ಪಿಟಿ ಪರಮೇಶ್ವರ್ ನಾಯ್ಕ್ ಸೋದರನಿಂದ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ: ಶಾಸಕ ಪರಮೇಶ್ವರ್ ಹೇಳಿದ್ದೇನು?
PT Parameshwar Naik : ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ತಾಂಡಾದಲ್ಲಿ ಘಟನೆ ನಡೆದಿದ್ದು, ಮನೆ ಜಾಗದ ಸಲುವಾಗಿ ಶರಣ ನಾಯ್ಕನ ಮೇಲೆ ಹಲ್ಲೆ ನಡೆದಿದೆ. ಘಟನೆ ವೀಡಿಯೋದಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ.
ದಾವಣಗೆರೆ/ವಿಜಯನಗರ: ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ.ಶಿವಾಜಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಲಕ್ಷ್ಮೀಪುರದಲ್ಲಿ ಹಾರೆಯಿಂದ ಶರಣ ನಾಯ್ಕ್ ಎಂಬುವವರ ಮೇಲೆ ಹಲ್ಲೆ ನಡೆದಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದ ನಿವಾಸಿ ಹಲ್ಲೆಗೊಳಗಾದ ವ್ಯಕ್ತಿ. ಗಾಯಾಳು ಶರಣ ನಾಯ್ಕ್ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಕಬ್ಬಿಣದ ಹಾರೆಯಿಂದ ಹಲ್ಲೆ ಮಾಡಿರುವ ಪಿ ಟಿ ಶಿವಾಜಿ: ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ತಾಂಡಾದಲ್ಲಿ ಘಟನೆ ನಡೆದಿದ್ದು, ಮನೆ ಜಾಗದ ಸಲುವಾಗಿ ಶರಣ ನಾಯ್ಕನ ಮೇಲೆ ಹಲ್ಲೆ ನಡೆದಿದೆ. ಘಟನೆ ವೀಡಿಯೋದಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ.
ಆರಂಭದಲ್ಲಿ ದೈಹಿಕವಾಗಿ ಹಲ್ಲೆ ನಡೆಸಿ, ವ್ಯಕ್ತಿಯನ್ನು ಸುಮ್ಮನಾಗಿಸಲು ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ.ಶಿವಾಜಿ ಯತ್ನಿಸುತ್ತಾನೆ. ಆ ವೇಳೆ ವೃದ್ಧನನ್ನು ನೆಲದ ಮೇಲೆ ಕೆಡವಿ,ಧಮ್ಕಿ ಹಾಕುತ್ತಾನೆ. ಹಲ್ಲೆಗೊಳಗಾದ ವ್ಯಕ್ತಿ ಮನೆಯ ಹೆಣ್ಣು ಮಕ್ಕಳು ಅಡ್ಡ ಬಂದರೂ ಕೇರ್ ಮಾಡದೆ ಶಿವಾಜಿ ಆರ್ಭಟು ತೋರಿದ್ದಾನೆ. ಬಳಿಕ, ಅಷ್ಟೇ ಸಾಲದು ಅಂತಾ ಅಲ್ಲೆ ಇದ್ದ ಹಾರೆಯನ್ನು ಉದ್ದೋಉದ್ದ ತೆಗೆದುಕೊಂಡು ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ.
ನಮಗೂ ಅವನಿಗೂ ಅನ್ಯೋನ್ಯತೆ ಇಲ್ಲ. ಹೀಗಿರುವಾಗ ನನ್ನ ಹೆಸರು ತರಬೇಡಿ- ಶಾಸಕ ಪರಮೇಶ್ವರ್ ನಾಯಕ್:
ಇನ್ನು ಘಟನೆ ಸಂಬಂಧ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಪಿ.ಟಿ. ಪರಮೇಶ್ವರ್ ನಾಯಕ್ ಸೋದರನಿಂದ ಹಲ್ಲೆ ಪ್ರಕರಣ ವಿಚಾರದಲ್ಲಿ ನನಗೂ ಈ ಘಟನೆಗೂ ಸಂಬಂಧವೇ ಇಲ್ಲ. ಬಹಳ ವರ್ಷಗಳ ಹಿಂದೆಯೇ ಆಸ್ತಿಪಾಲು ಪಡೆದುಕೊಂಡು ಅತ ದೂರ ಇದ್ದಾನೆ ಎಂದು ಹೇಳಿದ್ದಾರೆ.
ಆತ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಆಗಲಿ. ನನಗೂ ಅವನಿಗೂ ಸಂಪರ್ಕವೇ ಇಲ್ಲದಿರುವಾಗ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕುವುದು ಬೇಡ. ಅವನು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನನ್ನ ಮಗನ ವಿರುದ್ದವೇ ಚುನಾವಣೆಗೆ ನಿಂತಿದ್ದ. ನಮಗೂ ಅವನಿಗೂ ಅನ್ಯೋನ್ಯತೆ ಇಲ್ಲ. ಹೀಗಿರುವಾಗ ನನ್ನ ಹೆಸರು ಹಾಕಿ ತಳುಕು ಹಾಕಬೇಡಿ ಎಂದು ಶಾಸಕ ಪರಮೇಶ್ವರ್ ನಾಯಕ್ ತಿಳಿಸಿದ್ದಾರೆ.
ನಾನು ಎರಡು ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದೇನೆ. ಘಟನೆ ನನಗೂ ತಡವಾಗಿ ಗೊತ್ತಾಗಿದೆ. ಬಳಿಕ ನಾನು ಮಾಹಿತಿ ಪಡೆದುಕೊಂಡಿದ್ದೇನಷ್ಟೇ ಎಂದು ಸ್ಪಷ್ಟನೆ ರೂಪದಲ್ಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯಕ್ ಹೇಳಿದರು.
(Hoovina Hadagali mla pt parameshwar naik brother shivaji attacks villager over frivolous reason)
ನಿಯಮ ಉಲ್ಲಂಘಿಸಿ ಪುತ್ರನ ಮದುವೆ: ಪಿ.ಟಿ ಪರಮೇಶ್ವರ್ ನಾಯ್ಕ್ ವಿರುದ್ಧ ದಾಖಲಾಗಿಲ್ಲ FIR
Published On - 1:00 pm, Tue, 29 June 21