆ. ನನ್ನ ವಿರುದ್ಧ ಕೇಸ್ ಕೊಡುತ್ತೀಯಾ ಎಂದು ಶರಣಾ ನಾಯ್ಕ್ ಕುಟುಂಬದವರ ಮೇಲೆ ಮತ್ತೆ ಪಿ. ಟಿ ಶಿವಾಜಿ ನಾಯ್ಕ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿರುವ ಶರಣಾ ನಾಯ್ಕ್ ಮನೆಗೆ ನುಗ್ಗಿ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದು, ಶರಣಾ ನಾಯ್ಕ್ ಹಾಗೂ ಅವರ ಮಗ ಜಗದೀಶ್ ತೀವ್ರವಾಗಿ ಗಾಯಕ್ಕೊಳಗಾಗಿದ್ದಾರೆ.

ನಾಲ್ಕು ದಿನದ ಹಿಂದೆ ಶರಣಾ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದರಿಂದ ಶಿವಾಜಿ ಮೇಲೆ ಎಫ್​ಐಆರ್ ದಾಖಲಾಗಿತ್ತು. ನಿನ್ನೆ ಪೊಲೀಸ್​ ಠಾಣೆಯಲ್ಲಿ ಬೇಲ್ ತೆಗೆದುಕೊಂಡಿರುವ ಶಿವಾಜಿ ನಾಯಕ್​ ಈಗ ಕೇಸ್ ನೀಡಿದಕ್ಕೆ ಮತ್ತೆ ಶರಣಾ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ನ್ಯಾಯಕ್ಕಾಗಿ ಅರಸೀಕೆರೆ ಪೊಲೀಸ್ ಠಾಣೆ ಮುಂದೆ ಶರಣಾ ನಾಯ್ಕ್ ಕುಟುಂಬಸ್ಥರು ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ನಾಲ್ಕು ದಿನದ ಹಿಂದೆ ಕ್ಷುಲ್ಲಕ ಕಾರಣಕ್ಕೆ ಕಬ್ಬಿಣದ ಹಾರೆಯಿಂದ ಹಲ್ಲೆ ಮಾಡಿರುವ ಪಿ. ಟಿ. ಶಿವಾಜಿ: ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ.ಶಿವಾಜಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಲಕ್ಷ್ಮೀಪುರದಲ್ಲಿ ಹಾರೆಯಿಂದ ಶರಣ ನಾಯ್ಕ್ ಎಂಬುವವರ ಮೇಲೆ ಹಲ್ಲೆ ನಡೆದಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದ ನಿವಾಸಿ ಹಲ್ಲೆಗೊಳಗಾದ ವ್ಯಕ್ತಿ. ಗಾಯಾಳು ಶರಣ ನಾಯ್ಕ್ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ತಾಂಡಾದಲ್ಲಿ ಘಟನೆ ನಡೆದಿದ್ದು, ಮನೆ ಜಾಗದ ಸಲುವಾಗಿ ಶರಣ ನಾಯ್ಕ್​ ಅವರ ಮೇಲೆ ಹಲ್ಲೆ ನಡೆದಿದೆ. ಘಟನೆ ವೀಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆಗಿತ್ತು. ಆರಂಭದಲ್ಲಿ ದೈಹಿಕವಾಗಿ ಹಲ್ಲೆ ನಡೆಸಿ, ವ್ಯಕ್ತಿಯನ್ನು ಸುಮ್ಮನಾಗಿಸಲು ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ.ಶಿವಾಜಿ ಯತ್ನಿಸುತ್ತಾರೆ. ಆ ವೇಳೆ ವೃದ್ಧನನ್ನು ನೆಲದ ಮೇಲೆ ಕೆಡವಿ, ಧಮ್ಕಿ ಹಾಕಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಮನೆಯ ಹೆಣ್ಣು ಮಕ್ಕಳು ಅಡ್ಡ ಬಂದರೂ ಕೇರ್​ ಮಾಡದೆ ಶಿವಾಜಿ ಆರ್ಭಟು ತೋರಿದ್ದಾರೆ. ಬಳಿಕ, ಅಷ್ಟೇ ಸಾಲದು ಅಂತಾ ಅಲ್ಲೆ ಇದ್ದ ಹಾರೆಯನ್ನು ತೆಗೆದುಕೊಂಡು ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಪಿಟಿ ಪರಮೇಶ್ವರ್ ನಾಯ್ಕ್ ಸೋದರನಿಂದ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ: ಶಾಸಕ ಪರಮೇಶ್ವರ್ ಹೇಳಿದ್ದೇನು?

ಗಂಡನಿಗೆ ಅಕ್ರಮ ಸಂಬಂಧದ ವಿಷಯ ತಿಳಿಸಿದ್ದಕ್ಕಾಗಿ ಸ್ವಂತ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮಹಿಳೆ, ಪ್ರಿಯಕರ ಬಂಧನ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ